ಸಾಗರ(ಶಿವಮೊಗ್ಗ),ಡಿ,೧೯:ಸಾಗರ ಉಪವಿಭಾಗೀಯ ಕೇಂದ್ರ ಸ್ಥಾನ ಸಾಗರ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಬೆಳಗಾವಿ ವಿಧಾನಸೌಧಕ್ಕೆ ಭೇಟಿ ನೀಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉಪಮುಖ್ಯಮಂತ್ರಿಗಳಿಗೆ ಸಾಗರ ಜಿಲ್ಲೆಯಾಗಬೇಕು ಎಂದು ಕಳೆದ ೧೨ ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ.ಇದರ ನಡುವೆ ಶಿಕಾರಿಪುರ ಜಿಲ್ಲೆಯಾಗಬೇಕು ಎಂಬ ಪ್ರಸ್ತಾಪವನ್ನು ಈ ಹಿಂದೆ ಯಡಿಯೂರಪ್ಪನವರು ಪ್ರಯತ್ನಿಸಿದ್ದರು.
ಸಾಗರವನ್ನು ಡಿ೧೭ ರ ಬುಧವಾರ ಸಂಪೂರ್ಣ ಬಂದ್ ಆಚರಿಸಿದ್ದಾರೆ.ಸಾಗರದ ಜನ ಜಿಲ್ಲೆಯಾಗಬೇಕು ಎಂದು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಸಾರ್ ಎಂದು ಹೇಳುವ ಮೂಲಕ ಜನಾಭಿಪ್ರಾಯವನ್ನು ಉಪಮುಖ್ಯಮಂತ್ರಿಗಳಿಗೆ ತಿಳಿಸುವ ಪ್ರಯತ್ನ ಮಾಡಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು ಶಿವಮೊಗ್ಗ ಎಷ್ಟು ತಾಲ್ಲೂಕುಗಳಿವೆ ಎಂದು ಕೇಳಿದರು.೮ ತಾಲ್ಲೂಕುಗಳಿವೆ ಎಂಬ ಮಾಹಿತಿ ಪಡೆದು ಪರಿಶೀಲಿಸುತ್ತೇವೆ ಎನ್ನುವ ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಅಧಿವೇಶನದಿಂದ ವಿಧಾನಸೌದದ ಪಡಸಾಲೆಗೆ ಆಗಮಿಸಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರಿಗೆ ಶಾಸಕ ಗೋಪಾಲಕೃಷ್ಣಬೇಳೂರು ನೇತೃತ್ವದಲ್ಲಿ ಮನವಿ ಸಲ್ಲಿಸಿ ಸಾಗರವನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ಗಮನಸೆಳೆಯಲಾಯಿತು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಚಿವ ಮಧುಬಂಗಾರಪ್ಪನವರು ಸಾಗರ ಜಿಲ್ಲೆಯಾಗುವುದು ಸೂಕ್ತವಿದೆ.ಸೊರಬ,ಶಿಕಾರಿಪುರ,ಹೊಸನಗರ,ಸಾಗರದ ಜೊತೆಗೆ ಸಿದ್ದಾಪುರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ಕುರಿತು ಚಿಂತನೆ ಮಾಡೋಣ,ಮೊದಲು ಜನಪ್ರತಿನಿಧಿಗಳು ನಾವು ಸಕಾರಾತ್ಮಕವಾಗಿ ಸಮಾಲೋಚಿಸಿ ಯಾವ ಯಾವ ತಾಲ್ಲೂಕುಗಳು ಸೇರಿದರೆ ಉತ್ತಮ ಎಂದು ಪರಿಶೀಲಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ಮಂಜುನಾಥ ಆಚಾರ್,ಉಮೇಶ್ ಹೆಚ್.ಎನ್,ತೀ.ನಾ.ಶ್ರೀನಿವಾಸ್,ಎಸ್.ವಿ.ಹಿತಕರ್ ಜೈನ್,ಬಸವರಾಜ ಬಿಳಿಬಾವಿ,ಸುಂದರ್ಸಿಂಗ್,ಕೆ.ವಿ.ಜಯರಾಮ್,ಹೆಚ್.ರೇವಣಪ್ಪ,ಮನೂಜ್ಕುಗ್ವೆ,ಎಂ.ತಾರಮೂರ್ತಿ,ಮೊಹಮದ್ಖಾಸಿಂ,ವೆಂಕಟೇಶ್ಭೋವಿ,ನೂರುಲ್ಲಾ ಹಕ್,ಮೀನುಮಾರಾಟ ಸಂಘದ ಅಧ್ಯಕ್ಷ ಉಸ್ಮನ್,ನಾಗರಾಜ ಹೆಚ್.ಎಂ, ಮಂಜಪ್ಪ ಚಿಕ್ಕನೆಲ್ಲೂರು,ರವಿಕುಗ್ವೆ,ನಾಗರಾಜ (ಮೂರನೆ ಕಣ್ಣು) ಮೊದಲಾದವರು ಉಪಸ್ಥಿತರಿದ್ದರು.