ಎ. ರವಿ, ಶಿವಮೊಗ್ಗ
ಶಿವಮೊಗ್ಗ :ಆ 07
ಅಧಿಕಾರವೊಂದಿದ್ದರೆ ಕೆಲವರಿಗೆ ಬರೋಬ್ಬರಿ ಅಹಂಕಾರ, ಧಿಮಾಕು. ನಾನು ಏನು ಬೇಕಾದ್ರು ಮಾಡಬಲ್ಲೆ ಎಂದು ಮೆರೆಯುವ ಕೆಲ ಅಧಿಕಾರಿಗಳನ್ನು ನಾವು ಕಂಡಿದ್ದೇವೆ. ಆದರೆ ಎಲ್ಲಾ ಇಲಾಖೆಗಳಲ್ಲಿ ನಗುಮೊಗದಲ್ಲೇ ಜನಸೇವೆ ಮಾಡುವ ಕೆಲ ಅಧಿಕಾರಿಗಳನ್ನು ನೋಡಿದ್ದೇವೆ. ಅದರಲ್ಲಿ ಶಿವಮೊಗ್ಗ ನಗರಪಾಲಿಕೆ ಕಂದಾಯ ವಿಭಾಗದ ಮೊದಲ ಜೋನ್ ವಿನೋಬನಗರದ ಮುಖ್ಯ ಕಂದಾಯಾಧಿಕಾರಿಯಾದ ನಾಗೇಂದ್ರ ಸಹ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ.ಇವರು ಪಾಲಿಕೆಯ ಕಂದಾಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅಂದಿನಿಂದ ಇಂದಿನವರೆಗೂ ಇವರ ಕೆಲಸದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಒಂದೊಳ್ಳೆ ಅಧಿಕಾರಿಯಾಗಿ ಗುರುತಿಸಿಕೊಂಡಿರುತ್ತಾರೆ


ನಗುಮೊಗದಿಂದ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ, ಗೌರವ ದಿಂದ ನಡೆದುಕೊಳ್ಳುವ ಅಧಿಕಾರಿಗಳ ಸಾಲಿನಲ್ಲಿ ಇವರನ್ನು ಸೇರಿಸಬಹುದು. ಇತ್ತೀಚೆಗೆ ಇಂತಹ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯಲ್ಲವೇ?

ಶಿವಮೊಗ್ಗ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇಂತಹ ಅಧಿಕಾರಿ ಇದ್ದಾರೆ. ಶಿಕ್ಷಕರ ಮಗನಾಗಿ ಹುಟ್ಟಿ ಬೆಳೆದ ನಾಗೇಂದ್ರಣ್ಣ ಅವರು ಇ- ಸ್ವತ್ತು – ಬಿ- ಖಾತೆ, ಇನ್ನಿತರ ಕೆಲಸಗಳಿಗೆ ಕಂದಾಯ ವಿಭಾಗಕ್ಕೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ಸರಳವಾಗಿ ಬೆರೆತು ಸಮಸ್ಸೆ ಬಗೆಹರಿಸಿದ್ದನ್ನು ಸಾಕಷ್ಟು ಜನ ಹೇಳುತ್ತಾರೆ.

