ಶಿವಮೊಗ್ಗ: ರಾಷ್ಟ್ರಭಕ್ತ ಬಳಗದ ವತಿಯಿಂದ ಹಿರಿಯ ನಾಯಕ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ಯುವ ನಾಯಕ ಕೆ.ಇ. ಕಾಂತೇಶ್ ಅವರ ನೇತೃತ್ವದಲ್ಲಿ ಕೋಟೆ ರಸ್ತೆಯ ಕೋರ್ಪಳಯ್ಯನ ಛತ್ರದ ಬಳಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಸಂಪ್ರದಾಯಬದ್ಧವಾಗಿ ಬಾಗಿನ ಅರ್ಪಣೆ ಮಾಡಲಾಯಿತು.

ಉತ್ತಮ ಮಳೆಯ ಪರಿಣಾಮವಾಗಿ ತುಂಗಾ ನದಿ ಸಮೃದ್ಧವಾಗಿ ಹರಿಯುತ್ತಿರುವ ಹಿನ್ನೆಲೆ, ನದಿಮಾತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನದಿಯು ಸದಾ ಸಮೃದ್ಧವಾಗಿ ಹರಿಯಲಿ,

ರೈತರ ಬದುಕು ಹಸನಾಗಲಿ ಹಾಗೂ ರಾಜ್ಯದಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಈಶ್ವರಪ್ಪ, ಶಾಲಿನಿ ಕಾಂತೇಶ್, ಮಹಾಲಿಂಗಶಾಸ್ತ್ರಿ, ಉಮೇಶ್ ಆರಾಧ್ಯ, ಲಕ್ಷ್ಮಿ ಶಂಕರ್ ನಾಯ್ಕ್, ಸುವರ್ಣ ಶಂಕರ್, ಈ. ವಿಶ್ವಾಸ್, ಶಿವಾಜಿ, ಬಾಲು, ಶ್ರೀಕಾಂತ್,
ಅನಿತಾ, ಜಾಥವ್, ಕುಬೇರಪ್ಪ, ಸೀತಾಲಕ್ಷ್ಮಿ, ಗುರುಶೆಟ್ಟ್, ಕೆಂಪಮ್ಮ, ಗಾರೆ ನಾಗಣ್ಣ, ಜಗ್ಗಣ್ಣ, ಸಂಧ್ಯಾ ಸೇರಿದಂತೆ ರಾಷ್ಟ್ರಭಕ್ತ ಬಳಗದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು