ಬೆಳಗಾಂ ಅಧಿವೇಶನ, ಡಿ.09:
ನಗರಾಭಿವೃದ್ಧಿ ಇಲಾಖೆಯಿಂದ ನೀಡಲಾಗುತ್ತಿರುವ CA ನಿವೇಶನಗಳ ಹಂಚಿಕೆ, ಗುತ್ತಿಗೆ ವಿಸ್ತರಣೆ ಮತ್ತು ಡಬಲ್ ಪೇಮೆಂಟ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತಾಗಿ ಇಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಗಂಭೀರವಾಗಿ ಪ್ರಶ್ನಿಸಿ ಸರ್ಕಾರದ ಗಮನಸೆಳೆದರು.
CA ಸೈಟ್ಗಳಿಗೆ Sale Deed ನೀಡುವಂತೆ ಒತ್ತಾಯಿಸಿದರು.
ಗುತ್ತಿಗೆ ಮುಗಿದ ನಂತರ ಮತ್ತೆ ಮೊತ್ತ ಪಾವತಿಸಬೇಕಾದ ಡಬಲ್ ಪೇಮೆಂಟ್ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
SR Value ಅಲ್ಲಿ ರಿಯಾಯಿತಿ ನೀಡಬೇಕೆಂದು ವಿನಂತಿಸಿದರು.

ಕಠಿಣ ನಿಯಮಗಳಿಂದ ಬೇಡಿಕೆ ಕುಸಿದಿದ್ದು, ನಾಗರಿಕ ಸೌಲಭ್ಯಗಳ ಉದ್ದೇಶವೇ ಹಾಳಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ 269 ರಲ್ಲಿ ಕೇವಲ 4 CA ಸೈಟ್ಗಳಿಗೆ ಮಾತ್ರ ಬೇಡಿಕೆ ಇರುವ ಗಂಭೀರ ಪರಿಸ್ಥಿತಿಯನ್ನು ಮಂಡಿಸಿದರು.
CA ಸೈಟ್ ಹಂಚಿಕೆಯ ನಂತರ 3 ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಕಾರಣ, ಈ ಅವಧಿಯನ್ನು ಸರ್ಕಾರ ವಿಸ್ತರಿಸಬೇಕು ಎಂಬುದು ಪ್ರಮುಖವಾದ ಬೇಡಿಕೆಯನ್ನು ವ್ಯಕ್ತಪಡಿಸಿದರು.
ಬೆಂಗಳೂರು ನಗರ ಮತ್ತು ಶಿವಮೊಗ್ಗ ಸೇರಿದಂತೆ ಉಳಿದ ಜಿಲ್ಲೆಗಳ ನಡುವೆ ನೀತಿಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಇರಬೇಕು ಎಂದು ಪ್ರಸ್ತಾಪಿಸಿದರು.
ಸರ್ಕಾರವು ಲಾಭರಹಿತ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಗಳು CA ಸೈಟ್ಗಳತ್ತ ಮತ್ತೆ ಆಸಕ್ತಿ ತೋರಿಸುವಂತೆ ಮಾಡುವ ನೀತಿಗಳನ್ನು ಜಾರಿಗೆ ತರುವುದು ಅತ್ಯವಶ್ಯಕ ಎಂದು ಉಲ್ಲೇಖಿಸಿದರು.

ಈ ಚರ್ಚೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರು, ವಿಧಾನಪರಿಷತ್ ಶಾಸಕರುಗಳಾದ ಸಿ.ಟಿ.ರವಿರವರು,ಡಿ.ಟಿ.ಶ್ರೀನಿವಾಸ್ ರವರು, ರಮೇಶ್ ಬಾಬುರವರು, ಡಾ.ಧನಂಜಯ್ ಸರ್ಜಿರವರು, ಎಸ್.ಎಲ್.ಬೋಜೇಗೌಡರು, ಪುಟ್ಟಣ್ಣ ರವರು, ಕೆ.ವಿವೇಕಾನಂದ ರವರು ಸೇರಿದಂತೆ ಹಲವಾರು ಸದಸ್ಯರು ಪಕ್ಷಭೇದ ಮೀರಿ, ಡಿ.ಎಸ್. ಅರುಣ್ ಅವರ ಸಮಾಜಮುಖಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.