(ನಿಮ್ ತುಂಗಾತರಂಗದಲ್ಲಿ ಮಾತ್ರ)
ಶಿವಮೊಗ್ಗ,ಡಿ.09:
ಸಾರ್ವಜನಿಕರ
ಅನುಕೂಲಕ್ಕಾಗಿ ಪಾಲಿಕೆಯು ಮೂರು ವಲಯಗಳಾಗಿ ವಿಂಗಡಿಸಿ ತಮ್ಮ ತಮ್ಮ ಕೆಲಸಗಳಿಗೆ ದೂರದಿಂದ ಬರುವ ಸಾಕಷ್ಟು ಸಾರ್ವಜನಿಕರಿಗೆ, ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.
ಪಾಲಿಕೆಯ ಕೆಲ ಅಧಿಕಾರಿಗಳು ಸಹ ಸಾರ್ವಜನಿಕರ ದಾಖಲೆಗಳು ಸರಿಯಾಗಿ ಇದ್ದರೆ, ಸಾರ್ವಜನಿಕರಿಗೆ ಅಷ್ಟೆ ಪ್ರೀತಿಯಿಂದ ಸಾರ್ವಜನಿಕರಿಗೆ ಅಗಬಹುದಾದ ಈ ಸ್ವತ್ತು, ಇ ಅಸ್ತಿ, ಖಾತೆ ಸೇರಿದಂತೆ ಅನೇಕ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡುತ್ತಾರೆ ಎಂಬುದು ಸಾರ್ವಜನಿಕ ಅಭಿಪ್ರಾಯ.
ಮಾಯಣ್ಣಗೌಡರು ಪಾಲಿಕೆಯ ಅಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಂದಿನಿಂದಲೂ ಸಹ ಪಾಲಿಕೆಯಲ್ಲಿ ಯಾವುದೇ ಕಿರಿಕಿರಿ ಇಲ್ಲದಂತೆ ಪಾಲಿಕೆಯ ಇಡೀ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ. ಏಕೆಂದರೇ ಇವರೇ ಸ್ವತಃ ಪಾಲಿಕೆಯ ಮೂರು ವಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಗಾಗ ಪರಿಶೀಲನೆ ನಡೆಸಿ ಹಾಗೂ ಸಾರ್ವಜನಿಕರೊಂದಿಗೆ ಸಭೆಯನ್ನು ಸಹ ನಡೆಸುತ್ತಾರೆ.
ಅದರೇ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗಿಂತ ಪಾಲಿಕೆಯಲ್ಲಿ ಸಾಕಷ್ಟು ಬ್ರೋಕರ್ ಗಳು ತುಂಬಿ ತುಳುಕುತ್ತಿದ್ದಾರೆ, ಅವರದೇ ಕಾರುಬಾರಿನಲ್ಲಿ ಇಡೀ ವ್ಯವಸ್ಥೆ ಇದೆಯಾ ಎನಿಸುತ್ತಿದೆ ಎಂದು ಕೆಲ ಸಾರ್ವಜನಿಕರು, ಪಾಲಿಕೆಯ ಕೆಲ ಅಧಿಕಾರಿಗಳು ಆರೋಪಿಸಿದ್ದಾರೆ.
ಕೆಲ ಬ್ರೋಕರ್ ಗಳು ಪಾಲಿಕೆಯ ಹಿರಿಯ ಅಧಿಕಾರಿಗಳ ಹೆಸರನ್ನು ಹೇಳಿ

ಸಾರ್ವಜನಿಕರಿಂದ ಸಾಕಷ್ಟು ಹಣ ವಸೂಲಿ ಮಾಡಿ ಪಾಲಿಕೆಯ ಹೆಸರನ್ನೆ ಸಂಪೂರ್ಣ ಹಾಳುಗೆಡವುತ್ತಿದ್ದಾರೆ.
ಈ ಸ್ವತ್ತು , ಇ ಅಸ್ತಿ, ಖಾತೆ ಯಂತಹ ಅನೇಕ ಕೆಲಸಗಳನ್ನು ಮಾಡಿಸಿ ಕೊಡುತ್ತೇವೆ ಎಂದು ಸಾರ್ವಜನಿಕರಿಂದ ಕೆಲವರು ಸಾಕಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು, ಅಧಿಕಾರಿಗಳು ಆರೋಪಿಸಿದ್ದಾರೆ.
ಕೆಲ ಬ್ರೋಕರ್ ಗಳು
ಸಾರ್ವಜನಿಕರ ಈ ಸ್ವತ್ತು,ಇ ಅಸ್ತಿ,ಖಾತೆ ಮಾಡಿಸುವ ವಿಚಾರವಾಗಿ ಅಧಿಕಾರಿಗಳಿಗೆ ಸರಿಯಾದ ದಾಖಲೆಗಳನ್ನು ಸಹ ನೀಡದೇ ಪಾಲಿಕೆಯ ಅಧಿಕಾರಿಗಳಿಗೆ ನಮ್ಮ ಕೆಲಸ ಮಾಡಿಕೊಡಿ. ಇಲ್ಲವಾದರೇ ನಿಮ್ಮ ಪರ್ಸನಲ್ ಕೆಲವು ವಿಷಯಗಳನ್ನು ಕೆಲ ಅಧಿಕಾರಿಗಳಿಗೆ ನೀಡುತ್ತೇವೆ. ನಿಮ್ಮ ವಿಷಯಗಳನ್ನು ಪಬ್ಲಿಕ್ ಮಾಡುತ್ತೇವೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳ ಮುಂದೆ ಕಿರುಚಾಟ.ಸೇರಿದಂತೆ ಸಾಕಷ್ಟು ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದು ಕೆಲ ಅಧಿಕಾರಿಗಳು, ನೌಕರರ ನೋವಿನ ಮಾತು.

ನಮ್ಮಲ್ಲೂ ಕೆಲವೇ ಕೆಲವರು ಈ ಬ್ರೋಕರ್ ಗಳಿಗೆ ಹಚ್ಚಿಕೊಡುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂಬುದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರ ಮನದಾಳದ ಮಾತು. ನೇರ ನಮ್ಮ ಬಳಿ ಜನ ಬಂದರೆ ಅವರ ಸಮಸ್ಸೆ ಬಗೆಹರಿಸಲು ನಾವು ಬದ್ದ, ಈ ಬ್ರೋಕರ್ ಗಳನ್ನ ಬಿಡಿ ಎನ್ನುತ್ತಿದ್ದಾರೆ.
ಸಾರ್ವಜನಿಕರ ಅಧಿಕಾರಿ ಎಂದೇ ನಗರದಲ್ಲಿ ಹೆಸರುವಾಸಿಯಾದ
ಮಾಯಣ್ಣಗೌಡರು ಈ ಕೂಡಲೇ ಪಾಲಿಕೆಯ ಕೆಲ ಹಿರಿಯ ಅಧಿಕಾರಿಗಳಿಗೆ ಬೆದರಿಕೆ, ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ.ಹಾಗೂ ಸರಿಯಾದ ದಾಖಲೆಗಳು ನೀಡದೇ ಈ ಸ್ವತ್ತು ಮಾಡಿಸಿ ಕೊಡಿ ಎಂದು ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವ ಕೆಲ ಬ್ರೋಕರ್ ಗಳಿಗೆ
ಅದ್ಯಾವ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.