ಶಿವಮೊಗ್ಗ : ದೀಪಾವಳಿ ಬೆಳಕಿನ ಹಾಗೂ ಗೋವುಗಳ ಹಬ್ಬವಾಗಿದೆ. ದೀಪಾವಳಿ ಪರ್ವಕಾಲದಲ್ಲಿ ಮಾಡುವ ಗೋಪೂಜೆ, ಬಾಳಿಗೆ ಶಕ್ತಿ ಮತ್ತು ತೃಪ್ತಿ ನೀಡುವುದು, ಎಂಬ ಪ್ರತೀತಿ ಇದ್ದು, ಗೋವಿನ ಹಿರಿಮೆಯನ್ನು ಕೊಂಡಾಡುವ ಈ ಹಬ್ಬವನ್ನು ಶಿವಮೊಗ್ಗೆಯ, ಗೋವರ್ಧನ ಟ್ರಸ್ಟ್ನೊಂದಿಗೆ ಆಚರಿಸೋಣ ಎಂದು, ಟ್ರಸ್ಟ್ ಮಹಾಪೋಷಕರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿಯ ಗೋಪೂಜೆಯ ದಿನವಾದ ಅ.೨೨ರ ಬುಧವಾರದಂದು ಐದು ಕಡೆಗಳಲ್ಲಿ, ಗೋವರ್ಧನ ಟ್ರಸ್ಟ್ ವತಿಯಿಂದ, ಸಾಮೂಹಿಕ ಗೋಪೂಜೆ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ ೮ ರಿಂದ ೧೧ ಗಂಟೆಯವರೆಗೆ ಗೋಪೂಜೆ ನಡೆಯಲಿದೆ ಎಂದರು.

ವಿನೋಬನಗರದ ಶಿವಾಲಯದಲ್ಲಿ, ಶ್ರೀಮದ್ ರಂಭಾಪುರಿ ಮಠದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಸಾಮೂಹಿಕ ಗೋಪೂಜೆಗೆ ಚಾಲನೆ ನೀಡಲಿದ್ದು, ಯಡಿಯೂರು ಸ್ವಾಮಿಗಳು, ಬಿಳಕಿ ಹಿರೇಮಠ ಶ್ರೀಗಳು, ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಅಲ್ಲದೆ, ನಗರದ ಗೋಪಾಳದ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಕೋಟೆ ರಸ್ತೆಯ ವಾಸವಿ ಶಾಲೆ, ರವೀಂದ್ರನಗರ ಗಣಪತಿ ದೇವಸ್ಥಾನ, ಶಾಂತಿನಗರದ ಶನಿದೇವರ ದೇವಸ್ಥಾನ, ಈ ೫ ಕಡೆಗಳಲ್ಲಿ ಸಾಮೂಹಿಕ ದೀಪಾವಳಿ ಗೋಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಶಿವಮೊಗ್ಗದ ನಾಗರಿಕರು ಕುಟುಂಬದೊಂದಿಗೆ ಪ್ರತ್ಯೇಕವಾಗಿ ಸಹ ಗೋಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.

ಹಸುಗಳಿಗೆ ಅಕ್ಕಿ, ಬೆಲ್ಲಕೊಡುವ ಅವಶ್ಯಕತೆ ಇಲ್ಲ. ಟ್ರಸ್ಟ್ ವತಿಯಿಂದ ಗೋವಿಗೆ ಪ್ರಿಯವಾದ ಆಹಾರವನ್ನು ಅಲ್ಲಿಯೇ ಸಿದ್ಧಪಡಿಸಿದ್ದು, ಗೋಪೂಜೆ ಮಾಡುವ ಆಸಕ್ತರು, ಅಲ್ಲಿಗೆ ಶುಲ್ಕನೀಡಿ ಆಹಾರ ಪಡೆಯಬಹುದಾಗಿದೆ ಎಂದರು.
ಹೆಚ್ಚಿನ ವಿವರಗಳಿಗಾಗಿ ಕೆ.ಇ. ಕಾಂತೇಶ್ ಮೊ.೯೯೮೦೫ ೫೫೫೫೪, ಉಮೇಶ್ ಆರಾಧ್ಯ ಮೊ. ೯೮೮೬೧ ೭೭೩೧೧, ನಾಗೇಶ್ ಮೊ. ೯೮೪೪೨ ೮೨೫೦೪, ಹೆಚ್.ಎಸ್. ನಾಗರಾಜ್ ಮೊ. ೯೪೪೮೨ ೪೧೧೪೯, ಸಂದೇಶ್ ಉಪಾಧ್ಯ ಮೊ. ೯೯೬೪೫ ೯೭೬೫೪ ಸಂಪರ್ಕಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶೇಷಾಚಲ, ಸಂದೇಶಉಪಾಧ್ಯ, ಉಮಾಮೂರ್ತಿ, ಉಷಾಅರುಣ್, ನಿರ್ಮಲ, ನಾಗರಾಜ ಎಚ್.ಎಸ್., ನವ್ಯಶ್ರೀನಾಗೇಶ್, ಜಾದವ್, ಚೇತನ್, ಬಾಲು, ಸ್ವರೂಪ್, ಶ್ರೀಕಾಂತ್, ವಿವೇಕ್, ಶಿವಾಜಿ, ಜಯಸ್ವಾಮಿ, ಶಶಿಕಲ ಮತ್ತಿತರರು ಇದ್ದರು.