
ಶಿವಮೊಗ್ಗ,ಜು.08:
ಶಿವಮೊಗ್ಗ ಜಿಲ್ಲೆಯ ಕೊರೊನಾ ಏರಿಕೆ ಬಗ್ಗೆ ಭಯ ಹೆಚ್ಚುತ್ತಿದೆ. ಮತ್ತೆ 33 ಜನರಿಗೆ ಇಂದು ಸೊಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ ಅಂದರೆ ನಾಳೆ ಬಿತ್ತರವಾಗುವ ವರದಿಯೊಳಗಿನ ಮಾಹಿತಿಗೆ ಸೇರಿಕೊಂಡಿದೆ.
ಕಳೆದ ನಾಲ್ಕು ದಿನದಿಂದ ದಿನಪ್ರತಿ 23, 23, 31,8,24,8 ಹಾಗೂ ಇಂದು ಬಿತ್ತರವಾದ 17ರ ನಂತರ ನಾಳೆ ಕನಿಷ್ಟ 33 ಜನರಿಗೆ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಈ ವರದಿ ನಾಳೆ ಸಂಜೆಯ ಹೊತ್ತಿಗೆ ಅಧಿಕೃತವಾಗಿ ಹೊರಬೀಳಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ನಿನ್ನೆ 318 ರಲ್ಲಿದ್ದ ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ 350ರ ಅಂಚಲ್ಲಿ ನಿಲ್ಲುತ್ತಿದೆ.
ಇಂದು ಸಂಜೆ ಹೊರಬಂದ ವರದಿಯಲ್ಲಿ ತ್ರಿಶತಕದ ದಾಟಿದ ಸಂಖ್ಯೆ 318 ಕಂಡಿದೆ.
ನಿನ್ನೆ ರಾತ್ರಿ ತುಂಗಾತರಂಗ ಪತ್ರಿಕೆ ಹೇಳಿದ್ದಂತೆ ಜಿಲ್ಲೆಯಲ್ಲಿ 17 ಪ್ರಕರಣ ಬಂದಿದೆ. ಇದರಲ್ಲಿ ಶಿವಮೊಗ್ಗ ನಗರ ಹಾಗೂ ಸೊರಬದ ಬಹುತೇಕ ಕೇಸುಗಳಿವೆ.
ನಗರದಲ್ಲಿ 30ಕ್ಕೂ ಹೆಚ್ಚು ಸೀಲ್ಡ್ಡೌನ್ ಹಾಗೂ ಕಂಟೋನ್ಮೆಂಟ್ ಏರಿಯಾಗಳಿವೆ. ಸಂಬಂಧಿಸಿವರು ಅಲ್ಲಿನ ಅಗತ್ಯ ವಸ್ತುಗಳು ದೊರಕುವಂತೆ ನೋಡಿಕೊಳ್ಳದಿದ್ದರೆ ಇಡೀ ನಗರದಾದ್ಯಂತ ಕೊರೊನಾ ಕಿರಿಕ್ ಹರಡಲಿದೆ ಎಂಬುದು ಸತ್ಯ.