filter: 0; fileterIntensity: 0.0; filterMask: 0; hdrForward: 0; highlight: true; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 37;





ಶಿವಮೊಗ್ಗ: ಹೆಚ್. ಮ್ಯಾಕ್ಸ್ ಟಿವಿ ಕನ್ನಡ ಅವರ ೩ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತುಂಗಾ ತರಂಗ ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ, ಹೊಸನಾವಿಕ ಸಂಪಾದಕ ರಾಕೇಶ್ ಡಿಸೋಜಾ, ಮಲೆನಾಡು ಸುದ್ದಿಭಾರತಿ ಸಂಪಾದಕ ಲಿಯಾಖತ್, ಮಾದ್ಯಮ ರಂಗದ ಪ್ರತಿಭೆಗಳಾದ ಸರೋಜ, ಮಂಜುನಾಥ್, ರಾಕೇಶ್, ಅರುಣ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಷ್ಟ್ರಭಕ್ತರ ಬಳಗದ ಪ್ರಮುಖ ಕೆ.ಈ.ಕಾಂತೇಶ್, ಕಾಂಗ್ರೆಸ್ ಮುಖಂಡರಾದ ಅಡ್ಡು, ಚಿರಂಜೀವಿ ಬಾಬು, ಹೆಚ್. ಮ್ಯಾಕ್ಸ್ ಟಿವಿ ಕನ್ನಡ ಬಳಗದ ಪ್ರಮುಖರು ಉಪಸ್ಥಿತರಿದ್ದರು.
ಶಿವಮೊಗ್ಗ,ಆ.11:
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ, ಫುಟ್ಪಾತ್ನ್ನು ಒತ್ತುವರಿ ಮಾಡಿಕೊಂಡು ಹಣ್ಣು ಇತರೆ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದರಿಂದ ಪಾದಚಾರಿಗಳ ಸಂಚಾರಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಸಹಕಾರದೊಂದಿಗೆ ಶಿವಮೊಗ್ಗ ಸಂಚಾರಿ ಪೊಲೀಸ್ ಇನ್ಸ್ ಸ್ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಫುಟ್ಪಾತ್ ಒತ್ತುವರಿಯನ್ನು ತೆರವುಗೊಳಿಸಿದರು.
ಈ ಮೂಲಕ ಪಾದಚಾರಿಗಳು ಫುಟ್ಪಾತ್ನಲ್ಲಿ ಸುರಕ್ಷಿತವಾಗಿ ಸಂಚರಿಸಲು ಹಾಗೂ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.



ಇದೇ ಸಂದರ್ಭದಲ್ಲಿ ಫುಟ್ಪಾತ್ ವ್ಯಾಪಾರಿಗಳಿಗೆ ಫುಟ್ಪಾತ್ನಲ್ಲಿ ಅಂಗಡಿ, ವ್ಯಾಪಾರ ಸಾಮಗ್ರಿ ಅಥವಾ ಇತರೆ ವಸ್ತುಗಳನ್ನು ಇಟ್ಟು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡದಂತೆ ಸೂಚನೆ ನೀಡಲಾಯಿತು.
ಇದು ಸಾರ್ವಜನಿಕರ ಪ್ರಶಂಸೆ ಹಾಗೂ ಶ್ಲಾಘನೆಗೆ ಪಾತ್ರವಾಯಿತು.