ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಮಂಡಲ ವತಿಯಿಂದ ಪ್ರತಿ?ಪಿಸಿದ್ದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಇಂದು ಬೆಳಗ್ಗೆ ಅದ್ದೂರಿಯಾಗಿ ಚಾಲನೆ ದೊರೆಯಿತು.
ಬೆಳಗ್ಗೆ ೧೦.೩೦ಕ್ಕೆ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಜೊತೆಗೆ ಪೂಜಿಸಲ್ಪಟ್ಟ ಸಣ್ಣ ಗಣಪತಿಯನ್ನು ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು. ಬಳಿಕ ಉತ್ಸವ ಗಣಪನಿಗೆ ಮಂಗಳಾರತಿ ಮಾಡಲಾಯಿತು.
ನಂತರ ರಾಜಬೀದಿ ಉತ್ಸವ ಪ್ರಾರಂಭವಾಯಿತು. ಕೋಟೆ ವೃತ್ತದಲ್ಲಿ ರಾಜ ಬೀದಿ ಉತ್ಸವದ ಮೆರವಣಿಗೆಗೆ ಬೆ

ಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಎಸ್.ಕೆ. ಮರಿಯಪ್ಪ, ಎಂ. ಶ್ರೀಕಾಂತ್, ಎನ್.ಕೆ. ಜಗದೀಶ್, ಎಸ್. ಜ್ಞಾನೇಶ್ವರ್, ಕೆ.ಇ. ಕಾಂತೇಶ್, ಶರತ್ ಮರಿಯಪ್ಪ, ಮೊದಲಾದವರು ಇದ್ದರು.
ದಶಕಗಳಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವಾಹನ ಚಾಲಕರಾದ ಧನಂಜಯ್ ಅವರು ಈ ಬಾರಿ ಕೂಡ ಟ್ರ್ಯಾಕ್ಟರ್ ಚಾಲನೆ ಮಾಡಿದರು.

ಮೊದಲಿಗೆ ಹರಿಗೆಯ ಕೆಕೆ ಗೌಡ ಕುಟುಂಬದವರಿಂದ ೧೫೦ ಕೆಜಿ ತೂಕದ ಸೇಬಿನ ಹಾರ ಹಾಕಲಾಯಿತು.
ಉತ್ಸವದ ಪ್ರಯುಕ್ತ ಇಡೀ ನಗರ ಅದ್ದೂರಿಯಾಗಿ ಸಿಂಗಾರಗೊಂಡಿದ್ದು, ಪೂರ್ಣ ಕೇಸರೀಮಯವಾಗಿ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಕಲಾಕೃತಿಗಳಿಂದ ಸಾರ್ವಜನಿಕರ ಗಮನಸೆಳೆಯುತ್ತಿದೆ.
ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೆ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿವಿಧ ಕಲಾಕೃತಿಗಳನ್ನು ಅಳವಡಿಸಲಾಗಿದೆ. ಕೇಸರಿ ಬಂಟಿಂಗ್ಗಳಿಂದ ನಗರವನ್ನು ಅಲಂಕರಿಸಲಾಗಿದ್ದು, ನಗರ ಕೇಸರಿಮಯವಾಗಿ ಕಂಗೊಳಿಸುತ್ತಿದೆ.

ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ಮಾತ್ರವಲ್ಲದೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳಿಂದ ತಿಂಡಿ, ಪಾನೀಯ, ಸಿಹಿ, ಪ್ರಸಾದ, ನೀರು ಹಾಗೂ ಮಜ್ಜಿಗೆಯನ್ನು ವಿವಿಧ ಸಂಘ-ಸಂಸ್ಥೆಗಳು ಮಾಡಿದವು.
ಗಾಡಿಕೊಪ್ಪ, ಸಹ್ಯಾದ್ರಿ ಕಾಲೇಜು ಬಳಿಯ ಎಂಆರ್.ಎಸ್ ವೃತ್ತ, ಸೇರಿದಂತೆ ಗಾಂಧಿ ಬಜಾರ್, ಅಕ್ಕಮಹಾದೇವಿ ವೃತ್ತ ಸೇರಿ ವಿವಿಧೆಡೆ ಸ್ವಾಗತ ಕಮಾನು ಹಾಗೂ ವಿಶೇ? ಅಲಂಕಾರ ಮಾಡಲಾಗಿದೆ.
ಗಾಂಧಿ ಬಜಾರ್ನಲ್ಲಿ ಕಲಾವಿದ ಜೀವನ್ ಅವರ ನೇತೃತ್ವದಲ್ಲಿ ಆಂಜನೇಯನ ಬೃಹತ್ ಕಲಾಕೃತಿ ಗಮನ ಸೆಳೆದಿದೆ. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಆಂಜನೇಯ ತನ್ನ ಎದೆ ಬಗೆದು ತನ್ನ ಆರಾಧ್ಯರಾದ ಶ್ರೀರಾಮಸೀತೆಯನ್ನು ತೋರಿಸುತ್ತಿರುವ ಆಕ?ಣಿಯ ಕಲಾಕೃತಿ ಸ್ಥಾಪಿಸಲಾಗಿದೆ. ಶಿವಮೊಗ್ಗ ಹಿಂದೂ ಮಹಾಸಭಾ ದ್ವಾರದಲ್ಲಿ ಆಂಜನೇಯನ ಪಂಚಮುಖದ ದರ್ಶನ ಮಾಡಿಸಲಾಗುತ್ತಿದೆ. ಇದಕ್ಕೆ ವಿವಿಧ ಬಣ್ಣದ ವಿದ್ಯುತ್ ಅಲಂಕಾರ ನೋಡುಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

ಅದೇ ರೀತಿ ಎಎ ವೃತ್ತದಲ್ಲಿ ಶಿವಾಜಿ ಮಹಾರಾಜರಿಗೆ ಅಂಬಾಭಾವನಿ ಖಡ್ಗವನ್ನು ನೀಡುತ್ತಿರುವ ಕಲಾಕೃತಿ ಗಮನ ಸೆಳೆದಿದೆ. ವೀರ ಶಿವಮೂರ್ತಿ ವೃತ್ತದಲ್ಲಿ ಸ್ಥಾಪನೆಗೊಂಡ ಸೀಮೋಲ್ಲಂಘನೆಗೆ ಸಿದ್ಧನಾಗಿರುವ ಆಂಜನೇಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಶಿವಮೊಗ್ಗದ ಉ? ನಸಿಂಗ್ ಹೋಮ್ ವೃತ್ತದಲ್ಲಿ ಪ್ರತಿ?ಪಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಸಾರ್ವಜನಿಕರ ಆಕ?ಣೆಯಾಗಿದೆ.
ಇನ್ನು ದುರ್ಗಿಗುಡಿ ಮುಖ್ಯ ರಸ್ತೆ, ಬಿ.ಆರ್.ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಕುವೆಂಪು ರಂಗ ಮಂದಿರ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಕೋಟೆ ಠಾಣೆಯ ರಸ್ತೆ ಹೀಗೆ ಗಣಪತಿ ಮೆರವಣಿಗೆ ಸಾಗುವ ರಸ್ತೆಯಲ್ಲಿ ಕೇಸರಿ ಬಂಟಿಗ್ಸ್ ರಾರಾಜಿಸಿದವು.

ರಾಜಬೀದಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಕಾರಣ ಸಂಚಾರ ನಿಯಂತ್ರಣ ಹಾಗೂ ಭದ್ರತೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಬೇರೆ ಕಡೆ ಮಾಡಲಾಗಿದೆ. ಅಲ್ಲದೇ ಮೆರವಣಿಗೆಗಾಗಿ ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಅಂಗವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.