ಶಿವಮೊಗ್ಗ,ನ.14: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ಹಬ್ಬ ಹಾಗೂ ಮಕ್ಕಳ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಸಂಸದ ಆಯನೂರು ಮಂಜುನಾಥ್, ಜವಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಮಂತ್ರಿ ದೇಶವನ್ನು ಆಧುನೀಕರಣಗೊಳಿಸಿದ್ದಾರೆ. ಆರ್ಥಿಕತೆಯ ಅಡಿಪಾಯ ಹಾಕುವಲ್ಲಿ ಅವರ ಕೊಡುಗೆ ಅಪಾರವಾದುದ್ದು, ಭಾರತದ ಸ್ವಾತಂತ್ರ್ಯ ನಂತರ ಅನೇಕ ಸಮಸ್ಯೆಗಳು ಮತ್ತು ಸಂಕಟದಲ್ಲಿದ್ದ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳ ಪರಿಚಯಿಸಿದವರು, ಅವರ ಆದರ್ಶಗಳು ನಮಗೆ ಸದಾ ಇರಬೇಕು ಎಂದರು.

ನೆಹರು ಅವರಿಗೆ ಮಕ್ಕಳ ಮೇಲೆ ಬಹುವಾದ ಪ್ರೀತಿಯಿತ್ತು ಹಾಗಾಗಿಯೇ ಅವರು ತಮ್ಮ ಹುಟ್ಟಿದ ಹಬ್ಬವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸಲು ಹೇಳಿದರು. ಮಕ್ಕಳೆಂದರೆ ಮುಗ್ಧರು ಎಂದು ಅರ್ಥ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು, ನಾಯಕರುಗಳು ಕೂಡ ಮಕ್ಕಳ ಹಾಗೆಯೇ ಇರಬೇಕು, ಮಕ್ಕಳಿಗೆ ಯಾವ ಜಾತಿ, ಧರ್ಮ, ದ್ವೇಷ, ಭಾವನೆಗಳು ಇರುವುದಿಲ್ಲ, ಹಾಗೆಯೇ ನಾವು ಕೂಡ ಇರಬೇಕು ಎಂದರು.

ಕಾಂಗ್ರೆಸ್ ಮುಖಂಡರುಗಳಾದ ಎಸ್.ಟಿ.ಹಾಲಪ್ಪ, , ಶಿವಣ್ಣ, ಕಲಗೋಡು ರತ್ನಾಕರ್, ರಮೇಶ್ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಯು. ಶಿವಾನಂದ್,ವೈ.ಹೆಚ್.ನಾಗರಾಜ್, ಆರ್.ರಾಜಶೇಖರ್, ಮಂಜುನಾಥ್ ಬಾಬು, ಯಮುನಾ ರಂಗಮೂರ್ತಿ, ಸ್ಟೇಲಾ ಮಾರ್ಟಿನ್, ಅರ್ಚನಾ, ನಾಜೀಮಾ, ಸಮೀನಾ ಕೌಸರ್, ಸುವರ್ಣ ನಾಗರಾಜ್, ಕವಿತಾ, ಧೀರರಾಜ್ ಹೊನ್ನಾವಿಲೆ, ಶಿ.ಜು.ಪಾಶಾ, ಭಾರತಿ ರಾಮಕೃಷ್ಣ, ಹಿರಣ್ಣಯ್ಯ, ವಾಯಿದ್ ಅಡ್ಡು ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಸಂಸದ ಆಯನೂರು ಮಂಜುನಾಥ್ರವರ ಹುಟ್ಟುಹಬ್ಬವನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಚರಿಸಿದರು.