



ಶಿವಮೊಗ್ಗ, ಜು.03:
ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ, ಸರಳ ಸಜ್ಜನಿಕೆಯ ವ್ಯಕ್ತಿ ಸುರೇಶ್ ಕುಮಾರ್ (ಚಾಲುಕ್ಯ ಸುರೇಶಣ್ಣ) ಇಂದು ತಮ್ಮ ಬದುಕ ಕರ್ತವ್ಯ ಮುಗಿಸಿದರು.

ಆರೋಗ್ಯ ಸಮಸ್ಸೆ ಇದ್ದರೂ ಸದಾ ಲವಲವಿಕೆಯಿಂದ ಎಲ್ಲರ ಜೊತೆ ಬೆರೆಯುತಿದ್ದ ಸುರೇಶಣ್ಣ ಮಾರಿಕಾಂಭಾ ದೇವಾಲಯ ಸೇರಿದಂತೆ ಹತ್ತಾರು ದೇಗುಲಗಳ ಜವಾಬ್ದಾರಿ ಹೊತ್ತವರಾಗಿದ್ದರು
ಕ್ರೀಡೆ, ಯುವ ಮನಸುಗಳ ಜೊತೆಗೆ ಸದಾ ಹೆಜ್ಜೆ ಹಾಕುತ್ತಿದ್ದ ಸುರೇಶ್ ಕುಮಾರ್ ಇಂದು ನಿತ್ಯದ ಮನೆಯ ಪೂಜೆ ಮುಗಿಸಿ ಮದ್ಯಾಹ್ನ ಮಾರಿಕಾಂಭಾ ದೇಗುಲದ ವಿಶೇಷ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರಂತೆ.

ಸುರೇಶ್ ಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳು ಹೊರ ದೇಶದಲ್ಲಿದ್ದು, ಅವರ ಪತ್ನಿ ಮಗಳ ದೇಶಕ್ಕೆ ಹೋಗಿದ್ದರು.
ಸಂಜೆ ಐದರ ಹೊತ್ತಿಗೆ ಸುರೇಶ್ ಕುಮಾರ್ ಮನೆಯಲ್ಲಿ ಅಸ್ವಸ್ಥಗೊಂಡಿದ್ದರು., ಈ ಸಂದರ್ಭದಲ್ಲಿ ಅವರ ಅಸಪ್ತ ವಲಯ ಕೂಡಲೇ ಮೆಟ್ರೋಗೆ ಕರೆದುಕೊಂಡು ಹೋಗಿದೆ. ದುರಾದೃಷ್ಟವಶಾತ್ ಅವರು ಹೃದಯಾಘಾತಕ್ಕೊಳಗಾಗಿದ್ದಾರೆ.

ಅವರ ಮೃತ ದೇಹವನ್ನು ಆಸ್ಪತ್ರೆಯೊಂದರಲ್ಲಿಡಲು ನಿರ್ಧರಿಸಲಾಗಿದೆ. ಕುಟುಂಬ ವರ್ಗ ಬರುವ ಹಿನ್ನೆಲೆಯಲ್ಲಿ ಎರಡು ದಿನದ ನಂತರ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
