

ಶಿವಮೊಗ್ಗ, ಸೆ.22:
ಇಂದಿನಿಂದ ರಾಜ್ಯಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜ್ಯದ ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಸಮೀಕ್ಷೆಯ ಸರಿಯಾದ ಮಾಹಿತಿಯನ್ನು ನೀಡುವಲ್ಲಿ ಸರ್ಕಾರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪ ಎಲ್ಲೆಡೆ ಗಂಭೀರವಾಗಿ ಕೇಳಿ ಬಂದಿದೆ.
ಶಿವಮೊಗ್ಗ ತಾಲ್ಲೂಕು ಹಾಗೂ ನಗರ ಪ್ರದೇಶದಲ್ಲಂತೂ ಈ ಆರೋಪ ಅತಿ ಉಗ್ರವಾಗಿ ಕೇಳಿ ಬರುತ್ತಿದ್ದು ನಾಳೆ ಬೆಳಗ್ಗೆ 9:00ಗೆ ನೀವು ಶಿಕ್ಷಣ ಇಲಾಖೆಯ ಬಿಆರ್ ಸಿ ಕಚೇರಿ ಬಳಿ ಬನ್ನಿ. ನಿಮ್ಮ ಕಿಟ್ ಪಡೆದು ನಾಳೆಯಿಂದಲೇ ಸಮೀಕ್ಷೆ ಆರಂಭಿಸಬೇಕು ಎಂದು ಏಕಏಕಿ ನಿನ್ನೆ ಸಂಜೆ ಘೋಷಿಸಿದ ಶಿಕ್ಷಣ ಇಲಾಖೆಯ ಮಹಾನ್ ಬುದ್ಧಿವಂತರು ಒಂದೇ ಬಾರಿಗೆ 1200 ಕ್ಕೂ ಹೆಚ್ಚು ಶಿಕ್ಷಕರಿಗೆ ಹೇಗೆ ತಾನೇ ಕಿಟ್ ವಿತರಿಸಲು ಸಾಧ್ಯ?

ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಅವಕಾಶವನ್ನು ಬಳಸಿಕೊಂಡು ಪ್ಲೇ ಗೂಗಲ್ ಸ್ಟೋರ್ ಮೂಲಕ ಸಮೀಕ್ಷೆಯ ಆಂಡ್ರಾಯ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡು ಆರಂಭಿಸಿ ಎಂದು ಲಿಂಕ್ ಒಂದನ್ನು ಕಳಿಸಿದರೆ ಈ ಅಧಿಕಾರಿಗಳ ಕೆಲಸ ಮುಗಿಯಿತೇ?
ಮೊನ್ನೆ ತಾನೆ ತರಬೇತಿ ನೀಡುವ ಸಮಯದಲ್ಲಿ ಕರೆಂಟ್ ಹೋದಾಗ ಮಾಹಿತಿಯನ್ನು ಸರಿಯಾಗಿ ಕೊಡದೆ ಟಾಟಾ, ಬಾಯ್ ಬಾಯ್ ಹೇಳಿದ್ದ ಅಧಿಕಾರಿಗಳು ಈಗ ಏಕಾಏಕೀ ಹಾವೂ ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಜಾಣ ಹೆಜ್ಜೆಯನ್ನಿಡಲು ಪ್ರಯತ್ನ ಪಡುತ್ತಿದ್ದರೂ ಸಹ ಇದರ ನಡುವೆ ಶಿಕ್ಷಕರು ಸಾಕಷ್ಟು ಆಕ್ರೋಶಕ್ಕೆ ಒಳಗಾಗಿರುವುದು ಈ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತವೇ ಹೌದು.

ಡಿ ಗ್ರೂಪ್ ನೌಕರರಿಗೆ ಹೇಳುವಂತೆ ಶಿಕ್ಷಕರಿಗೆ ಏಕಾಏಕಿ ದಿಡೀರ್ ದಿಢೀರ್ ಆದೇಶ ನೀಡುವ ಇಲಾಖೆ ಅಧಿಕಾರಿಗಳಿಗೆ ಈ ಸಮೀಕ್ಷೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂಬುದು ನಿಜವಾಗಿ ದೊಡ್ಡ ದುರಂತವೇ ಹೌದು. ಯಾವುದನ್ನಾದರೆ ಮಾಡಿ ಆದರೆ ಅದನ್ನು ಸರಿಯಾಗಿ ಮಾಡಬೇಕು ಎಂಬ ಪ್ರಜ್ಞೆ, ಸಾಮಾನ್ಯ ಕಳಕಳಿ ಇಲ್ಲದಿರುವುದು ದುರಂತವೇ ಹೌದು. ಈ ಬಗ್ಗೆ ಶಿಕ್ಷಕರು ಸಿಡಿದೆದ್ದರೆ ಇಡೀ ಸಮೀಕ್ಷೆ ಶಿವಮೊಗ್ಗದ ಪಾಲಿಗಂತೂ ಬಹಿಷ್ಕಾರ ವಾಗುವುದು ಖಚಿತ ಎನ್ನಲಾಗುತ್ತಿದೆ.