ಶಿವಮೊಗ್ಗ, ಜ.೦೧:
ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆ ಸಂಸ್ಕಾರವನ್ನು ನೀಡಿದಾಗ ಭವಿಷ್ಯದಲ್ಲಿ ದೇಶದ ಹಾಗೂ ಸಮಾಜದ ಶಕ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ ಹೇಳಿದರು.
ಇಂದು ಶಿವಮೊಗ್ಗ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ಶಾಲೆಯಲ್ಲಿ ಆಯೋಜಿಸಿದ್ದ ಜನ್ಮದಾತರಿಗೆ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಜ್ಞಾನ ಹಾಗೂ ಭಾಗ್ಯದ ಕ್ಷಣವನ್ನು ಬಳಸಿಕೊಂಡು ದೇಶಕ್ಕೆ ಒಂದು ದೊಡ್ಡ ಶಕ್ತಿಯಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂದು ನಮಗೆ ಸರಿಯಾದ ಗುರಿಯಿಲ್ಲ ಗುರು ಇಲ್ಲ ಎಂಬಂತಹ ಪರಿಸ್ಥಿತಿ ಕೆಲವೆಡೆ ನಿರ್ಮಾಣವಾಗಿದೆ ಅದು ನಮ್ಮ ದುರಂತ ನಾವು ಸರಿಯಾದ ಗುರಿ ಹಾಗೂ ಗುರುವನ್ನು ಹೊಂದಬೇಕು ಆ ನಿಟ್ಟಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಸ್ವಾಗತಾರ್ಹ ಎಂದರು.
ನಮ್ಮ ಭೂಮಿ ಪವಿತ್ರವಾದದ್ದು ಇಲ್ಲಿನ ಆಧ್ಯಾತ್ಮಿಕ ಸಂಪತ್ತು ಹಾಗೂ ಸಾಂಸ್ಕೃತಿಕ ಪರಂಪರೆ ನಿಜಕ್ಕೂ ನಮ್ಮ ಯುವಶಕ್ತಿಯನ್ನು ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿ ಬಳಸುತ್ತಿದೆ. ಮಕ್ಕಳು ತಂದೆ ತಾಯಿಯ ಅಶೋತ್ತರಗಳನ್ನು ಪೂರೈಸುವಲ್ಲಿ ಎಷ್ಟು ಕಷ್ಟಪಟ್ಟಿರುತ್ತಾರೆ ಎಂಬುದನ್ನು ಗಮನಿಸುವ ಅಗತ್ಯವಿರುತ್ತದೆ ಅದನ್ನು ಕಲಿಸಿ ಕೊಡುವ ನಿಟ್ಟಿನಲ್ಲಿ ಪಾದಪೂಜೆ ಅಂತ ಕಾರ್ಯಕ್ರಮ ಒಂದು ಪೂರಕ ಹಾಗೂ ಪ್ರೇರಕ ಎಂದರು.
ಯಾರೇ ಆಗಲಿ ನಿಮ್ಮ ಬದುಕಿನಲ್ಲಿ ನಿಮಗೆ ಸಹಾಯ ಹಾಗೂ ಸಹಕಾರ ಮಾಡಿದವರನ್ನು ನೀವು ಮುಂದೆ ನಿಮ್ಮ ಸ್ವಂತ ಕಾಲ ಮೇಲೆ ನಿಂತಾಗ ಅವರೆಲ್ಲರ ಋಣ ತೀರಿಸುವ ಹೊಣೆಗಾರಿಕೆ ನಮ್ಮಲ್ಲಿ ಬೆಳೆಯಬೇಕು ನಮಗೆ ಈ ಬದುಕನ್ನು ಕಟ್ಟಿಕೊಳ್ಳಲು ಬೆಳೆಸಿದ ಯಾವುದೇ ವ್ಯಕ್ತಿಯನ್ನಾಗಲಿ ಸಂಘ ಸಂಸ್ಥೆಯನ್ನಾಗಿ ಶಾಲೆಗಳನ್ನಾಗಲಿ ಶಿಕ್ಷಕರನಾಗಲಿ ನಾವು ಸದಾ ಸ್ಮರಿಸುವುದು ಅತ್ಯಗತ್ಯ ಎಂದರು.
