ಶಿವಮೊಗ್ಗ, ಆ.೧೬:
ಕ್ರೀಡೆಯಲ್ಲಿ ಸೋಲುವುದು ಸಾಮಾನ್ಯ, ಆದರೆ ಕ್ರೀಡಾಪಟು ಎಂದೂ ಕೂಡ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಅವರು ನಿನ್ನೆ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಶಿವಮೊಗ್ಗ ಇವರ ಸಂಯುಕ್ತ ಆಶಯದಲ್ಲಿ ನಡೆಸಲಾದ ಚುಂಚಾದ್ರಿ ಕಪ್ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ
ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದ ಅವರು, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಅಲ್ಲದೇ ಕ್ರೀಡೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.
ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ ಎಂದ ಅವರು, ಕ್ರೀಡೆ ತಮ್ಮ ಮಾನಸಿಕ ಬುದ್ದಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.

ಶ್ರೀಬೆಕ್ಕಿನ ಕಲ್ಮಟ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಮಹಾಸ್ವಾಮೀಜಿ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಿದ್ದರು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ.ಕೆ. ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಕೆ. ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ ಕಾಮತ್, ಕಾರ್ಯದರ್ಶಿ ಕೆ.ಎಸ್. ಶಶಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಬಾಲಕ ಮತ್ತು ಬಾಲಕಿಯರ ಮೂರು ಮತ್ತು ನಾಲ್ಕನೇ ಸ್ಥಾನದ ವಿವರ :
ಬಾಲಕಿಯರ ವಿಭಾಗದಲ್ಲಿ: ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಬಸವೇಶ್ವರ ಪ್ರೌಢಶಾಲೆ, ರಿಪ್ಪನ್ ಪೇಟೆ, ಹೊಸನಗರ ಇವರುಗಳ ಹಣಾ ಹಣಿಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಮೂರನೇ ಸ್ಥಾನವನ್ನು ಶ್ರೀ ಆದಿಚುಂಚನಗಿರಿ ಶಾಲೆ ತನ್ನದಾಗಿಸಿಕೊಂಡರೆ,ನಾಲ್ಕನೇ ಸ್ಥಾನವನ್ನು ಬಸವೇಶ್ವರ ಶಾಲೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬಾಲಕರ ವಿಭಾಗ : ಸೆಂಟ್ ಜೋಷಪ್ ಪ್ರೌಢಶಾಲೆ, ಸಾಗರ ಹಾಗೂ ಸರ್ಕಾರಿ ಪ್ರೌಢ ಶಾಲೆ, ಗುಡ್ಡೆಕೆರೆ, ತೀರ್ಥಹಳ್ಳಿ ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು.ಸೆಂಟ್ ಜೋಸೆಪ್ ಪ್ರೌಢಶಾಲೆ,ಸಾಗರ ಮೂರನೇ ಸ್ಥಾನವನ್ನು ಮುಡಿಗೇರಿಸಿಕೊಂಡಿತು.ಸರ್ಕಾರಿ ಪ್ರೌಢಶಾಲೆ, ಗುಡ್ಡೆಕೆರೆ, ತೀರ್ಥಹಳ್ಳಿ, ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಬಾಲಕ ಮತ್ತು ಬಾಲಕಿಯರ ಪ್ರಥಮ ಮತ್ತು ದ್ವಿತೀಯ ಸ್ಥಾನದ ವಿವರ :
