ಶಿಕಾರಿಪುರ.ಪಟ್ಟಣದ ಪಿಜಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯು 1ವರ್ಷದ ಕೆಳಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆಹೊಸ ತಿರುವು ಪಡೆದುಕೊಂಡಿದೆ.

ಯುವತಿಯ ಶವ ಹೂತಿಟ್ಟಿರುವ ಪ್ರಕರಣದ ಘಟನೆಯನ್ನು ಪೊಲೀಸರು ಬೆನ್ನೆತ್ತಿದ ಹಿನ್ನಲೆಯಲ್ಲಿ ಮಂಗಳವಾರ ನಾಲ್ವರನ್ನು ಬಂಧಿಸಲಾಗಿದೆ.ತಾಲೂಕಿನ ಇಟ್ಟಿಗೆಹಳ್ಳಿ ಗ್ರಾಮದ ಗಂಗಾನಾಯ್ಕ, ಶಿಕಾರಿಪುರ ಪಟ್ಟಣದ ಸೌಭಾಗ್ಯ,

ನ್ಯಾಮತಿ ತಾಲ್ಲೂಕು ಸೋಗಿಲು ಗ್ರಾಮದ ಪಿರ್ಯಾನಾಯ್ಕ,ರಂಜಿತ ಬಂಧಿತರು.ಪ್ರಕರಣದ ತನಿಖೆ ವೇಳೆ ಆಕೆಯ ಶವ ಸಾಗರ ತಾಲೂಕಿನ ಜೋಗ ಸಮೀಪದ ಅಜ್ಞಾತ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಹೂತಿಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.