ಸಾಗರ : ಪಟ್ಟಣದ ಸೊರಬ ರಸ್ತೆ ಚಂದ್ರಮಾವಿನಕೊಪ್ಪಲು ಸಮೀಪ ಆನಂದ್ ಎಂಬುವವರ ಮನೆ ಹಿಂಭಾಗದ ಸುಮಾರು ೨೦ ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಗೂಳಿಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಾತ್ರಿ ರಕ್ಷಣೆ ಮಾಡಿದ್ದಾರೆ.

ಗೂಳಿಯು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತಿತ್ತು. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತಂಡವು ಸುಮಾರು ಎರಡು ಗಂಟೆ ಕಠಿಣ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಪ್ರಮೋದ್ ಜೋಗಲೆಕರ್, ಸಿಬ್ಬಂದಿಗಳಾದ ನಂದಕುಮಾರ್, ಸಂತೋಷ್, ಜಯಂತ್, ಸತೀಶ್, ಶ್ರೀನಿವಾಸ್, ಸುನೀಲ್ ಮೋರೆ, ಶಿವರಾಜ್, ಭೀಮರಾಜ್ ಪಾಲ್ಗೊಂಡಿದ್ದರು.