ಶಿವಮೊಗ್ಗ” ಕೊರೊನಾದ ಸಂಕಷ್ಟದ ಅವಧಿ ಯಲ್ಲೂ ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕೆಲವು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದು ಗಮನಾರ್ಹ ಸಂಗ ತಿಯೇ ಹೌದು. ಸಂಸದ ಬಿ.ವೈ.ರಾಘ ವೇಂದ್ರ ಅವರ ಪರವಿರುದ್ಧದ ಮಾತು ಗಳನ್ನು ಒತ್ತಟ್ಟಿಗಿಟ್ಟು ಯೋಚಿಸುವು ದಾದರೆ ತುಂಬಾ ವರ್ಷಗಳ ಬಹಳಷ್ಟು ದೊಡ್ಡ ಕನಸುಗಳ ಕಾಮಗಾರಿಗಳು ಈಡೇರುವ ಸಕಾಲ ಇದಾಗಿದೆ ಎನ್ನುವು ದರಲ್ಲಿ ಎರಡು ಮಾತಿಲ್ಲ.


ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ವಿರೋಧ ಪಕ್ಷದವರು ಸಹ ಒಪ್ಪಿಕೊಳ್ಳುತ್ತಾರೆ. ಮೆಚ್ಚುತ್ತಾರೆ. ಇದಕ್ಕೆ ಪೂರಕ ಹಾಗೂ ಪ್ರೇರಕ ಕಾರಣವೆಂದರೆ ಇತ್ತೀಚೆಗಷ್ಟೆ ನಿವೃ ತ್ತರಾದ ಸಹಾಯಕ ಕಾರ್ಯಪಾಲಕ ಅಭಿ ಯಂತರ ಪೀರ್‌ಪಾಷ ಅವರನ್ನು ಒಂದು ವರ್ಷದ ಅವಧಿಗೆ ಕರ್ನಾಟಕ ಸರ್ಕಾರ ಆರ್ಥಿಕ ಇಲಾಖೆ, ಆಡಳಿತ ಮತ್ತು ಸಿಬ್ಬಂದಿಗಳ ಸುಧಾರಣೆ ಇಲಾಖೆ ಅನುಮತಿ ಪಡೆದು ಗುತ್ತಿಗೆ ಆಧಾರದಲ್ಲಿ ಮತ್ತೆ ಸೇವಾವಧಿಯಲ್ಲಿ ಮುಂದುವರೆಸಿ ರುವುದೇ ಆಗಿದೆ.


ಇತ್ತೀಚೆಗೆ ರಾಜ್ಯ ಹೆದ್ದಾರಿ ಮುಖ್ಯ ಇಂಜಿನಿಯರ್ ಅವರಿಂದ ರಾಜ್ಯ ಸೇವಾ ಸರ್ವೋತ್ತಮ ಪ್ರಶಸ್ತಿಗೆ ಶಿಪಾರಸ್ಸಾದ ಪಾಷ ಅವರನ್ನು ಶಿವಮೊಗ್ಗದ ಬಹಳಷ್ಟು ಜನಪ್ರತಿನಿಧಿಗಳು ಗುರುತಿಸಿದ್ದಾರೆ. ಪೀರ್ ಪಾಷ ಅವರ ಬಗ್ಗೆ ಭ್ರಷ್ಟಾಚಾರದ ಆರೋಪಗಳಿಲ್ಲ. ಶಿವಮೊಗ್ಗ ಜಿಲ್ಲೆಗೆ ಏನಾದರೂ ಒಂದಿಷ್ಟು ಮಾಡಬೇಕೆಂಬ ಬಯಕೆಯಿಂದ ಪಾಷ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಇಂತಹ ಮುಂದುವರಿಕೆಗೆ ಕೈ ಹಾಕಿದ್ದರು. ಧರ್ಮದ ಆಧಾರದಲ್ಲಿ ಪಾಷ ಬೇರೆ ಯವರಾದರೂ ಸಹ ಅಭಿವೃದ್ಧಿ ವಿಚಾರ ದಲ್ಲಿ ಅವರ ಸೂಕ್ಷ್ಮತೆಯನ್ನು ಸಂಸದರು ಹಾಗೂ ಮುಖ್ಯಮಂತ್ರಿಗಳ ತಂಡ ಗುರುತಿಸಿರುವುದು ಇಲ್ಲಿ ವಿಶೇಷ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

  • ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
  • ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
  • ” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
  • ” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
  • ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
  • ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
  • ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
  • ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
  • ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
  • ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.


