ಶಿವಮೊಗ್ಗ, ಜೂ.22:
ದಿನಾಂಕ 12/06/2026 ರಂದು ಮದ್ಯಾಹ್ನ 02-00 ಪಿಎಂ ಗಂಟೆಯಿಂದ ದಿನಾಂಕ 17/06/2026 ರಂದು ಬೆಳಗ್ಗೆ 05-30 ಎಎಂ ಗಂಟೆಯ ಸಮಯದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಡಾವಣೆ ಬೊಮ್ಮನಕಟ್ಟೆ ಡಿ ಬ್ಲಾಕ್ ನಲ್ಲಿರುವ ಮನೆ ನಂ 246 ರಲ್ಲಿ 60.7 ಗ್ರಾಂ ಬಂಗಾರದ ಆಭರನಗಳು, 60 ಗ್ರಾಂ ಬೆಳ್ಳಿಯ ವಸ್ತುಗಳು, 5 ಸಾವಿರ ನಗದು ಹಣವನ್ನು ಯಾರೋ ಕಳ್ಳರು ಮನೆಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪಿರ್ಯಾದುದಾರರಾದ ರಾಮು ಜಿ ಬಿನ್ ಲೇಟ್ ಗೋಪಾಲ 40 ವರ್ಷ ವಾಸ ಮನೆ ನಂ 246 ಡಿ ಬ್ಲಾಕ್ ಆಶ್ರಯ ಬಡಾವಣೆ ಬೊಮ್ಮನಕಟ್ಟೆ ಶಿವಮೊಗ್ಗ ಟೌನ್ ಅವರು ದಿನಾಂಕ 17/06/2026 ರಂದು ಬೆಳಗ್ಗೆ 07-30 ಎಎಂ ಗಂಟೆಗೆ ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಸಿ ಆರ್ ನಂ 122/2026 ಕಲಂ 331(3),331(4), 305 ಬಿಎನ್ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಈ ಮೇಲ್ಕಂಡ ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ ಬಂಗಾರದ ಆಭರಣಗಳು, ಬೆಳ್ಳಿಯ ವಸ್ತುಗಳು ಮತ್ತು ನಗದು ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ನಿಖಿಲ್ ಬಿ. ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಸಂತೋಷಕುಮಾರ್ ಡಿ.ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ರಾಜು ಕೆ ಆರ್ ಸಿಪಿಸಿ 1074, ಮಲ್ಲಪ್ಪ ಎಸ್ ಜಿ ಸಿಪಿಸಿ 1174, ಅರುಣಕುಮಾರ್ ಎನ್ ಕೆ ಸಿಪಿಸಿ 1543, ಮನುಶಂಕರ ಸಿಪಿಸಿ 1556, ರವರ ತಂಡ ರಚಿಸಲಾಗಿರುತ್ತದೆ.

ಸದರಿಯವರು ಆರೋಪಿತರ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದ 1) ರವಿ @ ಬೆಕ್ಕು @ ರವಿನಾಯ್ಕ್ 27 ವರ್ಷ ಆಶ್ರಯ ಬಡಾವಣೆ ಶಿವಮೊಗ್ಗ ಟೌನ್ 2) ಗಣೇಶ್ @ ಗಣಿ 26 ವರ್ಷ ಆಶ್ರಯ ಬಡಾವಣೆ ಬೊಮ್ಮನಕಟ್ಟೆ ಶಿವಮೊಗ್ಗ ಟೌನ್ ಇವರುಗಳನ್ನು ಬಂಧಿಸಿ ಅವರು ಕಡೆಯಿಂದ ಪ್ರಕರಣದಲ್ಲಿ *ಕಳವು ಮಾಡಿಕೊಂಡು ಹೋದ 51 ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಾಜು ಬೆಲೆ 6 ಲಕ್ಷ ರೂ ಮತ್ತು 27 ಗ್ರಾಂ ಬೆಳ್ಳಿಯ ಕಾಲ ಬಳೆ ಅಂದಾಜು ಬೆಲೆ 4,000/- ರೂ ಒಟ್ಟು ಮೌಲ್ಯ 6,04,000/- ರೂ ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ., ಐ.ಪಿ.ಎಸ್ ಅವರು ಶ್ಲಾಘಿಸಿರುತ್ತಾರೆ.