ಕೇಕ್ ತಯಾರಿಕಾ ಘಟಕಗಳ ಮೇಲೆ ಉಪ ವಿಭಾಗಾಧಿಕಾರಿ ಸತ್ಯಾನಾರಾಯಣ ನೇತೃತ್ವದ ತಂಡ ದಾಳಿ ಶಿವಮೊಗ್ಗ, ಡಿ.೩೧:
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಕೇಕ್ ತಯಾರಿಕಾ ಘಟಕಗಳ ಮೇಲೆ ಉಪ ವಿಭಾಗಾಧಿಕಾರಿ ಸತ್ಯಾನಾರಾಯಣ ನೇತೃತ್ವದ ತಂಡ ರವೀಂದ್ರ ನಗರದಲ್ಲಿರುವ ಕೇಕ್ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿ ಮಾಲೀಕರಿಗೆ ನೊಟೀಸ್ ನೀಡಲಾಗಿದೆ.
ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆ ಶಿವಮೊಗ್ಗದ ಎರಡು ಕೇಕ್ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆವು ಎಂದು ಉಪ ವಿಭಾಗಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ತಪಾಸಣೆ ನಡೆಸಿದ ವೇಳೆ ಅಶುಚಿಯಾದ ವಾತಾವರಣ ಮತ್ತು ಅವಧಿ ಮುಗಿದಿರುವ ಕಚ್ಚಾ ವಸ್ತುಗಳು ಪತ್ತೆಯಾಗಿವೆ. ನಿಯಮ ಉಲ್ಲಂಘಿಸಿದ ಘಟಕಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ದಾಳಿಯಲ್ಲಿ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪ ನಿರ್ದೇಶಕ ಅವಿನ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಇತರರು ಭಾಗವಹಿಸಿದ್ದರು.