ಶಿವಮೊಗ್ಗ : ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಈ ಅನಾಮಿಕ ವ್ಯಕ್ತಿ ಯಾರು ಎಂಬುವುದು ಎಲ್ಲರಿಗೂ ತಿಳಿಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸುಳ್ಳು ಪ್ರಚಾರ ಗಿಟ್ಟಿಸಲು ಹೊರಟಿರುವ ಸಂಸ್ಥೆ ಹಿಂದೆ ಯಾರಿದ್ದಾರೆ. ಅನಾಮಿಕ ವ್ಯಕ್ತಿ ಯಾರು…? ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದರು.

ಹಿಂದೂ ಸಮಾಜವನ್ನು ಅಪಮಾನ ಮಾಡಲು ಹೊರಟಿದ್ದಾರೆ ಧರ್ಮಸ್ಥಳದಂತ ಪುಣ್ಯಕ್ಷೇತ್ರದ ಬಗ್ಗೆ ಜನರಲ್ಲಿ ಅನುಮಾನ ಸೃಷ್ಟಿಸಲು ಪ್ರಯತ್ನಿಸಿದ ವ್ಯಕ್ತಿಗಳು ಯಾರು..? ರಾಜ್ಯ ಸರ್ಕಾರ ತಕ್ಷಣ ಇದನ್ನು ಕಂಡು ಹಿಡಿಯಲಿ.. ೧೩ ಕಡೆ ನೂರಾರು ಹೆಣ ಹೂತು ಹಾಕಿದ್ದೇವೆ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಅವನ ಹಿಂದೆ ಯಾರ್ಯಾರು ಇದ್ದಾರೆ..? ಅವನೊಬ್ಬನೇ ನೂರಾರು ಹೆಣ ಹೂಳಲು ಸಾಧ್ಯವೇ..? ಅವನ ಹಿಂದೆ ಯಾವ ರಾಷ್ಟ್ರದ್ರೋಹಿ ಹಾಗೂ ಧರ್ಮ ದ್ರೋಹಿ ಗುಂಪಿದೆ. ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ ನಡೆದಿದೆ. ಅನಾಮಿಕ ವ್ಯಕ್ತಿ ಸ್ಥಳ ತೋರಿಸಲು ವಿಫಲವಾಗಿದ್ದಾನೆ. ಸರ್ಕಾರ ಮೊದಲು ಅನಾಮಿಕ ವ್ಯಕ್ತಿಯನ್ನು ಅರೆಸ್ಟ್ ಮಾಡಲಿ..ಮೊದಲು ಅವನಿಂದ ಪೂರ್ಣ ವಿಚಾರ ತಿಳಿದುಕೊಳ್ಳಲಿ ಎಂದರು.

ರಾಜ್ಯ ಸರ್ಕಾರ ಈ ನಡುವೆ ಹೊಸ ಆದೇಶ ಹೊರಡಿಸಿದೆ. ಈ ವಿಚಾರಕ್ಕೆ ಯಾರನ್ನು ಬೇಕಾದರೂ ವಿಚಾರಣೆ, ಅರೆಸ್ಟ್ ಮಾಡಬಹುದು ಎಂದಿದ್ದಾರೆ. ಅನಾಮಿಕ ವ್ಯಕ್ತಿಯನ್ನ ಅರೆಸ್ಟ್ ಮಾಡಿ, ಸತ್ಯವನ್ನ ಬಹಿರಂಗ ಪಡಿಸಿ. ಯಾರು ಕೂಡ ಹಿಂದೂ ಧರ್ಮ ಹಾಗೂ ಧರ್ಮಸ್ಥಳವನ್ನ ಹಾಳು ಮಾಡಲು ಸಾಧ್ಯವಿಲ್ಲ. ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಲು ಸಾಧ್ಯವಿಲ್ಲ. ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ. ಘಟನೆಯ ಹಿಂದಿರುವ ಧರ್ಮದ್ರೋಹಿ ಗುಂಪು, ಷಡ್ಯಂತ್ರ ಏನೇಂದು ತಿಳಿಯಬೇಕು. ಗಾಳಿ ಆಂಜನೇಯ ದೇವಾಲಯವನ್ನು ಸರ್ಕಾರ ವಶಕ್ಕೆ ತೆಗೆದುಕೊಂಡಿತ್ತು.

