ಶಿವಮೊಗ್ಗ : ಇಂದಿನಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಜನಗಣತಿಯನ್ನು ನಡೆಸುತ್ತಿದ್ದು,

ಈ ಜನಗಣತಿ ಯಲ್ಲಿ ಸಾಧುಶೆಟ್ಟಿ ಸಮಾಜದ ಭಾಂದವರು ಧರ್ಮದ ಕಾಲಂನಲ್ಲಿ ‘ಹಿಂದೂ,ಎಂದು ಜಾತಿ ಕಾಲಂನಲ್ಲಿ ಸಾಧುಶೆಟ್ಟಿ ಎಂದು ನಮೂದಿಸಬೇಕು

ಎಂದು ಜೆಡಿಎಸ್ ನ ಯುವ ಮುಖಂಡ, ಮಾಜಿ ಪಾಲಿಕೆ ಸದಸ್ಯ ಹಾಗೂ ಸಾಧುಶೆಟ್ಟಿ ಸಮಾಜದ ಪ್ರಮುಖರಾದ ರಘು ಬಿ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ ತೀರ್ಮಾನದಂತೆ ನಮ್ಮ ಸಮಾಜಕ್ಕೆ ಇರುವ ಭಿನ್ನ ಹೆಸರುಗಳಾದ ಗೋಣಿಗಮನೆ, ಸಾಧುಕುಲ, ಸಾಧುಸೆಟ್ಟಿ, ಜನಪಚೆಟ್ಟಿ, ಗೋಣಿಗ, 24ಮನೆ ತೆಲುಗು ಶೆಟ್ಟಿ , ಸಲಪರು ಇದ್ದು. ಈಗ ಇದರ ಬದಲಾಗಿ ಇನ್ನು ಮುಂದೆ ರಾಜ್ಯದ ವಿವಿಧ

ಭಾಗದಲ್ಲಿರುವ ಸಮಾಜದವರು ಸಮಗ್ರತೆ, ಒಗ್ಗಟ್ಟು ಪ್ರತಿಪಾದಿಸಲು ಹಾಗೂ ಜನಸಂಖ್ಯೆಯನ್ನು ಹೆಚ್ಚಿಸಿ ಮುಂದೆ ಎಲ್ಲಾ ರೀತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರವರ್ಗ-1ಕ್ಕೆ ಸಿಗುವ ಎಲ್ಲಾ ಮೀಸಲಾತಿ ಸೌಲಭ್ಯವನ್ನು ಪಡೆಯಲು ಸಾಧುಶೆಟ್ಟಿ ಸಮಾಜದವರು ಜನಗಣತಿ

ಮತ್ತು ಜಾತಿಗಣತಿಯ ಸಂದರ್ಭದಲ್ಲಿ ಜಾತಿ ಕಲಂನಲ್ಲಿ ನಮ್ಮ ಜಾತಿ ಹೆಸರನ್ನು ಸಾಧುಶೆಟ್ಟಿ SADHUSHETTY ಎಂದು ಧರ್ಮದ ಕಾಲಂ ನಲ್ಲಿ ‘ಹಿಂದೂ’ ಧರ್ಮ ಎಂದೇ ನಮೂದಿಸಬೇಕು.ಎಂದು ಈ ಮೂಲಕ ಸಮಾಜದ ಕುಲಬಾಂಧವರಲ್ಲಿ ರಘು ಬಾಲರಾಜ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.