ಶಿವಮೊಗ್ಗ, ಆ.06:
ಶಿವಮೊಗ್ಗ ವಿನೋಬನಗರದ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಶಿವಮೊಗ್ಗ ನಗರದ ಸಂಚಾರಿ ವ್ಯವಸ್ಥೆ ಕುರಿತಂತೆ ಹತ್ತು ಹಲವು ದೂರುಗಳ ಮನವಿಯನ್ನು ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ನೀಡಿದ್ದಾರೆ.

ಈಗ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಕುರಿತು ಮನವಿ ಸಲ್ಲಿಸಿದ್ದು ಆ ಮನವಿಯನ್ನು ಸ್ವೀಕರಿಸಿದ ಪೊಲೀಸ್ ಅಧಿಕಾರಿ ಸ್ಪಂದಿಸುವುದಾಗಿ ಹೇಳಿದ್ದಾರೆ.

ಶಿವಮೊಗ್ಗ ಹೊಳೆಹೊನ್ನೂರು ರಸ್ತೆಯ ಪುರಲೆ ಬಳಿ ಇರುವಂತಹ ಸುಬ್ಬಯ್ಯ ಹಾಸ್ಪಿಟಲ್ ಎದುರಿನ ಜಾಗದಲ್ಲಿ ನಿರಂತರವಾಗಿ

ಅಪಘಾತಗಳಾಗುತ್ತಿದೆ ಹಾಗಾಗಿ ವಾಹನಗಳ ನಿಲುಗಡೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಜೊತೆಗೆ ಶಿವಮೊಗ್ಗ ನಗರದೊಳಗಿನ ಜೆಪಿಎನ್ ರಸ್ತೆಗೆ ಹೊಂದಿಕೊಂಡಂತಹ ಮಾನಸ ನರ್ಸಿಂಗ್ ಹೋಮ್ ಬಳಿಯ ರಸ್ತೆ ಕೆಲವರ ಸ್ವತ್ತಾಗಿದೆ. ಅದು ದಿನ ಬಿಟ್ಟು ದಿನ ಒಂದೊಂದು ಕಡೆ ವಾಹನ ನಿಲ್ಲಿಸುವ ಕಾನೂನು ಮಾಡಿದ್ದರೂ ಸಹ ಆಸ್ಪತ್ರೆಯ ವಾಹನಗಳನ್ನು ಹಾಗೂ ಸೆಕ್ಯೂರಿಟಿಗಳನ್ನು ಬಳಸಿಕೊಂಡು ಅವರೇ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಆರೋಪ ಇವರದು.

ಕೂಡಲೇ ಸಂಚಾರಿ ವ್ಯವಸ್ಥೆಗೆ ಸಂಬಂಧಪಟ್ಟಂತೆ ಇರುವಂತಹ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಮಾನಸ ಹಾಗೂ ಸುಬ್ಬಯ್ಯ ಆಸ್ಪತ್ರೆ ಎದುರಿನ ಸಮಸ್ಯೆಯನ್ನು ಅತ್ಯಂತ ಶೀಘ್ರದಲ್ಲೇ ಬಗೆಹರಿಸುವ ಮೂಲಕ ಪ್ರಯಾಣಿಕರಿಗೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಪೋಷಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಆಗಬಾರದು ಎಂಬುದು ಇವರ ಒತ್ತಾಯ.

ಈ ಸಂದರ್ಭದಲ್ಲಿ ಸಂಘದ ಎಚ್.ಎಸ್. ಶರತ್ ಚಂದ್ರ, ಬಸವರಾಜ್, ಕಾಶಿಪುರ ಪ್ರವೀಣ್, ಫೋಟೋ ಧನಂಜಯ್, ಬಾಲಾಜಿ, ರವಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.