ಶಿವಮೊಗ್ಗ: ಜಿ.ಎಸ್.ಟಿ.ಯಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗಿದ್ದು, ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುಂದುವರೆಯುತ್ತಿದ್ದು, ವಿಶ್ವದ ಅನೇಕ ದೇಶಗಳ ಕೈಗಾರಿಕೆಗಳು ಭಾರತದತ್ತ ಮುಖ ಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿ.ಎಸ್.ಟಿ. ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿಗಳ ಆಶಯದಂತೆ ದೇಶದ ಜನರಿಗೆ ಜಿ.ಎಸ್.ಟಿ. 2.0ನಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತಂದಿದ್ದು,

ದೇಶದ ಜನತೆಗೆ ದಿನಬಳಕೆ ವಸ್ತುಗಳ ದರ ಇಳಿಕೆಗೆ ಕಾರಣರಾದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿ ಬಜಾರ್ ನ ವ್ಯಾಪಾರಸ್ಥರಿಗೆ ಸಿಹಿ ತಿನ್ನಿಸಿ ಜಿ.ಎಸ್.ಟಿ. ಬಗ್ಗೆ ಅರಿವು ಮೂಡಿಸುವ ಕಾಂiÀರ್iಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿ.ಎಸ್.ಟಿ. 2.0 ಒಂದು ಐತಿಹಾಸಿಕ ನಿರ್ಧಾರವಾಗಿದೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಜಿ.ಎಸ್.ಟಿ. ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ರಾಜ್ಯಗಳ ವಿತ್ತ ಸಚಿವರು ಅಲ್ಲಿ ಇದ್ದು ಅನುಮೋದನೆ ನೀಡಿದರೆ ಮಾತ್ರ ಜಿ.ಎಸ್.ಟಿ. ಕೌನ್ಸಿಲ್ ಹಸಿರು ನಿಶಾನೆ ತೋರಿಸುತ್ತದೆ.

ಈಗಿನ ನಿರ್ಧಾರ ಇಡೀ ದೇಶದಲ್ಲಿ ಬಡ ಮಧ್ಯಮ ವರ್ಗದ ಸಾಮಾನ್ಯ ಜನರಿಗೆ ಅನುಕೂಲವಾಗಲಿದ್ದು, ದಿನಬಳಕೆಯ ಪ್ರಮುಖ ವಸ್ತುಗಳ ಮತ್ತು ಜೀವ ಉಳಿಸುವ ವೈದ್ಯಕೀಯ ವೆಚ್ಚಗಳ ಮೇಲೆ ಅತ್ಯಂತ ಪರಿಣಾಮ ಬೀರಲಿದೆ.

ಜನಸಾಮಾನ್ಯರಿಗೆ ದರಗಳಲ್ಲಿ ಕಡಿಮೆಯಾಗುವುದರ ಜೊತೆಗೆ ಎಲ್ಲಾ ವ್ಯಾಪಾರಿಗಳಿಗೂ ತಮ್ಮ ಉತ್ಪಾದನೆಯ ಬೇಡಿಕೆ ಹೆಚ್ಚಲಿದೆ. ವರ್ತಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಗಾಂಧಿ ಬಜಾರ್ ವರ್ತಕರಿಗೆ ಜಿ.ಎಸ್.ಟಿ. ಬಗ್ಗೆ ಮಾಹಿತಿ ನೀಡಿ ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮೋಹನ್ ರೆಡ್ಡಿ, ಮಂಜುನಾಥ್, ಮಾಲತೇಶ್, ಸುರೇಖಾ ಮುರಳೀಧರ್, ಮಂಗಳಾ ನಾಗೇಂದ್ರ, ಸುಮಿತ್ರಾ, ಚೈತ್ರಾ ಪೈ, ಶಿವಾನಂದ್, ಹರಿಕೃಷ್ಣ, ಶಿಲ್ಪಾ ಶ್ರೀನಿವಾಸ್, ಸುಮಾ ಭೂಪಾಳಂ, ವಿಶ್ವನಾಥ್ ಮತ್ತಿತರರು ಇದ್ದರು.
ಶಿವಮೊಗ್ಗ: ವಿಕಸಿತ ಭಾರತದ ಕನಸು ನನಸಾಗಲು ಜಿ.ಎಸ್.ಟಿ. ಬೆಂಬಲ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಜಿ.ಎಸ್.ಟಿ. ಐತಿಹಾಸಿಕವಾಗಿ ಜಾರಿಯಾಗಿದೆ. ಇದಕ್ಕಾಗಿ ಜಿಲ್ಲೆಯ ಕಾರ್ಯಕರ್ತರು, ಮುಖಂಡರು, ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರಲ್ಲದೇ ಜನರಿಗೂ ಕೂಡ ಜಿ.ಎಸ್.ಟಿ. ಸುಧಾರಣೆಯ ಬಗ್ಗೆ ತಿಳಿಸುತ್ತಿದ್ದೇವೆ. ಇವತ್ತಿನಿಂದಲೇ ಕೆಲವು ಗೊಂದಲಗಳು ಕೂಡ ಸರಿಯಾಗಲಿವೆ ಎಂದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೂ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ದುರ್ದೈವವಾಗಿದೆ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಈಗಾಗಲೇ ರಾಜ್ಯದ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರು.ಹಿಂದೂಗಳ ಹಬ್ಬ ಹರಿದಿನ ಮಾಡಲು ದೇಶದ ಯಾವ ರಾಜ್ಯದಲ್ಲೂ ಗೊಂದಲವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಈ ಗೊಂದಲ. ಇದಕ್ಕೆ ಸಿಎಂ ಅವರೇ ಕಾರಣ ಎಂದ ಅವರು ದಸರಾ ಉದ್ಘಾಟನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಏನಾಗಿದೆ ಎನ್ನುವುದು ಮುಖ್ಯವಲ್ಲ ಸಿಎಂ ಹುಚ್ಚಾಟ ಆಡಿದರು ಅಷ್ಟೇ. ದಸರಾ ಉದ್ಘಾಟನೆ ಯಾರಾದರೂ ಮಾಡಲಿ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಇದು ಎಲ್ಲರೂ ಕುಳಿತು ಚರ್ಚೆ ಮಾಡಬೇಕು. ಶಾಸಕರು, ಸಂಸದರು ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಪಕ್ಷ ನಂತರ ತೀರ್ಮಾನ ಕೈಗೊಳ್ಳಲಿದೆ ಎಂದರು.