ಶಿವಮೊಗ್ಗ ಜುಲೈ. 04: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಆದೇಶದಲ್ಲಿ ಎಸ್.ಸಿ /ಎಸ್.ಟಿ ಪಡಿತರ ಚೀಟಿ ಫಲಾನುಭವಿಗಳ ಮ್ಯಾಪಿಂಗ್ ಕಾರ್ಯವನ್ನು ಅತಿ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಜಿಲ್ಲೆಯ ಪಡಿತರ

ಚೀಟಿಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರು ತಮ್ಮ ಜಾತಿ ಪ್ರಮಾಣ ಪತ್ರದೊಂದಿಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಗೆ ಹೋಗಿ ಕ್ಯಾಸ್ಟ್ ಮ್ಯಾಪಿಂಗ್ನ್ನು ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನ್ಯಾಯಬೆಲೆ ಅಂಗಡಿಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿದ್ದು. ಇದುವರೆಗೆ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸದೇ ಇರುವ ಎಸ್ ಸಿ /ಎಸ್ ಟಿ ಪಡಿತರ ಚೀಟಿದಾರರು / ಕುಟುಂಬ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸುವಂತೆ ಅವರು ತಿಳಿಸಿದ್ದಾರೆ.