ಶ್ರೀ
ಕರ್ನಾಟಕದಲ್ಲಿ ಆವ್ಯಾಹತವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ತಿಳಿದು ಮಹಾರಾಷ್ಟ್ರದ ಪೊಲೀಸರು ಕರ್ನಾಟಕಕ್ಕೆ ಆಗಮಿಸಿದ್ದಾರೆ ಆದರೆ ಕರ್ನಾಟಕದ ಪೋಲಿಸ್ ಹಾಗು ಗೃಹ ಇಲಾಖೆ ಏನು ಮಾಡುತ್ತಿದೆ.

ಅತ್ಯಂತ ವ್ಯಾಪಕವಾಗಿ ಹಾಗೂ ವ್ಯವಸ್ಥಿತವಾಗಿ ಕರ್ನಾಟಕದಲ್ಲಿ ಡ್ರಗ್ಸ್ ದಂದೆ ನಡೆಯುತ್ತಿದ್ದು ಅದನ್ನು ನಿಯಂತ್ರಿಸುವಲ್ಲಿ ಕರ್ನಾಟಕದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಹಾಗಾಗಿ ಈ ಸರ್ಕಾರ ಡ್ರಗ್ಸ್
ಫಡ್ಲರ್ಗಳ ಕೈಯಲ್ಲಿ ಸಿಲುಕಿದೆ ಎಂದು ಮಾನ್ಯ ಮಾಜಿ ಗೃಹ ಸಚಿವರಾದ
ಶ್ರೀ ಆರಗ ಜ್ಞಾನೇಂದ್ರ ಅವರು ಮಾಧ್ಯಮದ ಮುಂದೆ ಕರ್ನಾಟಕ ಸರ್ಕಾರ ದ ವಿರುದ್ಧ ತೀರ ವಾಗ್ದಾಳಿ ನಡೆಸಿದರು.

ಯುವ ಸಮೂಹ ಇಂದು ಕರ್ನಾಟಕದಲ್ಲಿ ಡ್ರಗ್ಸ್,ಗಾಂಜಾ ಅಫಿಮುಗಳಂತಹ ಮಾದಕ ವಸ್ತುಗಳಿಂದ ದಾರಿ ತಪ್ಪುತ್ತಿದ್ದಾರೆ ಯುವಕರನ್ನು ಸರಿಯಾದ ದಾರಿಗೆ ತರಬೇಕಾದ ಕರ್ತವ್ಯ ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣಿಸುತ್ತಿಲ್ಲ.
ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ತಿಳಿಸಿದ್ದಾರೆ.