ಶಿವಮೊಗ್ಗ : ಬಿ.ಪಿ.ಎಲ್. ಪಡಿತರ ಚೀಟಿಗಳ ಮಾನದಂಡವನ್ನು ಕೂಡಲೇ ರಾಜ್ಯ ಸರ್ಕಾರ ಬದಲಾಯಿಸಿ, ವಾರ್ಷಿಕ ವರಮಾನವನ್ನು ಕನಿಷ್ಠ ೫.೦೦ ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಮುಖ್ಯಸ್ಥ ಕಲ್ಲೂರು ಮೇಘರಾಜ, ಬಿಪಿಎಲ್ ಕಾರ್ಡ್ ಹೊಂದಲು, ಕೇಂದ್ರದ ನೀತಿ ಆಯೋಗವು ರೂಪಿಸಿರುವ ಮಾನದಂಡಗಳ ಅನ್ವಯ ರಾಜ್ಯದಲ್ಲಿ ಸರಿಸುಮಾರು ೪,೫೬,೬೭೫ ಬಿ.ಪಿ.ಎಲ್. ಕಾರ್ಡ್ಗಳು ರದ್ದಾಗಿವೆ. ಇದು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮರ್ಮಾಘಾತವಾಗಿದೆ. ಬಿ.ಪಿ.ಎಲ್. ಕಾರ್ಡ್ ಪಡೆಯಲು ೧.೨೦ ವಾರ್ಷಿಕ ಆದಾಯ ಮಿತಿಯನ್ನು ಅಳವಡಿಸಿರುವುದರಿಂದ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ವರ್ಗದ ಹಾಗೂ ಬಡ ಕುಟುಂಬಗಳ ಅನ್ನದ ತುತ್ತನ್ನೇ ಕಿತ್ತುಕೊಂಡಂತಾಗುತ್ತಿದೆ ಎಂದಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್.ಎಫ್.ಎಸ್.ಎ) ಅನ್ವಯ ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ ೧೪ ಲಕ್ಷ ಬಿಪಿಎಲ್ ಕಾರ್ಡ್ಗಳಿವೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಮಾಹಿತಿ ತಿಳಿಸುತ್ತದೆ. ಆದರೆ ವಾಸ್ತವವಾಗಿ ಈ ಹೆಚ್ಚುವರಿ ಬಿ.ಪಿ.ಎಲ್. ಕಾರ್ಡ್ಗಳಗೂ ಹಾಗೂ ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ರದ್ದಾಗಿರುವ ೪,೫೬,೬೭೫ ಬಿ.ಪಿ.ಎಲ್.

ಕಾರ್ಡ್ಗಳಗೂ ಸಂಬಂಧವೇ ಇಲ್ಲ. ಒಂದೊಮ್ಮೆ ಈ ರೀತಿ ಅರ್ಹತೆಯುಳ್ಳ ಬಿ.ಪಿ.ಎಲ್. ಕಾರ್ಡ್ಗಳನ್ನು ರದ್ದು ಮಾಡಿದರೆ ಬಡ ಕುಟುಂಬಗಳು ಈಗ ಪಡೆಯುತ್ತಿರುವ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಭಾಗ್ಯ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ ಮುಂತಾದ ಸಾಮಾಜಿಕ ಬದ್ಧತೆಯ ಯೋಜನೆಯ ಲಾಭವನ್ನು ಪಡೆಯುವಲ್ಲ ವಂಚಿತರಾಗುತ್ತಾರೆ ಎಂದರು.
ಈ ಹಿನ್ನೆಲೆಯಲ್ಲಿ ಸರ್ಕಾರ ೨೦ ವರ್ಷಗಳ ಹಿಂದಿನ ಅಂದರೆ ಓಬಿರಾಯ ಕಾಲದ ಬಿ.ಪಿ.ಎಲ್. ಕಾರ್ಡ್ಗಳನ್ನು ನೀಡಲು ನಿಗದಿ ಮಾಡಿರುವ ಮೇಲ್ಕಂಡ ಮಾನದಂಡವನ್ನು ಕೂಡಲೇ ಬದಲಿಸಿ ರಾಜ್ಯದಲ್ಲಿ ಅರ್ಹರಿಗೆ ಬಿ.ಪಿ.ಎಲ್. ಕಾರ್ಡ್ಗಳು ದೊರಕುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯಾದ್ಯಂತ ೮ ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ಅವೈಜ್ಞಾನಿಕ ಮಾನದಂಡದಿಂದ ರದ್ದುಪಡಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಮೂಲಕ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಅನರ್ಹರ ಪಟ್ಟಿ ಮಾಡಿರುವುದನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದರು.