ಶಿವಮೊಗ್ಗ, ಜೂನ್ 22 ಗಾಜನೂರು ಮೂಲ ಸ್ಥಾವರಕ್ಕೆ ಮೆಸ್ಕಾಂ ಇಲಾಖೆಯ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಕಾರಣದಿಂದಾಗಿ ಜೂನ್ 23 ರಂದು ಮೆಸ್ಕಾಂ ವತಿಯಿಂದ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ಜೂನ್ 23 ಮತ್ತು 24 ರಂದು ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಈ ಪರಿಸ್ಥಿತಿಯನ್ನು ಅರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊAದಿಗೆ ಸಹಕರಿಸಬೇಕಾಗಿ ಶಿವಮೊಗ್ಗದ ಕನನೀಸ ಮತ್ತು ಒಳ ಮಂಡಳಿ ನಿರ್ವಹಣೆ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.