ಶಿವಮೊಗ್ಗ ಜಿಲ್ಲೆಯಾದ್ಯಂತ ಜೂನ್ ಮೊದಲ ವಾರದಲ್ಲಿ ಅಬ್ಬರಿಸಿದ ಜುಲೈನಲ್ಲಿ ಮಳೆರಾಯ ಕೊಂಚ ವಿರಾಮ ಕೊಟ್ಟಿದ್ದ ಆದರೆ ಈಗ ಮತ್ತೆ ವರ್ಷಧಾರೆ ಆರಂಭವಾಗಿದೆ‌.

ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೆಡೆ ಜಿಟಿ ಜಿಟಿ ಮಳೆಯಾಗಿದ್ದು, ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 7.6 ಮೀ.ಮೀ ಮಳೆಯಾಗಿದೆ.

ರೈತರು ಹೊಲಗಳಲ್ಲಿ ಜೂನ್ ಎರಡು ಹಾಗೂ ಮೂರನೇ ವಾರಗಳಲ್ಲಿ ಮೆಕ್ಕೆಜೋಳ ವನ್ನು ಬಿತ್ತನೆ ಮಾಡಿದರು. ಆದರೆ ಜುಲೈನಲ್ಲಿ ಕೈ ಕೊಟ್ಟ ಮಳೆಗೆ ಬೇಸರವಾಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಸಂಸದ ಬಿವೈಆರ್ ಬಾಗಿನ :
ಶಿಕಾರಿಪುರ ತಾಲೂಕಿನ ಜೀವನಾಡಿಯಾಗಿರುವ ಅಂಜನಾಪುರ ಜಲಾಶಯದಲ್ಲಿಂದು ಹಬ್ಬದ ಸಡಗರ.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಜೊತೆ ಬಾಗಿನ ಅರ್ಪಿಸಿದರು.
ಇದಕ್ಕೂ ಮುನ್ನ ಜಲಾಶಯದ ದಡದಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸಿದರು.
ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ, ಕೃಷಿಗೆ ಚಟುವಟಿಕೆಯ ನೀರಿಗಾಗಿ ಈ ಜಲಾಶಯವನ್ನೇ ಅವಲಂಭಿಸಲಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಬಾಗಿನ ಅರ್ಪಿಸಿದರು. ಅಂಜನಾಪುರ ಜಲಾಶಯ 1.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹೊಸನಗರ ತಾಲೂಕಿನಲ್ಲಿ ಹುಟ್ಟುವ ಕುಮದ್ವತಿ ನದಿಯು ಹರಿದು ಶಿಕಾರಿಪುರ ತಾಲೂಕಿನ ಮೂಲಕ ಹಾವೇರಿ ಜಿಲ್ಲೆಯ ಮದಗದ ಕೆರೆಗೆ ಸೇರುತ್ತದೆ. ಹೀಗೆ, ಹರಿಯುವ ಕುಮದ್ವತಿ ನದಿಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಗ್ರಾಮದ ಬಳಿ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ.ಬಾಗಿನ ಅರ್ಪಣೆ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!