೩೧-೦೩-೨೦೨೧ರಂದು ನಿವೃತ್ತಿ ಯಾದ ಎಇಇ ಪೀರ್ ಪಾಷ ಅವರ ಸೇವೆಯ ಅಗತ್ಯವನ್ನು ಅತ್ಯಂತ ಹತ್ತಿರ ದಿಂದ ಗಮನಿಸಿದ್ದ ಕರ್ನಾಟಕ ಸರ್ಕಾರ ಅದೇ ಹುದ್ದೆಯಲ್ಲಿ ಒಂದು ವರ್ಷಗಳ ಕಾಲ ಮುಂದುವರೆಯಲು ಆದೇಶಿಸಿದೆ. ಅವರ ಮುಂದುವರಿಕೆ ಆದ ಅವಧಿಯಲ್ಲಿ ಇಂಜಿನಿಯರ್‌ಗಳು ಸೇರಿದಂತೆ ಬಹ ಳಷ್ಟು ಅಧಿಕಾರಿಗಳು ಅವರಿಗೆ ಶುಭ ಕೋರಿದರು. ಅದೇನಾಯ್ತೊ ಗೊತ್ತಿಲ್ಲ ಇಲ್ಲಿಯವರೆಗೆ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಹಾಯಕ ಇಂಜಿನಿಯರ್ ರವಿ ಅವರು ಪಾಷ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿಲ್ಲ.
ಈ ನಡುವೆ ಇಂಜಿನಿಯರ್ ಸೇವಾ ಸಂಘ ಹೆಸರಿನಲ್ಲಿ ಹಲವರು ಗುಂಪು ಗೂಡಿ ಹಾಲಿ ಇರುವ ಇಂಜಿಯರ್ ಗಳನ್ನು ಬಳಸಿಕೊಳ್ಳಲು ಒತ್ತಡದ ಬೆದರಿಕೆ ಹಾಕುತ್ತಿರುವುದು ಕಂಡು ಬಂದಿದೆ. ಆದರೆ ಕೇಂದ್ರ ಸರ್ಕಾರದ ಮಟ್ಟದಿಂದ ಶಿವಮೊಗ್ಗ ಜಿಲ್ಲೆಗೆ ಈಗಾಗಲೇ ಸುಮಾರು ೮೫೦ ಕೋಟಿ ರೂ.ನ ಕಾಮಗಾರಿಗಳನ್ನು ತಂದಿರುವ ಪಾಷ ಅವರ ಕನಸಿನ ಯೋಜನೆಯಂತೆ ಸುಮಾರು ೨ ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಮೊದಲ ಹಂತದ ತಾತ್ವಿಕ ಒಪ್ಪಿಗೆಯನ್ನು ಪಡೆದಿದ್ದಾರೆ.