ಈ ಹಿಂದೆ ಕಂದಾಯ ವಿಭಾಗದ ಕೆಲ ಅಧಿಕಾರಿಗಳ ವಿರುದ್ದ ಭಾರೀ ಅಕ್ರೋಶ ವ್ಯಕ್ತಪಡಿಸುತ್ತಿದ್ದಾಗಲೂ, ಸಾರ್ವಜನಿಕರಿಗೆ ವಿಶೇಷವಾಗಿ ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ ಮೊದಲು ನೆನಪಾಗುತ್ತಿದ್ದ ವ್ಯಕ್ತಿ ಎಂದರೇ ಕಂದಾಯ ವಿಭಾಗದ ಕಂದಾಯ ಅಧಿಕಾರಿ ನಾಗೇಂದ್ರಣ್ಣ ಮಾತ್ರ.
ಸಾರ್ವಜನಿಕರು ತಮ್ಮ ಕೆಲಸದ ಕಿರಿಕಿರಿಗೆ ಸಮಸ್ಯೆ ಹೇಳಲು ಬಂದಾಗ ಸ್ವತಃ ಕಂದಾಯ ಅಧಿಕಾರಿಯಾದ ನಾಗೇಂದ್ರಣ್ಣ ಕೂಡಲೇ ಜನರ ಸಮಸ್ಯೆ ಅಲಿಸಿ ಅ ಕೆಲಸಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳನ್ನು ತಮ್ಮ ಬಳಿ ಕರೆಸಿ ನಮಗೆ ಸರ್ಕಾರ ತಿಂಗಳು ತಿಂಗಳು ಸಂಬಳ ಎಣಿಸುವುದು ಸಾರ್ವಜನಿಕರಿಗೆ ಕಿರಿಕಿರಿ ಮಾಡಲು ಅಲ್ಲ. ಅವರ ಕೆಲಸ ಮಾಡಿಕೊಡಲು ಎಂದು ಅಲ್ಲಿನ ಅಧಿಕಾರಿಗಳಿಗೆ ಪ್ರೀತಿಯಿಂದ ಕೆಲವೊಮ್ಮೆ ಸಖತ್ ಕ್ಲಾಸ್ ತೆಗೆದುಕೊಂಡು ಸಾರ್ವಜನಿಕರಿಗೆ ಹಿರಿಯ ನಾಗರೀಕರಿಗೆ ಸಮಸ್ಯೆ ಮಾಡಬೇಡಿ ಸರಿಯಾದ ಸಮಯಕ್ಕೆ ಕಛೇರಿಗೆ ಬನ್ನಿ ಸರಿಯಾಗಿ ಕೆಲಸ ನಿರ್ವಹಿಸಿ.

ಸಾರ್ವಜನಿಕರಿಗೆ ಸರಿಯಾಗಿ ಸ್ವಂದಿಸಿ. ಅವರಿಗೆ ಸರಿಯಾಗಿ ಮಾಹಿತಿ ನೀಡಿ. ಅವರಿಂದ ಪ್ರೀತಿ ಗಳಿಸಿ ಹೊರತು ಅವರ ಶಾಪ ಪಡೆಯಬೇಡಿ ಎನ್ನುತ್ತಾರೆ.
ನಾಗರೀಕರಿಗೆ ಪದೇ ಪದೇ ಪದೇ ಕಛೇರಿಗೆ ಅಲೆದಾಡಿಸಬೇಡಿ ಎಂದು ನೌಕರರುಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಾರೆ.
ಹಾಗೂ ಪಾಲಿಕೆಗೆ ಬರುವ ಎಲ್ಲರೊಂದಿಗೂ ಕೂಡ ನಗುಮುಖದಿಂದ ಪ್ರೀತಿಯಿಂದ ಗೌರವದಿಂದ ಮಾತಾನಾಡುತ್ತಾ ಎಲ್ಲರೊಂದಿಗೂ ಬೆರೆಯುತ್ತಾ ಅಲ್ಲಿನ ಡಾಡಾ ಅಪರೇಟರ್ ಸೇರಿದಂತೆ ಅಧಿಕಾರಿಗಳು, ನೌಕರರು ಮಾಡುತಿದ್ದ ಸಣ್ಣ ಸಣ್ಣ ತಪ್ಪುಗಳಿಗೆ ಸರಿಯಾಗಿ ತಿದ್ದಿ ಬುದ್ದಿ ಹೇಳುತ್ತಾ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಜನರ ಕೈಗೆ ಸುಲಭವಾಗಿ ಸಿಗುವ ಅಧಿಕಾರಿ ಎಂದರೇ ನಾಗೇಂದ್ರಣ್ಣ ಮಾತ್ರ

ಈ ಕಾರಣದಿಂದ ಸಾರ್ವಜನಿಕರಿಗೆ ಇಂದಿಗೂ ಕೂಡ ಪಾಲಿಕೆಯ ಕಂದಾಯ ವಿಭಾಗದಲ್ಲಿ ನಗುಮುಖದ ಅಧಿಕಾರಿ ಸಾರ್ವಜನಿಕರ ಅಚ್ಚುಮೆಚ್ಚಿನ ಅಧಿಕಾರಿ ಎಂದು ನಾಗೇಂದ್ರಣ್ಣ ಪಾತ್ರರಾಗಿರುವುದು, ಪಾಲಿಕೆಯ ಕಂದಾಯ ವಿಭಾಗದಲ್ಲೆ ವಿಶೇಷವೇ ಹೌದು.