ಶಿವಮೊಗ್ಗ ಶೋಷಿತ ಮಹಿಳೆಯರಿಗೆ ಧ್ವನಿಯಾಗುವೆ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣ. ತುಂಗಾ ಭದ್ರ ನದಿಗಳ ಶಕ್ತಿಯ ಹಾಗೆ ಮಹಿಳಾ ಶಕ್ತಿಯ ನಡುವೆ ನಾನು ಅಧಿಕಾರ ಸ್ವೀಕರಿಸಿದ್ದು ಅತ್ಯಂತ ಐತಿಹಾಸಿಕ ಕ್ಷಣ. ನಾನು ಇದೊಂದು ಅಧಿಕಾರ ಎಂದು ಭಾವಿಸುವುದಿಲ್ಲ

.ಇದೊಂದು ಜವಾಬ್ದಾರಿ ಎಂದುಭಾವಿಸುವೆ. ಯಾಕೆಂದರೆ ಧ್ವನಿಇಲ್ಲದ ಶೋಷಿತ ಮಹಿಳೆಯರ ಧ್ವನಿ ಯಾಗುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ನಾನು ಜವಾಬ್ದಾರಿ ಎಂದುಭಾವಿಸಿದ್ದೇನೆ ಎಂದರು.

ದೇಶದಲ್ಲಿ ಮಹಿಳೆಯರ ದೊಡ್ಡ ಶಕ್ತಿ ಎಂದರೆ ಇಂದಿರಾಗಾಂಧಿ ಅವರು . ಅವರ ಸ್ಲೂರ್ತಿಯೇ ಇವತ್ತು ಕಾಂಗ್ರೆಸ್ ಪಕ್ಷದಲ್ಲಿಮಹಿಳೆಯರು ಗುರುತಿಸಿಕೊಳ್ಳಲು ಸಾಧ್ಯ ವಾಗಿದೆ.ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಖ್ಯ ಆಗಬಾರದು, ಘೋಷಣೆ ಆಗಬಾರದು.

ಅದು ಅವಳಬದುಕಿನ ಭಾಗವಾಗಿಇರಬೇಕು. ಇದುಕುಟುಂಬದಿಂದ ಹಿಡಿದು ರಾಜಕಾರಣದ ವರೆಗೂ ಕೂದ ಇದು ಅನ್ವಯ ವಾಗಬೇಕಿದೆ ಎಂದು ಹೇಳಿದರು.