ಶಿವಮೊಗ್ಗ,ಜೂ.12:
ತೀರ್ಥಹಳ್ಳಿ ಜನತೆಯಲ್ಲಿ ಸುಮಾರು 8 ದಶಕಗಳಿಂದ ಮನೆ ಮಾತಾಗಿರುವ, ರಾಜ್ಯದಲ್ಲೇ ಚಿರಪರಿಚಿತ ನಂಬಿಕೆಯ ಬ್ರ್ಯಾಂಡ್ ಎಂದೇ ಹೆಸರಾದ, ಕಳೆದ ಎರಡು ದಶಕಗಳಿಂದ ಚಿನ್ನಾಭರಣ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ನ ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ತನ್ನ ಷೋ ರೂಂ ಅನ್ನು ಜೂ.14ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ.ಹೆಚ್. ರಸ್ತೆಯಲ್ಲಿರುವ ವಿನಾಯಕ ಮಾಲ್ ಎದುರು ಆರಂಭವಾಗಲಿದೆ ಎಂದು ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ನ ಪಾಲುದಾರರಾದ ಯೂಸುಫ್ ಹೈದರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಷೋ ರೂಂ ಅನ್ನು ನ್ಯಾಷನಲ್ ಗ್ರೂಪ್ನ ಸ್ಥಾಪಕ ಹಾಜಿ ಶೇಖ್ ಅಹ್ಮದ್ ಉದ್ಘಾಟಿಸಲಿದ್ದು, ಸಮಾಜ ಪ್ರಮುಖ ಗಣ್ಯರು ಮತ್ತು ಫ್ಯಾಷನ್ ಪ್ರಿಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಗ್ರಾಹಕರ ಅಪೇಕ್ಷೆ ಮೇರೆಗೆ ಶಿವಮೊಗ್ಗದಲ್ಲಿ ಷೋ ರೂಂ ಆರಂಭಿಸುತ್ತಿದ್ದು, ಗ್ರಾಹಕರ ಅನುಕೂಲಕ್ಕಾಗಿ ಮೂರು ಅಂತಸ್ತುಗಳ ವೈಶಿಷ್ಟ ಪೂರ್ಣ ವಿಶಾಲವಾದ, ಸುಸಜ್ಜಿತ, ಸಂಪೂರ್ಣ ಹವಾ ನಿಯಂತ್ರಿತ ಷೋ ರೂಂ ಹೊಂದಿದೆ. ನೆಲ ಮತ್ತು ಪ್ರಥಮ ಅಂತಸ್ತಿನಲ್ಲಿ ರೆಗ್ಯೂಲರ್ ವೇರ್, ಲೈಟ್ವೇಟ್ ಆಭರಣಗಳನ್ನು ಹಾಗೂ ಆ್ಯಂಟಿಕ್ ಮತ್ತು ಮದುವೆ ಆಭರಣಗಳ ಸಂಗ್ರಹ, ವಜ್ರಾಭರಣ, ಮುತ್ತುರತ್ನ ಖಚಿತ ಅಮೂಲ್ಯ ಆಭರಣಗಳಿವೆ. ಎರಡನೇ ಅಂತಸ್ತಿನಲ್ಲಿ ಸೂಕ್ತವಾದ ಉಡುಗೊರೆಗಳು, ಆ್ಯಂಟಿಕ್ ಬೆಳ್ಳಿ ಆಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳ ಅನನ್ಯ ಸಂಗ್ರಹ ಮತ್ತು ವಿಶ್ವವಿಖ್ಯಾತ ಪ್ರಸಿದ್ದ ಬ್ರಾಂಡ್ಗಳ ವಾಚ್ಗಳನ್ನು ಪ್ರದರ್ಶಿಸಲಾಗಿದೆ ಎಂದರು.
ಶುಭಾರಂಭದ ಕೊಡುಗೆ : ಶೋ ರೂಂನ ಶುಭಾರಂಭದ ಪ್ರಯುಕ್ತ ಖಚಿತ ಉಚಿತ ಉಡುಗೊರೆಗಳಿದ್ದು, ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಬಹುಮಾನಗಳಿದ್ದು, ಜೂ.14 ರಿಂದ 28 ರವೆಗೆ ಈ ಕೊಡುಗೆ ಇದೆ. 1.50 ಲಕ್ಷ ಮೇಲ್ಪಟ್ಟ ಖರೀದಿಗೆ ಉಚಿತ ಚಿನ್ನದ ನಾಣ್ಯ, 30 ಸಾವಿರ ಮೇಲ್ಪಟ್ಟ ಖರೀದಿಗೆ ಉಚಿತ ಬೆಳ್ಳಿಯ ನಾಣ್ಯ, ಹತ್ತು ಸಾವಿರ ಮೇಲ್ಪಟ್ಟ ಖರೀದಿಗೆ ಆಕರ್ಷಕ ಗೃಹೋಪಕರಣ ನೀಡಲಾಗುತ್ತದೆ ಎಂದರು.

ವಿಶೇಷ ರಿಯಾಯಿತಿ : ವಜ್ರಾಭರಣ ಖರೀದಿಗೆ ಪ್ರತಿ ಕ್ಯಾರೆಟ್ಗೆ 12 ಸಾವಿರ ಬೆಳ್ಳಿ ಆಭರಣ, ಸಾಮಾಗ್ರಿ ಖರೀದಿಗೆ ಪ್ರತಿ ಕೆಜಿಗೆ 15000 ರೂ ರಿಯಾಯಿತಿ ಮತ್ತು ವಾಚ್ ಗಳ ಮೇಲೆ ಶೇ.5 ರಿಂದ 10 ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಮೆಗಾ ಲಕ್ಕಿ ಡ್ರಾ : ಸೆ.14ರ ವರೆಗೆ 5000 ಮೇಲ್ಪಟ್ಟ ವಾಚ್ ಖರೀದಿಯೊಂದಿಗೆ ಒಂದು ಉಚಿತ ಕೂಪನ್ ನೀಡಲಾಗುವುದು. ಕೂಪನ್ ವಿಜೇತರಿಗೆ ರಾಯಲ್ ಎನ್ಫಿಲ್ಡ್ ಬುಲೆಟ್ ಹಾಗೂ ಸಾಪ್ತಾಹಿಕವಾಗಿ ಜೂ.21 ರಿಂದ 28ರ ವರೆಗೆ 10 ಸಾವಿರ ರೂ. ಚಿನ್ನಾಭರಣ ಅಥವಾ ಬೆಳ್ಳಿ ಖರೀದಿಗೆ ಉಚಿತ ಕೂಪನ್ಗೆ ಟಿವಿಎಸ್ ಜ್ಯೂಪಿಟರ್ ಸ್ಕೂಟರ್ ಗೆಲ್ಲುವ ಅವಕಾಶ ಇದೆ ಎಂದರು.

ಸಾಮಾಜಿಕ ಸ್ಪಂದನೆ : ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಕಳೆದ 8 ವರ್ಷದಿಂದ ಸುಮಾರು 80 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಅಲ್ಲದೇ ಕ್ರೀಡೆ, ಆರೋಗ್ಯಕ್ಕೆ ಸಾಮಾಜಿಕ ಸ್ಪಂದನೆ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಶರೀಪ್ ಅಬ್ದುಲ್ ರೆಹಮಾನ್, ಇಮ್ರಾಹಿಂ ಷರೀಫ್, ಸುಲೇಮಾನ್ ಉಪಸ್ಥಿತರಿದ್ದರು.