
ಶಿವಮೊಗ್ಗ,ನ.21:
ಗಿಡಮೂಲಿಕೆಗಳು ಮತ್ತು ಔಷಧೀಯ ತೈಲಗಳ ವ್ಯಾಪಾರಕ್ಕಾಗಿ ಆಫ್ರಿಕಾದ ಕಾಂಗೋ ದೇಶಕ್ಕೆ ತೆರಳಿದ್ದ ಕರ್ನಾಟಕ ರಾಜ್ಯದ ಶಿವಮೊಗ್ಗ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ 95 ಮಂದಿ ನಕಲಿ ವೀಸಾ ಸಂಗತಿಯಲ್ಲಿ ಬಂಧಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವೀಸಾ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳು ನಕಲಿ ಎಂಬ ಆರೋಪ ಪರಿಶೀಲನೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಬಂಧನವಾಗಿದೆ ಎಂದು ಹೇಳಲಾಗುತ್ತಿದೆ.
ಸಾಂಪ್ರದಾಯಿಕ ಗಿಡಮೂಲಿಕೆ ಹಾಗೂ ಆಯುರ್ವೇದ ತೈಲಗಳ ವ್ಯಾಪಾರಕ್ಕಾಗಿ ಆಫ್ರಿಕಾ ಖಂಡದ ‘ರಿಪಬ್ಲಿಕ್ ಆಫ್ ಕಾಂಗೋ’ ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಬರೋಬ್ಬರಿ 95 ಮಂದಿ ಈಗ ಅಲ್ಲಿನ ವಲಸೆ ಅಧಿಕಾರಿಗಳ ಬಂಧನಕ್ಕೊಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಂಧನಕ್ಕೊಳಗಾದ 95 ಮಂದಿಯೂ ಕರ್ನಾಟಕದ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದವರಾಗಿದ್ದಾರೆ. ಈ ಪೈಕಿ ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್ನ 70 ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ 25 ಜನರು ಸೇರಿದ್ದಾರೆ. ಬದುಕು ಸಾಗಿಸಲು ಮತ್ತು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇವರೆಲ್ಲರೂ ಸಾಗರದಾಚೆ ವ್ಯಾಪಾರಕ್ಕೆ ತೆರಳಿದ್ದರು.

ನಕಲಿ ದಾಖಲೆ ಆರೋಪ: ಏಜೆಂಟರ ಮಹಾ ಮೋಸ!
ಪ್ರಯಾಣದ ಟಿಕೆಟ್ ಹಾಗೂ ವೀಸಾ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿದ್ದ ಮಧ್ಯವರ್ತಿಗಳು (ಏಜೆಂಟರು), ಈ ಬಡ ಬುಡಕಟ್ಟು ಜನರಿಂದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಆದರೆ, ಏಜೆಂಟರು ನಕಲಿ ದಾಖಲೆಗಳನ್ನು ನೀಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾಂಗೋ ದೇಶದ ವಲಸೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ವೀಸಾ ಹಾಗೂ ಇತರ ದಾಖಲೆಗಳು ನಕಲಿ ಎಂಬುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ 95 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ತುಂಗಾತರಂಗ ವಿಶೇಷಾಂಕದೊಂದಿಗೆ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು