ಶಿವಮೊಗ್ಗ, ಡಿ.18:
ಶಿವಮೊಗ್ಗ ದಲ್ಲಿ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ಅಧೀಕ್ಷಕರು ಅನಿರೀಕ್ಷಿತ ದಾಳಿ ನಡೆಸಿ ಹಲವು ಅನುಮಾನಾಸ್ಪದ ಹಾಗೂ ಸಂಪರ್ಕ ಸಾಧನದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಸರಿಯಷ್ಟೇ..
ಶಿವಮೊಗ್ಗ ಜೈಲಲ್ಲೇ ಇರುವ ಈ ಅಧಿಕಾರಿ ಅನಿರೀಕ್ಷಿತ ದಾಳಿ ನಡೆಸುವ ಅಗತ್ಯವಾದರೂ ಏನಿತ್ತು ಎಂಬುದು ಪಬ್ಲಿಕ್ ಪ್ರಶ್ನೆ .
ನಿರಂತರವಾಗಿ ಎಲ್ಲ ಖೈದಿಗಳ ಬಳಿ, ಅಪರಾಧಿಗಳ ಬಳಿ, ಆರೋಪಿಗಳ ಬಳಿ ಹೋಗಿ ಅವರ ವಿಷಯಗಳನ್ನು ತಿಳಿದುಕೊಳ್ಳುವ ಜೊತೆಗೆ ಅವರು ಬಳಸುವ ವಸ್ತುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿತ್ತು. ಆದರೆ ಮುಖ್ಯ ಅಧಿಕಾರಿ ಅನಿರೀಕ್ಷಿತ ದಾಳಿ ಎಂಬ ಹೆಸರಲ್ಲಿ ಪತ್ರಿಕೆಯ ಪ್ರಕಟಣೆ ನೀಡುವ ಮೂಲಕ ಶಿವಮೊಗ್ಗದ ಕೇಂದ್ರ ಕಾರಾಗೃಹ ಪರಿಶುದ್ಧ ಎಂಬುದನ್ನ ಹೇಳುವಂತಹ ಅಗತ್ಯವಾದರೂ ಏನಿತ್ತು ?
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಎಷ್ಟೋ ಬಾರಿ ದಾಳಿ ನಡೆಸಿದಾಗ ಮೊಬೈಲ್ ಸೇರಿದಂತೆ ಅಕ್ರಮಗಳು ಪತ್ತೆಯಾದರೂ ಸಹ ಅಲ್ಲೇ ಇರುವ ಜಿಲ್ಲಾ ವ್ಯವಸ್ಥೆಯ ನಡುವೆ ಇರುವ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಇದು ಏಕೆ ಗೊತ್ತಾಗುತ್ತಿದ್ದಿಲ್ಲವೇ ಎಂಬುದು ಪಬ್ಲಿಕ್ ಪ್ರಶ್ನೆ.
ಅವರು ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಒಮ್ಮೆ ಗಮನಿಸಿ. ನಿನ್ನೆ ರಾತ್ರಿ ಆಧಿಕಾರಿ ಹಾಗೂ ಸಿಬ್ಬಂದಿಗಳು ದಿಡೀರನೆ ನಡೆಸಿದ ಅನಿರೀಕ್ಷಿತ ದಾಳಿ ಸಮಯದಲ್ಲಿ ಮೂರು ಮೊಬೈಲ್ ನಾಲ್ಕು ಸಿಮ್ ಕಾರ್ಡ್ ಹಾಗೂ ಮೂರು ಡಾಟಾ ಕೇಬಲ್ ಎರಡು ಇಯರ್ ಫೋನ್, ಒಂದು ಚಾರ್ಜರ್ ಸಿಲುಕಿದೆ. ಇದಕಾರು ಹೊಣೆಗಾರರು? ಎಲ್ಲಾ ಅಯೋಮಯ…., ಗೃಹಸಚಿವರೇ ಗಮನಿಸಿ