ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳುತ್ತಿರುವ ಪತ್ರಿಕಾ ದಸರಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ಪತ್ರಕತರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ, ಪತ್ರಿಕಾ ಬಳಗಕ್ಕೆ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ : ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳು ಸೆ.೨೦ರ ಬೆಳಿಗ್ಗೆ ೧೧ ಗಂಟೆಗೆ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಚಲಿತ ವಿದ್ಯಮಾನ (ಮುಂದೆ ವಿಷಯ ನೀಡಲಾಗುವುದು) ಕುರಿತು ಸ್ಪರ್ಧೆ ನಡೆಯುವುದು. ಈ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ವಿ. ಟಿ. ಅರುಣ್ ಮೊ.೯೧೪೧೬ ೩೦೦೨೫, ಕೆ. ಆರ್. ಸೋಮನಾಥ್ ೯೪೪೮೬೨೮೧೩೩. ಸಂಪರ್ಕಿಸಬಹುದು.

ಸಾರ್ವಜನಿಕರಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ : ರೀಲ್ಸ್ ಸ್ಪರ್ಧೆ: ೧ ನಿಮಿಷ ಅವಧಿಯೊಳಗಿನ ರೀಲ್ಸ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಶಿವಮೊಗ್ಗದ ಇತಿಹಾಸ, ಗತವೈಭವ, ಐತಿಹಾಸಿಕ ಸ್ಥಳಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು ಇದಕ್ಕೆ ಪೂರಕವಾದ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.ರೀಲ್ಸ್ಗಳನ್ನು ಸೆ. ೨೦ ರೊಳಗೆ ಚೈತ್ರಾ ಮೊ.೭೬೭೬೨೩೬೬೯೦ಗೆ ಕಳುಹಿಸಬಹುದು.

ಪದಬಂಧ ಸ್ಪರ್ಧೆ: ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆಯನ್ನು ಸೆ.೨೦ರಂದು ಹಮ್ಮಿಕೊಂಡಿದ್ದು, ಸ್ಥಳ ತಿಳಿಸಲಾಗುವುದು. ಹೆಸರು ನೋಂದಾಯಿಸಲು ಹಾಲಸ್ವಾಮಿ ಮೊ. ೯೪೪೮೧೩೮೧೮೩ ಸಂಪರ್ಕಿಸಿ. ಪತ್ರಿಕಾ ಬಳಗ ಶಿವಮೊಗ್ಗ ನಗರದ ಪತ್ರಕರ್ತರು, ಪತ್ರಿಕಾ
ಸಿಬ್ಬಂದಿ, ಪತ್ರಿಕಾ ವಿತರಕರಿಗೆ ಪ್ರತ್ಯೇಕವಾಗಿ ಪಿಕ್ ಅಂಡ್ ಸ್ಪೀಚ್, ಪಿಕ್ ಅಂಡ್ ಆಕ್ಟ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಸೆ.೨೦ರಂದು ನಡೆಸಲು ಉದ್ದೇಶಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೈದ್ಯ ೮೩೧೦೬೭೯೯೨೫, ಹಾಲಸ್ವಾಮಿ ೯೪೪೮೧೩೮೧೮೩, ನಾಗರಾಜ್ ನೇರಿಗೆ ೯೩೪೧೧೧೦೭೨೮, ಚಂದ್ರಶೇಖರ್ ೯೮೪೫೪೮೪೮೨೪ ಸಂಪರ್ಕಿಸಬಹುದು.