ಶಿವಮೊಗ್ಗದ ಸಿಗಂದೂರು ಸೇತುವೆ, ಹೊಳೆಬಸ್‌ಸ್ಟಾಪ್ ಬಳಿಯ ವ್ಯವಸ್ಥಿತ ರೈಲ್ವೆ ಓವರ್ ಬಿಡ್ಜ್ ಹಾಗೂ ವ್ಯವಸ್ಥಿತ ವಾದ ವಿದ್ಯಾನಗರ ರೈಲ್ವೆ ನಿಲ್ದಾಣ, ಶಿವ ಮೊಗ್ಗ-ಭದ್ರಾವತಿ ಸರಹದ್ದಿನ ಎಲ್ಲಾ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ರಾಣೆಬೆ ನ್ನೂರು-ಬೈಂದೂರು ರಸ್ತೆಯ ಏಳು ಸೇತುವೆಗಳು, ಸಾಗರ ನಗರದ ೪ ಪಥ ರಸ್ತೆ, ಕೊಲ್ಲೂರು ಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶಿವಮೊಗ್ಗಕ್ಕೆ ಯಶಸ್ವಿಯಾಗಿ ತರುವಲ್ಲಿ ಸಂಸದ ರಾಘ ವೇಂದ್ರ ಅವರ ಪ್ರಯತ್ನಕ್ಕೆ ಪ್ರೇರಕರಾಗಿ ಪೀರ್‌ಪಾಷ ಬಹಳಷ್ಟು ಕಾಲ ಶಿವಮೊಗ್ಗ ದೆಹಲಿಗೆ ಸಂಪರ್ಕ ಬೆಳೆಸಿಕೊಂಡಿದ್ದು ಕಾರಣವೆನ್ನುವುದರಲ್ಲಿ ಎರಡು ಮಾತಿಲ್ಲ.
ಮತ್ತೊಂದು ವಿಶೇಷವೆಂದರೆ ಶಿವ ಮೊಗ್ಗ ಬಸ್ ನಿಲ್ದಾಣ, ಆಳ್ಕೋಳ ಸರ್ಕ ಲ್‌ನಲ್ಲಿ ಅಂಡರ್ ಪಾಸ್ ರಸ್ತೆಯ ಬೃಹತ್ ಯೋಜನೆ, ಬರುವ ದಿನಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲೆಡೆಯೂ ರೈಲ್ವೆ ಓವರ್ ಬ್ರಿಡ್ಜ್‌ಗಳ ಕೊರತೆ ಇಲ್ಲದಂತೆ ನೋಡಿಕೊಳ್ಳುವ ಸುದುದ್ದೇಶದಿಂದ ಕುಂಸಿ, ತಾಳಗುಪ್ಪ, ಆನಂದಪುರ, ಯಡೇಹಳ್ಳಿಯಲ್ಲಿ ಓವರ್ ಬ್ರಿಡ್ಜ್‌ಗಳ ನಿಲ್ದಾಣ ಸಾಕಷ್ಟು ರಸ್ತೆ ಕಾಮಗಾ ರಿಗಳಿಗೆ ಯೋಜನೆಯನ್ನು ಸಿದ್ದಪಡಿಸಿ ಕೊಂಡು ಸುಮಾರು ೨ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಪಡೆ ಯುವ ಸದವಕಾಶವನ್ನು ಪಾಷ ತಂದಿದ್ದಾರೆ.
ಒಂದು ವರ್ಷದ ಅವಧಿಗೆ ಸರ್ಕಾರ ಮುಂದುವರೆಸಿದಾಗ ಪಾಷ ಅವರು ೧೨-೦೫-೨೦೨೦ರಂದು ಕಚೇರಿಗೆ ಹಾಜ ರಾಗಿದ್ದಾಗ ಪ್ರಭಾರ ಅಧಿಕಾರವಹಿಸಿ ಕೊಂಡಿದ್ದ ರವಿ ಅವರು ನೀವು ಯಾವ ಕಛೇರಿಗೆ ಎಂದು ನಮೂದಿಸಿಲ್ಲ ಎಂದು ಕ್ಯಾತೆ ತೆಗೆದಾಗ ಮೇಲಾಧಿಕಾರಿಗಳು ಮಾರನೇ ದಿನವೇ ತಿದ್ದುಪಡಿ ಆದೇಶ ಮಾಡಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಶಿವಮೊಗ್ಗದ ಪ್ರಮುಖ ಕಾಮ ಗಾರಿಗಳು ಹಾಗೂ ಸಿಗಂದೂರು ಸೇತುವೆ ನಿರ್ಮಾಣದ ಉಸ್ತುವಾರಿಯಾಗಿ ಸಹಾ ಯಕ ಕಾರ್ಯಪಾಲಕ ಹುದ್ದೆಗೆ ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಐ. ಎಸ್.ರುದ್ರಯ್ಯ ಆದೇಶ ನೀಡಿದ್ದರು.