ನಾನು ನನ್ನ ಜೀವನದಲ್ಲಿ ೩೩ ವರ್ಷಗಳ ಕಾಲ ಸಾಕಷ್ಟು ಶಾಲಾ-ಕಾಲೇಜುಗಳಿಗೆ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ ಆದರೆ ಈ ಗುರುಕುಲದ ವಿಶಿಷ್ಟತೆ ನಿಜಕ್ಕೂ ಶ್ಲಾಘನೀಯ ವರ್ಷಗಳಿಂದ ಇಂತಹ ಪಾದಪೂಜೆ ನಡೆಯುತ್ತಿರುವುದು ಮೆಚ್ಚುಗೆಯ ವಿಷಯ ನಾವು ನಮ್ಮ ಜೀವನದಲ್ಲಿ ತಂದೆ ತಾಯಿಯರ ದೇವರ ಸಮಾಜದ ಹಾಗೂ ಗುರುವಿನ ಋಣವನ್ನು ತೀರಿಸಬೇಕು ಈ ಚತುರ್ ಸ್ವರಗಳಲ್ಲಿ ಬದುಕನ್ನು ರೂಪಿಸಿಕೊಂಡಾಗ ಬದುಕು ಪರಿಪೂರ್ಣವಾಗುತ್ತದೆ ಎಂದರು.
ರಾಮಕೃಷ್ಣ ಪಿಯು ಕಾಲೇಜಿಗೆ ಶ್ರೀ ಪ್ರಸನ್ನನಾಥ ಸ್ವಾಮೀಜಿ ನಾಮಪಲಕ ಅನಾವರಣ:
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ೨೦೨೬-೨೭ರ ಸಾಲಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ನಡೆಸಲು ಉದ್ದೇಶಿಸಿರುವ ರಾಮಕೃಷ್ಣ ಪದವಿ ಪೂರ್ವ ಕಾಲೇಜಿಗೆ ಕಾಲೇಜಿನ ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ರೂಗಾರಿಯಾಗಿದ್ದ ರಾಮಕೃಷ್ಣ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶೋಭಾ ಆರ್ ವೆಂಕಟರಮಣ ಮಾತನಾಡಿ, ಕೇವಲ ಎರಡು ಮಕ್ಕಳಿಂದ ಆರಂಭಗೊಂಡ ವಿದ್ಯಾ ಸಂಸ್ಥೆ ಈಗ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಬೆಳೆಸುತ್ತಿದೆ ಇದಕ್ಕೆ ಸಂಸ್ಥಾಪಕರಾದ ಡಿ.ಎಂ.ವೆಂಕಟರಮಣ ಅವರ ಕೊಡುಗೆ ಅಪಾರವಾದದ್ದು ಅವರು ತೋರಿದ ಹಾದಿಯಲ್ಲಿ ಇಂದು ಸಂಸ್ಥೆ ಪಿಯು ಕಾಲೇಜನ್ನು ಸಹ ಆರಂಭಿಸಲು ಮುಂದಾಗಿದೆ ಎಂದರು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಇದೇ ರಾಮಕೃಷ್ಣ ವಿದ್ಯಾನಿಕೇತನದ ಹಿರಿಯ ಸಾಧಕ ವಿದ್ಯಾರ್ಥಿ, ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಆಡಳಿತ ಸಹಾಯಕರಾಗಿರುವ ಆಕಾಶ್ ಟಿ.ಎಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ ಎಂ. ದೇವರಾಜ್ ಮಾತನಾಡಿದರು. ಬಾಲಕ ಹಾಗೂ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಆದರ್ಶ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರಾದ ತೀರ್ಥೇಶ್ ಹಾಗೂ ಎ ವೆಂಕಟೇಶ್ ಅವರು ಪರಿಚಯಿಸಿದರು. ಅವರಿಗೆ ಸನ್ಮಾನಿಸಲಾಯಿತು.
ವಿದ್ಯಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ|| ಡಿ.ಆರ್ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕೋ ಆರ್ಡಿನೇಟರ್ ಗಳಾದ ಶರತ್ಕುಮಾರ್ ಹಾಗೂ ಕೆ ಎಸ್ ಅರುಣ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.