ಎಲ್ಲರಲ್ಲಿ ಅಡಗಿರುವ ವಿಶೇಷ ಜ್ಞಾನವನ್ನು ಇತರರಿಗೂ ಹರಡಲು ಹಾಗು ಬರಹ ರೂಪದಲ್ಲಿ ವ್ಯಕ್ತಪಡಿಸಲು ಅನುಕೂಲ ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಯೋಜಿಸಿರುವ “ಸಂಸ್ಕೃತ ಶ್ರಾವಣ ಮಾಸೋತ್ಸವ” ಪ್ರಯುಕ್ತ ಪ್ರಬಂದ ಬರೆಯುವ ಕಾರ್ಯಕ್ರಮ ವನ್ನು ನನ್ನ ಕನಸಿನ ಶಿವಮೊಗ್ಗದ ಪ್ರಮುಖರಾದ ಎನ್ ಗೋಪಿನಾಥ್ ಉದ್ಘಾಟಿಸಿ ಮಾತನಾಡಿ ದರು.


ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಒಟ್ಟು ಕುಟುಂಬದ ಜೀವನ ಶೈಲಿ ಇತ್ತು. ಆದರೆ ಇಂದು ನ್ಯಾನೋ ಕುಟುಂಬ ಪದ್ದತಿಯಿಂದ, ಮಕ್ಕಳಿಗೆ ಸಂಬಂಧದ ಅರ್ಥವೇ ಇಲ್ಲದಂತಾಗಿದೆ. ಪ್ರಬಂದ ಬರೆಯುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಹಾಗೂ ಹೊಸ ವಿಚಾರಗಳನ್ನು ಯೋಚಿಸಲು, ತಮ್ಮಲ್ಲೆ ಚರ್ಚಿಸಲು ಬಹಳ ಅನುಕೂಲ. ಸಂಸ್ಕೃತದಲ್ಲಿ ಪ್ರಬಂದ ಆಯೋಜಿಸಿರುವುದು ಬಹಳ ಸಂತೋಷ ತಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ.ವಿಜಯಕುಮಾರ್ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಲವಾರು ವರ್ಷಗಳಿಂದ ಈ ರೀತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುತ್ತಿದ್ದು, ಇಂದು ಕುಟುಂಬ ಪದ್ದತಿ ಎಂಬ ವಿಚಾರವಾಗಿ ಪ್ರಬಂದ ಆಯೋಜಸಿರುವುದು ಅತ್ಯುತ್ತಮವಾಗಿದೆ ಎಂದರು.

ಯೂತ್ ಹಾಸ್ಟೆಲ್ಸ್ ಛೇರ್ಮನ್ ವಾಗೇಶ್ ಮಾತನಾಡುತ್ತಾ, ಜೀವನ ಎಂದರೆ ಒಬ್ಬರಿಗೊಬ್ಬರು ಸಹಕರಿಸುತ್ತಾ ಬಾಳುವುದು. ನಾವಿಬ್ಬರು, ನಮಗೆ ಒಬ್ಬರು ಎಂಬ ಜೀವನ ಇಂದಿನ ಪರಿಸ್ಥಿತಿಯಲ್ಲಿ ಸರಿ ಎಂದು ಅನ್ನಿಸಬಹುದು. ಆದರೆ, ಒಟ್ಟಿಗೆ ಬಾಳಿ, ಜೀವನದ ಸವಿಯ ಅರಿವಿರುವವರು ಕೂಡು ಕುಟುಂಬದ ಸಂಬಂಧಗಳನ್ನು ಸ್ಮರಿಸಿತ್ತಾರೆ. ಇಂದು ಮೊಬೈಲ್ ಎಲ್ಲಾ ಸಂಬಂದಗಳಿಗೆ ಕೊಂಡಿಯಾಗಿದೆ. ಅದು ಯಂತ್ರಸಂಬಂದ. ಕೂಡಿ ಹಬ್ಬ, ಸಂತೋಷ ಕೂಟ ಆಯೋಜಿಸುವುದು ಸಂಬಂದ ಬೆಸೆಯುತ್ತದೆ ಎಂದರು.

ಮನು ಮೇಡಂ ಸ್ವಾಗತಿಸಿದರು, ಅ.ನ.ವಿಜಯೇಂದ್ರ ಇದುವರೆವಿಗೂ ಅಯೋಜಿಸಿರುವ ಕಾರ್ಯಕ್ರಗಳು ನಗರದ ಹಿರಿಯರು ನೀಡುತ್ತಿರುವ ದೇಣಿಗೆಯಿಂದ ನಡೆಯುತ್ತಿದೆ ಎಂದರು. ಹಲವಾರು ಕಾರ್ಯ ಕ್ರಮಗಳನ್ನು ಈ ಶ್ರಾವಣ ಮಾಸದಲ್ಲಿ ಮುವತ್ತೂಂದು ದಿನವೂ ವಿದ ವಿದವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ವಿಮಲರೇವರ್ಣಕರ್ ಮಂದಿಸಿದರು