ಇತ್ತೀಚೆಗೆ ಮೈದೊಳಲಿನಲ್ಲಿ ಕಳೆದ ವಾರ ಕೋತಿ ಯುವಕನ ಮೇಲೆ ದಾಳಿ ಮಾಡಿದ್ದಾಗಿನ ಚಿತ್ರಣ.
ಹೊಳೆಹೊನ್ನೂರು,ಆ.03:
ಸಮೀಪದ ಅರಹತೊಳಲಿನಲ್ಲಿ ಕೋತಿಯೊಂದು ಮನುಷ್ಯರ ಮೇಲೆ ಏಕಾಏಕಿ ಎರಗಿ ಹಲ್ಲೆ ಮಾಡುತ್ತಿದ್ದು ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.
ಕಳೆದ ಶನಿವಾರ ಸಂಜೆ ವೇಳೆಯಲ್ಲಿ ಕಪ್ಪು ಬಣ್ಣದ ಕೋತಿ (ಮುಷ್ಯ) ಹುಝೀರ್ ಎಂಬ 15 ವರ್ಷದ ಬಾಲಕನ ಮೇಲೆ ಎರಗಿ ಗಂಬೀರವಾಗಿ ಹಲ್ಲೆ ನಡೆಸಿ ಕಚ್ಚಿದೆ.

ತೀರ್ವ ಗಾಯಗೊಂಡ ಬಾಲಕನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿ ಬಾಲಕನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದರು.
ನಂತರ ಸ್ಥಳೀಯ ಆಡಳಿತದಿಂದ ಆ ಹುಚ್ಚು ಕೋತಿ (ಮುಷ್ಯ)ಯನ್ನು ಹಿಡಿಸಿ ಕಾಡಿಗೆ ಬಿಡಬೇಕು ಎಂದು ಹೇಳಿದರು.


ಆದರೆ ಇದೇ ಕೋತಿ ಕಳೆದ ಹದಿನೈದು ದಿನಗಳ ಹಿಂದೆ ಮೈದೊಳಲು ಗ್ರಾಮದಲ್ಲಿ ಇದೇ ರೀತಿ ಮನುಷ್ಯರ ಮೇಲೆ ಹಲ್ಲೆ ಮಾಡಿರುವುದು ತಿಳಿದು ಬಂದಿದೆ. ವಿಪರ್ಯಾಸವೇನೆಂದರೆ ಇದೇ ಕೋತಿ ಹಿಡಿದಿದ್ದೇವೆ ಎಂದು ಕೋತಿ ಹಿಡಿಯುವವರು ಸುಮಾರು 30 ಸಾವಿರ ರುಗಳನ್ನು ಆರ್ ಎಫ್ ಓ ರಿಂದ ಪಡೆದು ಬೇರೆ ಕೋತಿಯನ್ನು ಹಿಡಿದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೋತಿ ಚೇಷ್ಟೆಯಿಂದ ಊರಿನ ಜನರು ಮತ್ತು ಮಕ್ಕಳು ಹೆದರಿಕೊಂಡು ಹೊರಗಡೆ ಓಡಾಡದಂತೆ ಮಾಡಿದೆ.
ಆದ್ದರಿಂದ ದಯಮಾಡಿ ಈ ಹುಚ್ಚು ಕೋತಿಯನ್ನು ಆದಷ್ಟು ಬೇಗ ಅರಣ್ಯ ಇಲಾಖೆಯವರು ಹಿಡಿಸಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.