ಶಿವಮೊಗ್ಗ,ಜು.2:
ನಗರದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಮೊಮ್ಮಗ ಸ್ವಂತ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ಸಂಜೆ ನಡೆದಿರುವುದು ಶಿವಮೊಗ್ಗ ನಗರ ಸೇರಿದಂತೆ ಎಲ್ಲೆಡೆ ಹರಡಿರುವ ಗಾಂಜಾ ಮಾಫಿಯಾ ಕಾರಣ ಎಂದು ತಿಳಿದಿರುವುದು ಎಲ್ಲೆಡೆ ಆತಂಕ ಹುಟ್ಟಿಸಿದೆ.
ಮೊಮ್ಮಗ ಎನ್ನಲು ಅಸಹ್ಯವಾಗುತ್ತಿದೆ. ಘಟನೆಯಲ್ಲಿ ಅಜ್ಜಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್ ಬಿ ಸೇರಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಆರೋಪಿತ ಮೊಮ್ಮಗ ಗಾಂಜಾ ವ್ಯಸನಿಯಾಗಿದ್ದ ಎಂಬುದು ಸಾಬೀತಾಗಿದೆ. ಈ ಬಗ್ಗೆ ಅಜ್ಜಿಯು ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ವಿಷಯ ಆತನಿಗೆ ತಿಳಿದಿತ್ತು. ಇದರಿಂದ ಆಕ್ರೋಶಗೊಂಡ ಮೊಮ್ಮಗನು ರಸ್ತೆಯಲ್ಲಿಯೇ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.