ಕಾಲ್ಪನಿಕ ಚಿತ್ರ

ಶಿವಮೊಗ್ಗ: ಕುಡಿತ ಬಿಡಿಸಲು ಮೂರು ದಿನದಿಂದ ಶತ ಪ್ರಯತ್ನ ಕುಟುಂಬವೊಂದರ ದುರಂತ ಕಥೆ ಇದು. ಇಬ್ಬರು ಅಜ್ಜಿಯರ ಮೇಲೆ ಸುಮಾರು 30ವರ್ಷದ ಮೊಮ್ಮಗ ಮಚ್ಚಿನಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲ್ಲಲು ಯತ್ನಿಸಿರುವ ಘಟನೆ ಇಂದು ಭದ್ರಾವತಿ ನಗರದ ಹೊಸಮನೆಯಲ್ಲಿ ನಡೆದಿದೆ.
ಒಂದೆಡೆ ಕೆಲಸವಿಲ್ಲ, ದುಡಿಮೆಯ ಹಣವಿಲ್ಲ. ಆದರೂ ಕಲಿತ ಚಟ ಬಿಡಲಾಗದ ಸ್ಥಿತಿ. ಕುಡಿತದ ಅಮಲು ಏರಿಸಿಕೊಳ್ಳಲು ಅಜ್ಜಿಯ ಪೆಕ್ಷನ್ ಹಣ ಬಳಸಿಕೊಳ್ಳುತ್ತಿದ್ದ ಮೊಮ್ಮಗನನ್ನು ಸರಿ ಮಾಡಲು ಸಾಕಷ್ಟು ಯತ್ನಿಸಿದ್ದರು ಇಂದು ಮತಿ ಭ್ರಮಣೆಯಾದವನಂತೆ ವರ್ತಿಸಿ ಕುಡಿಯಲು ಹಣ ಕೊಡದಿದ್ದಾಗ ಸ್ವಂತ ಅಜ್ಜಿಯನ್ನೇ ಕೊಚ್ಚಿ ಕೊಂದ ಘಟನೆ ಇದಾಗಿದೆ.
ಅಜ್ಜಿ ಕಿಟ್ಟಮ್ಮನ ಬಳಿ ಮೊಮ್ಮಗ ಅರುಣ್ ಕುಮಾರ್ ಕುಡಿಯಲು ಹಣ ಕೇಳಿದ್ದಾನೆ ಕುಡಿದು ಹಾಳಾಗುತ್ತಾನೆ ಎಂಬ ಕಾರಣಕ್ಕೆ ಹಣ ಕೊಡಲು ನಿರಾಕರಿಸಿದ್ದಾರೆ. ಕುಡಿತದ ಅಮಲಿಗೆ ಬಿದ್ದ ಈ ಮೊಮ್ಮಗ ಕೋಪಗೊಂಡು ಅಡುಗೆ ಕೋಣೆಯಲ್ಲಿದ್ದ ಕುಡುಗೊಲು ತೆಗೆದುಕೊಂಡು ಬಂದು ಸಿಕ್ಕ ಸಿಕ್ಕ ಕಡೆ ಇರಿದ್ದಿದ್ದಾನೆ. ಅಜ್ಜಿಯ ಕುತ್ತಿಗೆ ಹಾಗೂ ತಲೆಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಘಟನೆ ತಡೆಯಲು ದೂರದ ಸಂಬಂಧಿ ವೃದ್ದೆ ಪಾಪಮ್ಮ ಅವರ ಮೇಲೂ ಸಹ ಹಲ್ಲೆ ನಡೆಸಿದ್ದಾನೆ.
ಗಂಭೀರ ಗಾಯಗೊಂಡ ಸುಮಾರು 75 ವರ್ಷ ವಯಸ್ಸಿನ ಅಜ್ಜಿ ಕಿಟ್ಟಮ್ಮ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾಗ ಸುಮಾರು 70ವರ್ಷ ವಯಸ್ಸಿನ ಪಾಪ್ಪಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡಲೆತ್ನಿಸಿದ್ದ ಅರುಣ್‌ನನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಬಡಿದು ಕೈಕಾಲು ಕಟ್ಟಿ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕುಡಿತದ ಅಮಲು ಎಷ್ಟಿದೆ ನೋಡಿ. ಇಬ್ಬರು ವೃದ್ದೆಯರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಅರುಣ್‌ನಂತಹ ಕುಡಿತದ ಅಮಲಿನ ವಿಕೃತ ಮನಸ್ಸಿನ ವ್ಯಕ್ತಿಗಳಿಂದ ಹೇಗೆ ತಾನೆ ಸ್ವಸ್ಥ ಸಮಾಜ ಸಾಧ್ಯ.?

By admin

ನಿಮ್ಮದೊಂದು ಉತ್ತರ

You missed

error: Content is protected !!