ಶಿವಮೊಗ್ಗ
ಸಂಘಟನೆಯೊಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಸಮಾರಂಭದ ನೆಪದಲ್ಲಿ ನಡೆಸುತ್ತಿದ್ದ ಅಪ್ರಾಪ್ತ ವಯಸ್ಕರ ವಿವಾಹ ಕಾರ್ಯಕ್ರಮವನ್ನು ತಹಶೀಲ್ದಾರ್ ವಿ.ಎಸ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್
ಭೇಟಿ ನೀಡಿ ಅಪ್ರಾಪ್ತಾರ ವಿವಾಹವನ್ನು ತಡೆದು ನಿಲ್ಲಿಸಿದ ಘಟನೆ ನಗರದ ಶುಭಮಂಗಳ ಸಮುದಾಯಭವನದಲ್ಲಿ ನಡೆದಿದೆ

ತಹಶೀಲ್ದಾರ್ ವಿ.ಎಸ್.ರಾಜೀವ್
ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗೂಬಾಯಿ
ಮತ್ತು ರೇಖಾ ಮಕ್ಕಳ ಸಹಾಯವಾಣಿ
ಹಾಗೂ ವೀನೊಬನಗರ ಪೋಲಿಸ್ ಅಧಿಕಾರಿಗಳೊಂದಿಗೆ ನಗರದ ಶುಭಮಂಗಳ ಸಮುದಾಯ ಭವನಕ್ಕೆ ಭೇಟೆ ನೀಡಿ ವಿವಾಹ ಜೋಡಿಗಳ
ಸಂಪೂರ್ಣ ದಾಖಲೆಗಳ ಪರೀಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಬಹಿರಂಗ ಸತ್ಯ ತಿಳಿದಿದೆ

ಅಯೋಜಕರು ಎಂಟು ಜೋಡಿಗಳ ವಿವಾಹ ಕಾರ್ಯಕ್ರಮವನ್ನು ನಡೆಸಲು ಸಿದ್ದತೆ ನಡೆಸಿದ್ದು ತಹಶೀಲ್ದಾರ್ ವಿ.ಎಸ್ .ರಾಜೀವ್ ಅಧಿಕಾರಿಗಳ ತಂಡ ಅಪ್ರಾಪ್ತ ವಯಸ್ಕರ ಎರಡು ಜೋಡಿ ವಿವಾಹ ನಡೆಸಲು ಅನುಮತಿ ನೀಡದೆ ಆರು ಜೋಡಿಗಳ

ವಿವಾಹ ನಡೆಸಲು ಮಾತ್ರ ಅನುಮತಿ ನೀಡಿ ವಿವಾಹ ಅಯೋಜನೆಗೆ ಸಿದ್ದತೆಗೆ ತಯಾರಿ ನಡೆಸಿದ ಸಂಘಟನೆಗೆ ಅಪ್ರಾಪ್ತರ ವಿವಾಹ ನಡೆಸಲು ಇನ್ನು ಮುಂದೆ ಕೈ ಹಾಕದಂತೆ ತಹಶೀಲ್ದಾರ್ ವಿ.ಎಸ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ಖಡಕ್
ಎಚ್ಚರಿಕೆ ನೀಡಿದ್ದಾರೆ
ನಂತರ ಆರು ಜೋಡಿಗಳ. ವಿವಾಹ ಕಾರ್ಯಕ್ರಮ ನಡೆದಿದೆ.