

ಸಾಗರ,ಆ.11:
ಎಂತ ದುರಂತ ನೋಡಿ/ ಒಂಬತ್ತನೇ ತರಗತಿ ಬಾಲಕ ನೇಣಿಗೆ ಶರಣಾಗ್ತಾನೆ… ಛೇ?!
ಅದೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಸಮೀಪದ ಶ್ರೀನಗರ ಬಡಾವಣೆಯ ಮನೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಆಕಾಶ್ (೧೪) ಎಂದು ಗುರುತಿಸಲಾಗಿದೆ.

ಸಾಗರದ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕಾಶ್, ಕೆಲ ದಿನಗಳ ಹಿಂದೆ ನೀರು ತರಲು ತೆರಳಿದ್ದಾಗ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದ ಎನ್ನಲಾಗಿದೆ.
ತೀವ್ರ ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಛೇ ಎಂತಹ ದುರಂತ ನೋಡಿ, ಯಾರಿಗೂ ಇಂತಹ ಸ್ಥಿತಿ ಬಾರದಿರಲಿ.

