ಶಿವಮೊಗ್ಗ: ಮಹಾಮಾರಿ ಕೊರೊನಾ ಇಡೀ ದೇಶವನ್ನು ಕಾಡುತ್ತಿದ್ದು, ಅದನ್ನು ತಡೆಹಿಡಿಯುವ ನಿಟ್ಟಿನಲ್ಲಿ ಮೇ ೧೪ ರವರೆಗೆ ಕರ್ನಾಟಕ ಸರ್ಕಾರ ಜನತಾ ಕರ್ಫ್ಯೂ/ ಲಾಕ್ ಡೌನ್ ಜಾರಿಗೆ ತಂದಿ ರುವುದು ಸ್ವಾಗತಾರ್ಹ.
ಈ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ನೌಕರರನ್ನು ಹೊರ ತುಪಡಿಸಿ ಇನ್ನೆಲ್ಲಾ ಖಾಸಗಿ ನೌಕರರು, ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ರೈತರ ಜೀವನ ಈಗಾಗಲೇ ಮೊದಲ ಕೊರನಾ ಅಲೆಯ ಲಾಕ್ ಡೌನ್‌ನಿಂದ ದುಸ್ಥರ ಸ್ಥಿತಿ ತಲುಪಿದ್ದು ಇನ್ನೇನು ಚೇತರಿ ಸಿಕೊಳ್ಳುತ್ತಿರಬೇಕಾದರೆ ಎರಡನೇ ಅಲೆಯ ಲಾಕ್ ಡೌನ್/ ಜನತಾ ಕರ್ಪ್ಯೂ ಗಾಯದೆ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.


ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಈ ಎಲ್ಲಾ ವರ್ಗದ ಜನರು ಬ್ಯಾಂಕ್‌ಗಳಲ್ಲಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಮಾಡಿದ ಸಾಲಗಳ ಕಂತುಗಳನ್ನು ಪಾವತಿಸಲು ದೂರವಾಣಿ ಮೂಲಕ ಒತ್ತಾಯಿಸು ತ್ತಿದ್ದಾರೆ. ಇದು, ಉಸಿರಾಡುತ್ತಿರುವ ವ್ಯಕ್ತಿಯ ಕುತ್ತಿಗೆ ಹಿಚುಕುವಂತ ವಾತವಾರಣವನ್ನು ನಿರ್ಮಾಣ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.


ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಾಲದ ಕಂತುಗಳನ್ನು ಲಾಕ್ ಡೌನ್/ ಜನತಾ ಕರ್ಪ್ಯೂ ಮುಗಿದು ಜನಜೀವನ ಸಹಜ ಸ್ಥಿತಿಗೆ ಮರುಳುವವರೆಗೆ ಒಂದು ತಿಂಗಳ ನಂತರ ಕಂತುಗಳ ಪಾವತಿಮಾಡಲು ಅವಕಾಶ ಕಲ್ಪಿಸುವಂತೆ ಎಲ್ಲಾ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚಿಸಿ ಜನರ ಆತಂಕ ದೂರಮಾಡ ಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನಕಾರ್ಯದರ್ಶಿ ಪ್ರವೀಣ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!