ಶಿವಮೊಗ್ಗ,ಆ.09:
ಯುವಶಕ್ತಿ ದೇಶದ ಶಕ್ತಿ, ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಪ್ರೋತ್ಸಾಹ ನೀಡುವ ಉದ್ದೇಶದಿಂದ 1960ರ ಆಗಸ್ಟ್ 9 ರಂದು ಭಾರತದ ಮಾಜಿ ಪ್ರಧಾನ ಮಂತ್ರಿ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಪ್ರೇರಣೆಯಿಂದ ಭಾರತೀಯ ಕಾಂಗ್ರೆಸ್ ಸ್ಥಾಪಿಟಲ್ಪಟ್ಟು ದೇಶಾದ್ಯಂತ ಲಕ್ಷಾಂತರ ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಲು ಸಾಮಾಜಿಕ ಕಾರ್ಯಗಳನ್ನು ನಡೆಸಲು ಯುವ ಕಾಂಗ್ರೆಸ್ ಸಂಘಟನೆಯನ್ನು ಭದ್ರಬುನಾದಿಯಾಗಿ ಆಯ್ಕೆ ಮಾಡಿಕೊಂಡಿರುವುದು ಹಲವಾರು ನಿರ್ದೇಶನಗಳಿವೆ ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ. ಗಿರೀಶ್ ತಿಳಿಸಿದ್ದಾರೆ.

ಇಂದು ರಾಜ್ಯ ಮತ್ತು ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಘಟಾನುಘಟಿ ನಾಯಕರುಗಳು ಯುವ ಕಾಂಗ್ರೆಸ್ ಸಂಘಟನೆ ಮುಖಾಂತರ ದೇಶದ ಐಕ್ಯತೆ ಮತ್ತು ಸಹಬಾಳ್ವಗೆ ತಳ ಹಂತದಿಂದ ಹೋರಾಟ ನಡೆಸಿ ಬಂದ ಹೋರಾಟಗಾರರು ಎಂದಿದ್ದಾರೆ

ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ಪಕ್ಷ ಸಂಘಟನೆ ಮಾಡುವುದರೊಂದಿಗೆ, ಸಾಮಾಜಿಕ ಕ್ಷೇತ್ರದಲ್ಲೂ ಸಹ ಯುವ ಕಾಂಗ್ರೆಸ್ ಸಂಘಟನೆಯ ಕಾರ್ಯಕರ್ತರು ತೊಡಗಿಸಿಕೊಂಡು ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಇಡೀ ದೇಶಾದ್ಯಂತ ನೆರೆ, ಸಂಕ್ರಾಮಿಕ ರೋಗ ಹಾಗೂ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯಗಳನ್ನು ನಿರ್ವಹಿಸಿ ಜನರ ರಕ್ಷಣೆಗೆ ಸದಾ ಸಿದ್ದರಾಗಿರುವ ಯುವ

ಕಾಂಗ್ರೆಸ್ ಸಂಘಟನೆ ಬಂದ ಯುವಕರು ಇಂದು ಈ ದೇಶದ ಉತ್ತಮ ಭವಿಷ್ಯ ರೂಪಿಸಲು ಉತ್ತಮ ಚಿಂತನೆಯೊಂದಿಗೆ ಸಂವಿಧಾನದ ರಕ್ಷಣೆಗೆ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ

ಶಿವಮೊಗ್ಗ ಜಿಲ್ಲೆಯಲ್ಲೂ ಸಹ ರೈತರ ,ಕಾರ್ಮಿಕರ, ವಿದ್ಯಾರ್ಥಿಗಳ, ಶ್ರೀಸಾಮಾನ್ಯರ ಪರವಾಗಿ ಯುವ ಕಾಂಗ್ರೆಸ್ ಸಂಘಟನೆ ಅತಿ ಹೆಚ್ಚು ಬಲಿಷ್ಠವಾಗಿ ಹೋರಾಟಗಳನ್ನು ಮಾಡಿಕೊಂಡು, ಸಂಘಟನಾತ್ಮಕ ವಾದಂತಹ ಚಳುವಳಿಗಳನ್ನ ನಡೆಸಿ ನೋಂದವರಿಗೆ ನ್ಯಾಯ

ಕೊಡಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದ್ದು. ಇನ್ನು ಮುಂದಿನ ದಿನಮಾನಗಳಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯ ದೇಶದ ಎಲ್ಲಾ ಯುವ ಮಿತ್ರರು ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್ ಸಂಘಟನೆಗೆ ಸೇರ್ಪಡೆಗೊಂಡು. ಈ ದೇಶದ ಸಾಮಾನ್ಯರ ಧ್ವನಿಯಾಗಿ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಯವರ ಹೆಜ್ಜೆಯೊಂದಿಗೆ ನಾವುಗಳು ಹೆಜ್ಜೆ ಹಾಕುತ್ತಾ ಸಾಮಾಜಿಕ ನೆಲಗಟ್ಟಿನಲ್ಲಿ ನೊಂದವರ ಪರವಾಗಿ ನ್ಯಾಯ ಕೊಡಿಸೋಣ ಎಂದು ಭಾರತೀಯ ಯುವ ಕಾಂಗ್ರೆಸ್ ನ 65ನೇ ವರ್ಷದ ಸಂಸ್ಥಾಪನಾ ದಿನದಂದು ಎಲ್ಲ ಯುವ ಮಿತ್ರರೂ ಪ್ರತಿಜ್ಞೆ ಮಾಡಿದ್ದಾರೆ.