
ತುಂಗಾತರಂಗ ಸ್ಪೆಷಲ್ ಸುದ್ದಿ
ಶಿವಮೊಗ್ಗ,ನ.20:
ಇಡೀ ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳ ಭವಿಷ್ಯ ಕಟ್ಟಿಕೊಡುವ ಶಿಕ್ಷಕರು ವಿಶೇಷವಾಗಿ ಇತ್ತೀಚಿನ ಕಾನೂನುಗಳ ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿಗಳ ನಡುವೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಷ್ಟೇ

. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೆಟ್ಟಿನಿಂತ ಸಾಕಷ್ಟು ನಿದರ್ಶನಗಳನ್ನು ನಾವು ನೋಡಿದ್ದೇವೆ. ಸಂತಸ ವ್ಯಕ್ತಪಡಿಸಿದ್ದೇವೆ.

ಪ್ರತಿ ಬಾರೀ ಸರ್ಕಾರಿ ಶಾಲೆಗಳಲ್ಲಿ ನಡೆಯುವ “ಪ್ರತಿಭಾ ಕಾರಂಜಿ” ಎಂಬ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ

ವೇದಿಕೆಯಲ್ಲಿದ್ದ ಅತಿಥಿಗಳಿಗೆ ಹಾಗೂ ಅಲ್ಲಿನ ಶಿಕ್ಷಕರಿಗೆ ಮತ್ತು ಇಡೀ ಪ್ರತಿಭಾ ಕಾರಂಜಿಯ ಪರೀಕ್ಷಕರು ಎಂದು ಹೇಳುವ ಆಯ್ಕೆದಾರರಿಗೆ ಕೊಡುವ ಕೊನೆಯ ಹಂತದ ಗಿಫ್ಟ್ ಈಗ ಯಾವುದಾದರೂ ಅತಿಥಿಗಳ, ಶಿಕ್ಷಕರ

ಮನೆಯಲ್ಲಿ ಉಳಿದುಕೊಂಡಿದೆಯಾ? ಪಬ್ಲಿಕ್ ಪ್ರಶ್ನೆ..!
ಏಕೆಂದರೆ ಅಂತಹ ಕೊಡುಗೆ ಮತ್ತು ಪ್ರತಿಭಾ ಕಾರಂಜಿ ಹೆಸರಿನ ಪ್ರಶಸ್ತಿ ಫಲಕದ ಬದಲಿಗೆ ಒಂದು ಸಣ್ಣ ಊಟದ ಬಾಕ್ಸ್ ಅನ್ನು ಅದಕ್ಕಿಂತ ಕಡಿಮೆ ಖರ್ಚಿನಲ್ಲಿ
ನೀಡಬಹುದಿತ್ತು ಎಂಬ ಅಭಿಪ್ರಾಯ ಕೆ ಬುದ್ಧಿವಂತ ಮನಸ್ಸುಗಳಿಂದ ವ್ಯಕ್ತವಾಗಿದೆ. ಆ ಗಿಫ್ಟ್ ಗಳಿಂದ ಏನು ಪ್ರಯೋಜನ ಇದೆ. ಅದನ್ನು ಅವರು ತೆಗೆದುಕೊಂಡು

ಹೋಗಿ ಮನೆಯಲ್ಲಾಗಲಿ ಶಾಲೆಯಾಗಲಿ ಇಡುತ್ತಾರಾ? ಅದು ಆ ಕ್ಷಣದ ಒಂದು ಖುಷಿ ಎನ್ನುವುದಾದರೆ ಅದಕ್ಕೆ ಖರ್ಚು ಮಾಡಿದ ಹಣ ವ್ಯರ್ಥವಲ್ಲವೇ ಎಂಬುದು ಸಾಮಾನ್ಯ ಶಿಕ್ಷಕರ ಹಾಗೂ ಸಾರ್ವಜನಿಕರ, ಪೋಷಕರ ಅಭಿಪ್ರಾಯ.


ಇನ್ನಾದರೂ ಶಿಕ್ಷಕರು, ಪಾಠ ಮಾಡುವ ಗುರುಗಳು ಬುದ್ಧಿವಂತರಾಗಲಿ, ಬಳಕೆ ಮಾಡಿಕೊಳ್ಳುವ ವಸ್ತುವನ್ನು ನೀಡುವಂತಾಗ.ಲಿ ಕನಿಷ್ಠ ಒಂದು ಪೆನ್ನಾದರೂ ನೀಡಿ ಅದು ಬಳಕೆಯಾಗುತ್ತದೆ ಅಲ್ಲವೇ.., ಗುರುಗಳಿಗೆ ಪಾಠ ಹೇಳಿದ್ದಷ್ಟೆ ಈಗಿನ ಪುಣ್ಯ…