ಆದರೆ, ಅಂದಿನಿಂದ ಕಛೇರಿಗೆ ಹಾಜರಾಗಲು ಪಾಷ ಹೋದರು ಸಹ ಪ್ರಭಾರಿ ಇಂಜಿನಿಯರ್ ರವಿ ಅವರು ಕಾಮಗಾರಿ ಸ್ಥಳದಲ್ಲಿದ್ದೇನೆ. ಬರುತ್ತೇನೆ ಎಂದು ಹೇಳುತ್ತಲೇ ದಿನದೂಡುತ್ತಿದ್ದಾರೆ. ನಿನ್ನೆಯವರೆಗೂ ಸಹ ಸರ್ಕಾರದ ಆದೇಶವನ್ನು ಮೇಲಾಧಿಕಾರಿಗಳ ಸೂಚನೆಯನ್ನು ಪಾಲಿಸದೇ ಇಂಜಿನಿಯರ್ ಸಂಘದ ಮೂಲಕ ಒತ್ತಡ ಹಾಕಿಸುವ ಕೆಲಸವನ್ನು ಇಬ್ಬರು ಆಕಾಂಕ್ಷಿತ ಇಂಜಿಯರ್‌ಗಳು ಸದ್ದಿಲ್ಲದೇ ಮಾಡುತ್ತಿದ್ದಾರೆ.
ಪ್ರಸಕ್ತ ಅಧಿಕಾರ ಹಂಚಿಕೆಯಾ ಗದಿರುವ ಹಿನ್ನೆಲೆಯಲ್ಲಿ ಕಾರ್ಯಪಾಲಕ ಇಂಜಿಯರ್ ಸೂಚನೆಯಂತೆ ಕೇವಲ ಕಚೇರಿಯ ತಾಂತ್ರಿಕ ವಿಷಯ ಕಾಮಗಾರಿಗಳ ಅನುಷ್ಠಾನ ಮಂಜೂರಾತಿ ಕೆಲಸಗಳಲ್ಲಿ ತೊಡಗಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪಾಷ ಅವರ ಸಾಧನೆಗಳನ್ನು ಹಾಗೂ ಗುರಿಗಳನ್ನು ಇಂಜಿಯರ್‌ಗಳ ಸಂಘ ಗುರುತಿಸಬೇಕಾಗಿದೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತರಬಹುದಾದ ಅನುದಾನಗಳ ಸಬ್ದಳಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಯತ್ತ ಚಿಂತಿಸುವ ಅಗತ್ಯವಿದೆ ಅಲ್ಲವೇ..?

ಸರ್ಕಾರದ ಆದೇಶವಿದ್ದರೂ ಸಹ ಇಂದಿನವರೆಗೂ ರವಿ ಅವರಿಂದ ನನಗೆ ಅಧಿಕಾರ ಹಸ್ತಾಂತರವಾಗಿಲ್ಲ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ನಿವೃತಿಯಾದ ಮರುದಿನದಿಂದಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಮಂಜೂರಾತಿ ದೊರಕಿಸುವ ಪ್ರಯತ್ನವನ್ನು ಮುಂದುವರೆಸಿದ್ದಾನೆ. ನಾನು ಇಲ್ಲಿಯವರೆಗೆ ಯಾವುದೇ ಹಣಕಾಸು ವ್ಯವಹಾರವನ್ನು ವಹಿಸಿಕೊಂಡಿಲ್ಲ. ರಾಜ್ಯ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಂಸದರು ನನ್ನ ಕರ್ತವ್ಯದ ಮೇಲೆ ಗೌರವವಿಟ್ಟು ಗುರುತಿಸಿ ನನಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಅವರ ಗೌರವಕ್ಕೆ ಧಕ್ಕೆ ತರುವುದಿಲ್ಲ. ಅಂದುಕೊಂಡ ಗುರಿಯ ಕಾಮಗಾರಿಗಳಿಗೆ ವರ್ಷದೊಳಗೆ ಮಂಜೂರಾತಿ ತರುತ್ತೇನೆ. ಅಷ್ಟೊಂದು ಪ್ರೀತಿ, ವಿಶ್ವಾಸ ತೋರಿದವರು ಧೀಡಿರನೇ ವಿರೋಧ ವ್ಯಕ್ತಪಡಿಸಿರುವುದು ನನಗೆ ಬೇಸರ ತಂದಿದೆ. ಜಿಲ್ಲೆಯ ಅಭಿವೃದ್ಧಿಗೆ, ಸಂಸದರ ವಿಶ್ವಾಸಕ್ಕೆ ನಾನು ಮೌನಿಯಾಗಿದ್ದೇನೆ.
-ಪೀರ್‌ಪಾಷ

By admin

ನಿಮ್ಮದೊಂದು ಉತ್ತರ

error: Content is protected !!