ಶಿವಮೊಗ್ಗ, ಜ.31:
ನಿಮ್ಮ ತುಂಗಾ ತರಂಗ ದಿನಪತ್ರಿಕೆ ಇಲ್ಲಿವರೆಗೂ ಸಮಾಜದ ಹಿತಕ್ಕಾಗಿ ಸಾಕಷ್ಟು ಪ್ರಮುಖ ಸುದ್ದಿಗಳನ್ನು ಧೈರ್ಯವಾಗಿ ನೀಡುತ್ತಾ ಬಂದಿದ್ದು, ಓದುಗ ದೊರೆಗಳು ಹಾಗೂ ಸಾರ್ವಜನಿಕರಿಂದ ಅತ್ಯಂತ ವಿಶ್ವಾಸದ ಹಾಗೂ ಪತ್ರಿಕೆಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಸಂತಸದ ವಿಚಾರ.
ಜನವರಿ 30ರ ನಿನ್ನೆ ತುಂಗಾತರಂಗ ದಿನಪತ್ರಿಕೆ ನೀಡಿದ್ದ “ತರಳಬಾಳು ಹುಣ್ಣಿಮೆ ಮಹೋತ್ಸವದ ವಿಚಾರದಲ್ಲಿ ತುಂಬಾ ಹತ್ತಿರದವರನ್ನೇ ಹೊರಗಿಟ್ಟಿದ್ದಾರೆ” ಎಂಬ ಗಂಭೀರ ಆರೋಪವನ್ನು ಸಾರ್ವಜನಿಕ ವಲಯದ ಹಾಗೂ ಪ್ರಮುಖರ ಮಾಹಿತಿ ಆಧರಿಸಿ ನೀಡಿತ್ತು.
ನಿನ್ನೆ ಬೆಳಿಗ್ಗೆ ಈ ಸುದ್ದಿ ತುಂಗಾತರಂಗ (tungataranga.com) ವೆಬ್ ಜಾಲತಾಣದಲ್ಲಿ ಕಂಡು ಬಂದ ಕೂಡಲೇ ಅಪಾರ ಸಂಖ್ಯೆಯ ಸಮಾಜದ ಪ್ರಮುಖರು ಪ್ರತಿಕ್ರಿಯಿಸಿದರು.
ಅದರಲ್ಲಿ ಮೂವರು ಮಾತ್ರ ಸಮಾಜದ ವಿಷಯದಲ್ಲಿ ಇದು ಅನಗತ್ಯವಾಗಿತ್ತು ಎಂದರು. ಆದರೆ ಉಳಿದವರು ಇದೊಂದು ಗಂಭೀರವಾದ ವಿಷಯವೇ ಹೌದು. ಮಠದ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಸಮರ್ಪಿಸಿಕೊಂಡವರನ್ನು ಆತ್ಮೀಯವಾಗಿ ಕರೆಯುವ ನಿಟ್ಟಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಿತಿ ಕ್ರಮಕೈಗೊಳ್ಳಬೇಕಿತ್ತು ಎಂದು ಹೇಳಿದ್ದನ್ನು ಸರಿ ಎಂದು ಪ್ರತಿಪಾದಿಸಿದ್ದು ವಿಶೇಷವೇ ಹೌದು.
ತುಂಗಾ ತರಂಗ ದಿನಪತ್ರಿಕೆ ಯಾವುದೇ ಕಾಲದಲ್ಲೂ ಯಾವುದೇ ಕ್ಷಣದಲ್ಲೂ ಸಮಾಜದ ಹಾಗೂ ಸರ್ವರ ಹಿತ ಚಿಂತನೆಯ ಉದ್ದೇಶ ಹೊಂದಿದೆ. ಯಾವುದೇ ದುರುದ್ದೇಶವಿಲ್ಲದ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಇಂತಹ ಮನೋಭಾವ ಬೆಳೆಯಲು ಪತ್ರಿಕೆಯ ಓದುಗ ದೊರೆಗಳ ಆಶಯ ಹಾಗೂ ಆಶೀರ್ವಾದವೇ ಕಾರಣ ಎಂದು ಅತ್ಯಂತ ವಿಶೇಷವಾಗಿ ಹೇಳಿಕೊಳ್ಳುತ್ತಿದ್ದೇವೆ.
ಒಟ್ಟಾರೆ ಎಲ್ಲರನ್ನೂ ಗುರುತಿಸುವ ಎಲ್ಲರ ಜೊತೆ ಸಮಾಜದ ಕಾರ್ಯಗಳನ್ನು, ಸಾರ್ವಜನಿಕರ ಹಿತ ಚಿಂತನೆಯನ್ನು ಮಾಡುವುದು ಒಳ್ಳೆಯದು ಎಂಬುದಷ್ಟೇ ನಮ್ಮ ಅಭಿಪ್ರಾಯ ಅನಗತ್ಯವಾದ ಚರ್ಚೆಯ ಉದ್ದೇಶ ನಮ್ಮದಲ್ಲ ಒಳ್ಳೆಯದಾಗಲಿ ಎಂಬುದಷ್ಟೇ ತುಂಗಾತರಂಗ ಪತ್ರಿಕೆಯ ಕಳಕಳಿ.