
ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನದ ಮಹಾಪೂರಕ್ಕೆ ಸಾಕ್ಷಿಯಾದದ್ದು ಡಿ.ಎಸ್. ಅರುಣ್ ಅವರ ಜನ್ಮದಿನ. ನಿನ್ನೆ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಬರೋಬ್ಬರಿ 108 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಸಾರ್ಥಕ ಜನ್ಮದಿನಾಚರಣೆಗೆ ಅಭಿಮಾನಿಗಳು ಸಾಕ್ಷಿಯಾದರು.

ಇನ್ನೊಂದು ವಿಶೇಷವೆಂದರೆ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಶ್ರೀ ಡಿ.ಎಸ್. ಅರುಣ್ ಅವರು ಇದುವರೆಗೆ 45 ಬಾರಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಮಾದರಿಯಾಗಿದ್ದಾರೆ. ಅವರ ಸೇವಾ ಮನೋಭಾವವೇ ಅಭಿಮಾನಿಗಳಿಗೂ ಸ್ಫೂರ್ತಿಯಾಗಿದೆ.

ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಮುನ್ನ ರಕ್ತದಾನ ಮಾಡಿದವರು, ಸಾಂದರ್ಭಿಕ ರಜೆ ಪಡೆದು ಶಿಬಿರಕ್ಕೆ ಆಗಮಿಸಿದವರು ಹೀಗೆ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡರು.

ಅನಿವಾರ್ಯ ಕಾರಣಗಳಿಂದ ಊರಿನಲ್ಲಿ ಇಲ್ಲದಿದ್ದವರು ಈ ಸತ್ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದು, ಅರುಣ್ ಅವರ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿಯಾಯಿತು.
ಇದು ಕೇವಲ ಜನ್ಮದಿನದ ಆಚರಣೆಯಲ್ಲ, ಮಾನವೀಯತೆ ಮತ್ತು ಸಮಾಜಸೇವೆಯ ಸಂಕಲ್ಪಕ್ಕೆ ದೊರೆತ ಅಭಿಮಾನದ ಮಹಾಪೂರವೆಂದರೆ ತಪ್ಪಾಗಲಾರದು.

ಡಿ.ಎಸ್. ಅರುಣ್ ಅವರನ್ನು ಸೇವಾ ರಾಜಕೀಯದ ಉತ್ತುಂಗದಲ್ಲಿ ನೋಡಬೇಕೆಂಬ ಎಲ್ಲರ ಆಶಯ ಈಡೇರಲಿ ಎಂದು ಮತ್ತೊಮ್ಮೆ ಹೃತ್ಪೂರ್ವಕ ಶುಭ ಹಾರೈಸೋಣ.
— ಡಿ ಎಸ್ ಅರುಣ್ ಸ್ನೇಹಿತರ ಬಳಗ
