ಶಿವಮೊಗ್ಗ : ನಗರದ ಬಹುಮುಖಿಯ ೬೦ನೇ ಕಾರ್ಯಕ್ರಮವಾಗಿ, ವಿಶ್ರಾಂತ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಬಹುಚರ್ಚಿತ ಮೈ-ಸೊರ್-ಸ್ಟೋರಿ ಕೃತಿ ಕುರಿತು ಸಂವಾದ ಆಯೋಜಿಸಲಾಗಿದೆ.
ಅ.೧೦ರ ಶುಕ್ರವಾರ ಸಂಜೆ ೦೫.೩೦ಕ್ಕೆ ಫ್ರೆಂಡ್ಸ್ ಸೆಂಟರ್ ಹಾಲ್ (ವಾಣಿಜ್ಯ ಕಾಲೇಜು, ಂಖಿಓಅಅ ಆವರಣ)ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ಪೂರ್ವ ವಲಯ ಐಜಿಪಿ ರವಿಕಾಂತೆ ಗೌಡ ಅವರು ಮಾತನಾಡಲಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ ಉಪಸ್ಥಿತರಿರಲಿದ್ದಾರೆ.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಶಾಖೆ ಮತ್ತು ಶಿವಮೊಗ್ಗ ಬಾರ್ ಅಸೋಸಿಯೇಶನ್ ಈ ಸಂವಾದ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.
ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ವಿನಂತಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ.೯೪೪೯೨೮೪೪೯೫, ೯೮೪೫೦೧೪೨೨೯, ೯೫೩೮೦ ೨೦೩೬೭ರಲ್ಲಿ ಸಂಪರ್ಕಿಸಬಹುದು.