

ಶಿವಮೊಗ್ಗ,ಆ. 21;
ಹೊಳೆಹೊನ್ನೂರು ಉಪವಿಭಾಗದ ಘಟಕ-1 ಹೊಳೆಹೊನ್ನೂರು ಶಾಖಾ ವ್ಯಾಪ್ತಿಗೆ ಬರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹೊಳೆಹೊನ್ನೂರಿನಿಂದ ಹೊರಡುವ 11 ಕೆ.ವಿ ಮಾರ್ಗಗಳಾದ ಎಫ್-16 ಹೊಳೆಹೊನ್ನೂರು, ಎಫ್-2 ವೆಂಕಟಾಪುರ, ಎಫ್-6 ಹೊಸಕೊಪ್ಪ, ಎಫ್-4 ಮಂಗೋಟೆ, ಎಫ್-9 ಅರದೊಟ್ಲು ಮತ್ತು ಎಫ್-10 ಸಿದ್ಲಿಪುರ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 23 ರಂದು ಬೆಳಗ್ಗೆ 09 ರಿಂದ ಸಂಜೆ 06 ರವರೆಗೆ ಹೊಳೆಹೊನ್ನೂರು, ನಾಗತಿಬೆಳಗಲು ತಾಂಡ, ಹೊಸಕೊಪ್ಪ 12 ತಲ್ಲಿಕಟ್ಟೆ, ಜಂಬರಘಟ್ಟ, ಕಾಗೆಕೊಡಮಗ್ಗೆ, ಮೂಡಲವಿಠಲಾಪುರ, ಕನಸಿನಕಟ್ಟೆ, ಹೊಳೆಬೈರನಹಳ್ಳಿ, ಸುರೇಂದ್ರಗೌಡ ಕ್ಯಾಂಪ್,ಎಮ್ಮೆಹಟ್ಟಿ, ಹುಲಿಮಟ್ಟಿ ಕ್ಯಾಂಪ್, ಆಗಸನಹಳ್ಳಿ, ಸಿದ್ಲಿಪುರ, ದಾಸರಕಲ್ಲಹಳ್ಳಿ, ಸನ್ಯಾಸಿಕೊಡಮಗ್ಗೆ, ಅರದೋಟ್ಲು, ಡಣಾಯಕಪುರ, ನಾಗತಿಬೆಳಗಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಹೊಳೆಹೊನ್ನೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

