ಶಿವಮೊಗ್ಗ, ಜೂ.22:
ಎರಡು ದಿನದ ಹಿಂದಷ್ಟೇ ತುಂಗಾತರಂಗ ದಿನಪತ್ರಿಕೆ ಶಿವಮೊಗ್ಗ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯ ಮೆಸ್ಕಾಂ ಜಂಕ್ಷನ್ ಬಾಕ್ಸ್ ಓಪನ್ ಆಗಿದ್ದು, ಅದರಿಂದ ಅಪಾಯದ ಸೂಚನೆ ಇದೆ ಎಂಬ ಸುದ್ದಿಯನ್ನು ಬರೆಯುವ ಜೊತೆಗೆ ಮೆಸ್ಕಾಂ ನವರು ಮಲಗಿಕೊಂಡಿದ್ದಾರೆ ಎಂದು ಒಂದಿಷ್ಟು ಎಚ್ಚರಿಸುವ ಕಾರ್ಯ ಮಾಡಿತ್ತು.
ಆನಂತರ ತುಂಗಾತರಂಗ ದಿನಪತ್ರಿಕೆ ಬಹಳಷ್ಟು ಕಡೆ ಇಂತಹ ಜಂಕ್ಷನ್ ಬಾಕ್ಸ್ ಗಳು ತೆರೆದಿರುವುದು ಕಂಡು ಸುದ್ದಿಯನ್ನು ಮುಂದುವರಿಸುವ, ನಿರಂತರವಾಗಿ ಇಂತಹ ವಿಷಯಗಳ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆಯುವ ಯೋಚನೆಯನ್ನು ಮಾಡಿತ್ತು.
ಆದರೆ ಮೆಸ್ಕಾಂನ ಅಧಿಕಾರಿಗಳು ಕೂಡಲೇ ಎಂಬಂತೆ ಶಿವಮೊಗ್ಗ ನಗರದ ದುರ್ಗಿಗುಡಿ ಹಾಗೂ ಇತರ ಭಾಗಗಳಲ್ಲಿ ಎಲ್ಲಾ ಜಂಕ್ಷನ್ ಗಳನ್ನು ವೀಕ್ಷಿಸುವ ಜೊತೆಗೆ ಭದ್ರವಾಗಿ ಮುಚ್ಚಿದ್ದಾರೆ. ನಿಜಕ್ಕೂ ಇದು ಅಭಿನಂದನಾ ಕಾರ್ಯ ಅಪಾಯದ ಸೂಚನೆಯನ್ನು ನೀಡಿದಷ್ಟೇ ಪತ್ರಿಕೆ ಕೆಲಸ.
ಮೆಸ್ಕಾಂ ಕಾರ್ಯಕ್ಕೆ ತುಂಗಾ ತರಂಗ ದಿನಪತ್ರಿಕೆ, ದುರ್ಗಿಗುಡಿ ವರ್ತಕರು, ಸಾರ್ವಜನಿಕರು ಅಭಿನಂದಿಸಿದ್ದಾರೆ.