ಹಿಂದೂ ಸಮಾಜ ಪ್ರತಿರೋಧ ತೋರಿದ್ದಕ್ಕೆ ವಾಪಸ್ ಆಡಳಿತ ಮಂಡಳಿಗೆ ನೀಡಿದ್ದಾರೆ. ಧರ್ಮಸ್ಥಳವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕುತಂತ್ರ ಮಾಡಿದ್ದಾರೆ. ಈ ಕುತಂತ್ರ ನಡೆಸಿದ ವ್ಯಕ್ತಿ, ಸಂಘಟನೆ ಯಾರು ಎಂದು ಹೊರಬರಬೇಕು. ಅನಾಮಿಕ ವ್ಯಕ್ತಿಯ ಹೆಸರು ಬಹಿರಂಗ ಆಗಿ, ಕಾನೂನು ಪ್ರಕಾರ ಕ್ರಮ ಆಗಬೇಕು. ಶಾರೀಖ್ ನಿಂದ ಧರ್ಮಸ್ಥಳ ಬ್ಲಾಸ್ಟ್ಗೆ ಪ್ಲಾನ್ ನಡೆದಿತ್ತು ಎಂದು ಇಡಿ ಹೇಳಿದೆ. ಧರ್ಮಸ್ಥಳ ಸ್ಫೋಟ ಪ್ಲಾನ್ ಇಡಿ ತನಿಖೆ ಮೂಲಕ ಈಗ ಹೊರಗೆ ಬಂದಿದೆ. ಕುಕ್ಕರ್ ಬ್ಲಾಸ್ಟ್ ಆದಾಗ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿ ಹಗುರವಾಗಿ ತಗೊಂಡು, ಎಲ್ಲದ್ದಕ್ಕೂ ಕೋಮು ಬಣ್ಣ ಮಾಡ್ತಾರೆ ಎಂದಿದ್ದರು. ಈಗ ಡಿ.ಕೆ.ಶಿವಕುಮಾರ್ ಎನು ಹೇಳ್ತಾರೆ..? ೯೦ ನಿಮಿಷದಲ್ಲಿ ಆಗಬೇಕಾದ ಬ್ಲಾಸ್ಟ್ ೯ ಸೆಕೆಂಡ್ಗೆ ಆತ ಫೀಡ್ ಮಾಡಿದ್ದರಿಂದ ಧರ್ಮಸ್ಥಳ ಉಳಿಯಿತು. ಆರೋಪಿಯ ಷಡ್ಯಂತ್ರ ಬಯಲಾಯಿತು. ಪುಣ್ಯಕ್ಷೇತ್ರವನ್ನು ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿ. ರಾಷ್ಟ್ರದ್ರೋಹಿ ಸಂಘಟನೆ, ಅನಾಮಿಕ ವ್ಯಕ್ತಿಯ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದರು.
ಹಿಂದೂ ಸಮಾಜ ಸರ್ಕಾರದ ವಿರುದ್ಧ ತಿರುಗಿಬೀಳುವ ಸ್ಥಿತಿ ಬರುತ್ತೆ. ಎಸ್ಐಟಿ ತಂಡ ಯಾವುದೇ ಮುಲಾಜಿಲ್ಲದೇ ತನಿಖೆ ಮಾಡುತ್ತಿದೆ. ಎಸ್ಐಟಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಈಶ್ವರಪ್ಪ ಎಸ್ಐಟಿ ಪ್ರಾಮಾಣಿಕ ತನಿಖೆ ಮುಂದುವರಿಸಲಿ ಎಂದರು.