night police car lights in city - close-up with selective focus and bokeh background blur
ಹೊಳೆಹೊನ್ನೂರು: ಹಳೆ ದ್ವೇಷದ ಕಾರಣ ಯುವಕನೊಬ್ಬನಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣ ಸಮೀಪದ ಮೂಡಲ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.
ಆನವೇರಿ ಗ್ರಾಮದ ತೌಫಿಕ್ (32) ಯುವಕ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಿವಮೊಗ್ಗ ಟಿಪ್ಪು ನಗರದ ವಾಸಿಗಳಾದ ಮುಬಾರಕ್, ಪೌಹದ್, ತೋಹಿಬ್ ಹಾಗೂ ತನ್ವೀರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ ಕೊಲೆ ಮಾಡಲು ತಂದಿದ್ದ ಲಾಂಗ್ ಹಾಗೂ ಬಳಸಿದ್ದ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ದನ ಕಳ್ಳ ಸಾಗಾಣಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಗ್ಯಾಂಗಿನ ಚಟುವಟಿಕೆ ಬಗ್ಗೆ ಈ ಹಿಂದೆ ತೌಫೀಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಗಳ ತಂಡ ತೋಫಿಕ್ನನ್ನು ಶಿವಮೊಗ್ಗದಿಂದ ಹಿಂಬಾಲಿಸಿಕೊಂಡು ಬಂದಿದ್ದಾರೆ.
ಮೂಡಲ ವಿಠಲಾಪುರ ಗ್ರಾಮದ ಹೊಟೇಲ್ನಲ್ಲಿ ತೌಫೀಕ್ ತಿಂಡಿ ತಿನ್ನಲು ಬಂದಾಗ ಮಚ್ಚು ಬೀಸಿದ್ದಾರೆ. ಆಗ ಅಲ್ಲಿಗೆ ಆರ್ಎಸ್ಎಸ್ ಗಣವೇಷಧಾರಿಗಳು ತಿಂಡಿಗೆ ಬಂದಿದ್ದಾರೆ ಅವರ ಬಳಿ ಇದ್ದ ದಂಡ (ಕೋಲು) ನೋಡಿ ಪೊಲೀಸರೆಂದು ಭಾವಿಸಿ ಆರೋಪಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ.