ಜೆಸಿಐ ಶಿವಮೊಗ್ಗ ಭಾವನ ದಿಂದ ಏಳು ದಿನಗಳ ಕಾಲ ಜೆಸಿಐ ಸಪ್ತಾಹ
ಜೆಸಿಐ ಸಂಸ್ಥೆಯ ಅಂಗಸಂಸ್ಥೆಯಾದ ಜೆಸಿಐ ಶಿವಮೊಗ್ಗ ಭಾವನ ದಿಂದ ಪ್ರತಿ ವರ್ಷದಂತೆ ಸೆಪ್ಟಂಬರ್ 9 ರಿಂದ 15 ರವರೆಗೆ ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು

ಪರಿಸರ ಜಾಗೃತಿ ಮೂಡಿಸುವುದು, ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಹಾಗೂ ಸಮಾಜದೊಂದಿಗೆ ಸಂಪರ್ಕ ಸಾಧಿಸುವುದು ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುವ ಉದ್ದೇಶದಿಂದ ಜೆಸಿಐ ವೀಕ್ ನ ಮೊದಲ ದಿನದ ಕಾರ್ಯಕ್ರಮವನ್ನು ಜೆಸಿಐ ಶಿವಮೊಗ್ಗ ಭಾವನ ಘಟಕದ ವತಿಯಿಂದ ಕಾಲಭೈರವೇಶ್ವರ ವೃದ್ಧಾಶ್ರಮದಲ್ಲಿ ಆಯೋಜನೆ ಮಾಡಿ ಆಶ್ರಮದಲ್ಲಿನ ವಯೋವೃದ್ದರಿಗೆ ಪ್ಲಾಸ್ಟಿಕ್ ಬಾಟಲ್ ತಜಿಸುವ ಸಂದೇಶದೊಂದಿಗೆ ಸ್ಟೀಲ್ ಬಾಟಲ್ ಗಳನ್ನು ವಿತರಿಸಲಾಯಿತು ಎರಡನೇ ದಿನ ಯುವನಾಯಕತ್ವ ಮತ್ತು ಧ್ವನಿ ದಿನದ ಅಂಗವಾಗಿ ಪಾಶ್ವನಾಥ ಮಹಿಳಾ ಬೋಧನಾ

ಮಹಾವಿಶ್ವವಿದ್ಯಾನಿಲಯ ದಲ್ಲಿ ಚರ್ಚಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು ಮೂರನೇ ದಿನ ಮಾನವ ಕರ್ತವ್ಯಗಳು ಹಾಗೂ ಡಿಜಿಟಲ್ ಔಟ್ ರಿಚ್ ದಿನ, ಜೆಸಿ ವಸಂತ್ ಕುಮಾರ್ ಕೆ.ವಿ ಅವರಿಂದ ಡಿ.ವಿ.ಎಸ್. ಕಾಲೇಜ್ ನಲ್ಲಿ ಮಕ್ಕಳಿಗೆ ಮಾನವ ಕರ್ತವ್ಯಗಳ ಬಗ್ಗೆ ಟ್ರೈನಿಂಗ್ ಅನ್ನು ನೀಡಲಾಯಿತು ನಾಲ್ಕನೇ ದಿನ ಬಿಜಿನೆಸ್ ಮತ್ತು ನೆಟ್ವರ್ಕ್ ಗ್ರೋಥ್ ದಿನ, ಐದನೇ ದಿನ ಸದಸ್ಯತ್ವ ದಿನ ನಮ್ಮ ಘಟಕಕ್ಕೆ ಐದು ಹೊಸ ಸದಸ್ಯರು ಸೇರ್ಪಡೆಯಾದರು 6ನೇ ದಿನ, ಫ್ಯಾಮಿಲಿ ಬೋಂಡಿಂಗ್ ದಿನ, ಕೊನೆಯ ಏಳನೇ ದಿನ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಎಲೆ ಮರಿ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಮಿತ್ರರಾದ ಹೊನ್ನಾಳಿ ಚಂದ್ರಶೇಖರ್, ಪಾರ್ಶ್ವನಾಥ ಬಿ.ಎಡ್. ಕಾಲೇಜು ಪ್ರಿನ್ಸಿಪಾಲರಾದಪ್ರಶಾಂತ್, ಸೈನಿಕರಾದ ಗೋವಿಂದ್ ರಾಜ್,

ರೈತರಾದ ರುದ್ರಪ್ಪ, ಪೌರಕಾರ್ಮಿಕರಾದ ಮಮತಾ, ಮಂಜುಳಾ, ಚಂದ್ರಶೇಖರ್ ಶುಭಂ ಹೋಟೆಲ್ ಕಾರ್ಮಿಕ ವರ್ಗದವರಾದ ಶಿಲ್ಪ , ನಯನ, ಗೌರವ ಸಮರ್ಪಣೆ ಮಾಡಲಾಯಿತು ಹೀಗೆ ಸಮಾರಂಭವು ಯಶಸ್ವಿಯಾಗಿ ಅರ್ಥಪೂರ್ಣವಾಗಿ ನಡೆಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಭಾವನ ಅಧ್ಯಕ್ಷರಾದ Jc ಕರಿಬಸಮ್ಮ ವಹಿಸಿದ್ದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹೊನ್ನಾಳಿ ಚಂದ್ರಶೇಖರ್, ವಲಯ 24ರ ವಲಯ ಉಪಾಧ್ಯಕ್ಷ ಜೆಸಿಐ ಸೆನೆಟರ್ ಕಾರ್ಕಳ ಗಣೇಶ ರಮೇಶ್ ಪೈ, ಲೇಡಿ ಜೇಸೀ ಕಾರ್ಯಕ್ರಮಗಳ ವಲಯ ಅಧಿಕಾರಿ ರೇಖಾ ರಂಗನಾಥ್, ಕಾರ್ಯದರ್ಶಿ ಜನ್ಯಾ ರಂಗನಾಥ್, ಜೆಸಿಐ ಶಿವಮೊಗ್ಗ ಭಾವನಾ ಮಾಜಿ ಅಧ್ಯಕ್ಷರು ಸದಸ್ಯರುಗಳು, ಕಾರ್ಯಕ್ರಮ ನಿರ್ದೇಶಕಿ ಗಾಯತ್ರಿ ಮಂಜುನಾಥ್ ಉಪಸ್ಥಿತರಿದ್ದರು