ಬಾಲಕರ ವಿಭಾಗ : ಸರ್ಕಾರಿ ಪ್ರೌಢಶಾಲೆ ರಿಪ್ಪನ್ ಪೇಟೆ ಹೊಸನಗರ,ಹಾಗೂ ಬಿಜಿಎಸ್ ವಸತಿ ಪ್ರೌಢಶಾಲೆ ಶರಾವತಿ ನಗರ, ಶಿವಮೊಗ್ಗ.ಈ ಎರಡು ತಂಡಗಳ ಮಧ್ಯೆ ಅಂತಿಮ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ಕಂಡು ಬಂದಿತು. ದಾಳಿ ಮತ್ತು ಅಷ್ಟೇ ರಕ್ಷಣಾತ್ಮಕ ಆಟವನ್ನು ಕಾಣಬಹುದಾಗಿತ್ತು. ಮೊದಲನೇ ಸೆಟ್ಟಿನಲ್ಲಿ ಸರ್ಕಾರಿ ಪ್ರೌಢಶಾಲೆ,ಶಿವಮೊಗ್ಗದ ಬಿಜಿಎಸ್ ತಂಡ ೨೩ ಅಂಕ ಪಡೆದರೆ, ಸರ್ಕಾರಿ ಪ್ರೌಢಶಾಲೆ, ರಿಪ್ಪನ್ ಪೇಟೆ, ೨೫, ಅಂಕ ಪಡೆದು ಮೊದಲ ಸೆಟ್ ತನ್ನದಾಗಿಸಿಕೊಂಡಿತು, ಸರ್ಕಾರಿ ಪ್ರೌಢ ಶಾಲೆ ಎರಡನೇ ಸೆಟ್ ನಲ್ಲಿ ರೋಚಕ ಆಟದ ಪ್ರದರ್ಶನ ನೀಡಿ ೨೫ ಅಂಕಗಳನ್ನು ಪಡೆದು ಎರಡನೇ ಸುತ್ತನ್ನು ತನ್ನದಾಗಿಸಿಕೊಂಡ ಸರ್ಕಾರಿ ಪ್ರೌಢಶಾಲೆ, ೨೦೨೫ ರ ಚುಂಚಾದ್ರಿ ಕಪ್ ವಾಲಿಬಾಲ್ ಟ್ರೋಪಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಬಿಜಿಎಸ್ ವಸತಿ ಪ್ರೌಢಶಾಲೆ ಬಾಲಕರ ತಂಡವು ರೋಚಕ ಆಟದ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಬಾಲಕಿಯರ ವಿಭಾಗ : ಶ್ರೀ ನ್ಯಾಷನಲ್ ಪಬ್ಲಿಕ್ ಶಾಲೆ, ಶಿವಮೊಗ್ಗ. ಹಾಗೂ ಸಯಾದ್ರಿ ಪ್ರೌಢಶಾಲೆ, ತೀರ್ಥಹಳ್ಳಿ,ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು.ಮೊದಲ ಶೆಟ್ಟನ್ನ ಸಹ್ಯಾದ್ರಿ ಪ್ರೌಢಶಾಲೆ ತೀರ್ಥ ಹಳ್ಳಿ ಪಡೆದರೆ, ನ್ಯಾಷನಲ್ ಪಬ್ಲಿಕ್ ಶಾಲೆ ಎರಡನೇ ಸೆಟನ್ನು ತನ್ನದಾಗಿಸಿಕೊಂಡಿತು. ಪರಾಭವಗೊಂಡಿತು. ೩ನೇ ಸೆಟ್ಟಿನಲ್ಲಿಯೂ ಸಹ ಸಹ್ಯಾದ್ರಿ ಪ್ರೌಢಶಾಲೆ ಮತ್ತು ನ್ಯಾಷನಲ್ ಪಬ್ಲಿಕ್ ಶಾಲೆ ಬಾಲಕಿಯರು ಅತ್ಯಾಕರ್ಷಕ,ಮನಮೋಹಕ ಆಟದ ಪ್ರದರ್ಶನ ನೀಡಿದರು ಕೂಡ ಕೊನೆಯಲ್ಲಿ ವಿಜಯಮಾಲೆ ನ್ಯಾಷನಲ್ ಪಬ್ಲಿಕ್ ಶಾಲೆಗೆ ದಕ್ಕಿತು.
ಬಾಲಕರ ವಿಭಾಗದಲ್ಲಿ ವೈಯುಕ್ತಿಕ ಬಹುಮಾನ : ಬೆಸ್ಟ್ ಅಟ್ಯಾಕರ್- ಮಾಇಜ್ ಸೆಂಟ್ ಜೋಸೆಫ್ ಶಾಲೆ, ಬೆಸ್ಟ್ ಪಾಸರ್ – ಭುವನ್, ಆದಿಚುಂಚನಗಿರಿ ಪ್ರೌಢಶಾಲೆ , ಬೆಸ್ಟ್ ಆಲ್ ರೌಂಡರ್ -ರಶೀದ್,ಸರ್ಕಾರಿ ಪ್ರೌಢಶಾಲೆ,ಗುಡ್ಡೆಕೆರೆ, ಬೆಸ್ಟ್ ಬ್ಲಾಕರ್- ಚಂದು ಬಸವೇಶ್ವರ ಪ್ರೌಢ ಶಾಲೆ, ರಿಪ್ಪನ್ ಪೇಟೆ, ಬೆಸ್ಟ್ ಲೀಬ್ರೋ-ಶೃಜನ್,
ಬಾಲಕಿಯರ ವಿಭಾಗ : ಬೆಸ್ಟ್ ಅಟ್ಯಾಕರ್ -ಸಂಕಲ್ಪ ಆದಿಚುಂಚನಗಿರಿ ಶಾಲೆ, ಬೆಸ್ಟ್ ಪ್ಲೆಯರ್ ಆಪ್ ದಿ ಟೂರ್ನಮೆಂಟ್ – ಸಹ್ಯಾದ್ರಿ ಶಾಲೆ, ತೀರ್ಥ ಹಳ್ಳಿ. ಬೆಸ್ಟ್ ಡಿಫೆನ್ಸ್ ಪ್ಲೇಯರ್ – ಪ್ರತೀಕ್ಷಾ ನ್ಯಾಷನಲ್ ಪಬ್ಲಿಕ್ ಶಾಲೆ ಶಿವಮೊಗ್ಗ. ಬೆಸ್ಟ್ ಬೆಸ್ಟ್ ಪಾಸರ್ – ಸುರಕ್ಷಾ ಬಸವೇಶ್ವರ ತಂಡ ರಿಪ್ಪನ್ ಪೇಟೆ, ಬೆಸ್ಟ್ ಬ್ಲಾಕರ್ – ಸುರುಚಿ ನ್ಯಾಷನಲ್ ಪಬ್ಲಿಕ್ ಶಾಲೆ, ಶಿವಮೊಗ್ಗ. ಇವರುಗಳು ವಯುಕ್ತಿಕ ಬಹುಮಾನಗಳನ್ನು ಪಡೆದ ಪ್ರತಿಭಾನ್ವಿತರಾಗಿರುತ್ತಾರೆ.
ವಿಜೇತ ತಂಡಗಳಿಗೆ ಅತ್ಯಾಕರ್ಷಕ ಪಾರಿತೋಷಕ, ವಯುಕ್ತಿಕ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಕ್ರೀಡಪಟುಗಳಿಗೆ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪೂಜ್ಯರಿಂದ ಗೌರವಿಸಲಾಯಿತು.