

ನೆಗಿಟೀವ್ ಥಿಂಕಿಂಗ್
ವಾರದ ಅಂಕಣ -56
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಜಗತ್ತಿನ ಮೂಲೆ ಮೂಲೆಗಳಲ್ಲಿ ಕಂಡುಬರುವ ಮಧ್ಯ ಸೇವನೆ ಎಷ್ಟು ಅವಾಂತರಗಳನ್ನು ಸೃಷ್ಟಿಸಿದೆ ಎಂದರೆ ನಮ್ಮತನವನ್ನು ನಾವು ಬಲಿ ಕೊಡಬೇಕಾಗಿದೆ. ಆರೋಗ್ಯ ಒಂದೆಡೆಯಾದರೆ, ಮತ್ತೊಂದು ಕಡೆ ಕಿರಿಕಿರಿಗಳಿಂದ ಹೊರಗೆ ಬರುವ ಪ್ರಯತ್ನ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ? ಹಾಗಾಗಿ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದಲ್ಲಿ ಸರ್ವರೋಗಕ್ಕೂ ಸಾರಾಯಿ ಮದ್ದು ಎಂಬ ಬಹುಜನರ ಮಾತನ್ನು ವಿಷಯವನ್ನಾಗಿ ತೆಗೆದುಕೊಳ್ಳಲಾಗಿದೆ.

ಜಗತ್ತಿನ ಶಕ್ತಿ ದೇವತೆಗಳು ಎಲ್ಲೆಲ್ಲಿದ್ದಾರೆ? ಎಷ್ಟು ಕಡೆ ಇದ್ದಾರೆ ಅವರ ಹೆಸರೇನು ಎಂದು ಹೇಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಒಂದಿಷ್ಟು ಹೆಸರನ್ನು ಹೇಳಬಲ್ಲೆವಷ್ಟೇ.
ಅಲ್ಲಲ್ಲಿ ಆಯಾ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಶಕ್ತಿ ದೇವತೆಯನ್ನು ಪೂಜಿಸುವ ಹಾಗೂ ಅದಕ್ಕೆ ಹೆಸರು ಕಟ್ಟುವ ಪದ್ಧತಿ ಈಗಲೂ ನಮ್ಮಲ್ಲಿ ಜೀವಂತವಾಗಿದೆ. ಆದರೆ ನಮ್ಮ ನೆಗೆಟಿವ್ ಥಿಂಕಿಂಗ್ ಅಂಕಣದ ಓದುಗರೊಬ್ಬರು ಒಂದು ವಿಶೇಷವಾದ ಮಾತು ಬರೆದುಕೊಟ್ಟಿದ್ದಾರೆ. ಅದು ಈ ಕೆಳಕಂಡಂತಿದೆ.
ಹೆಂಡದಮ್ಮ, ಸಾರಾಯಿ ಅಕ್ಕ
ರಮ್ಮಾಂಟಿ, ಚಿನ್ನಮ್ಮ ಬದಲಿಗೆ ಜಿನ್ನಮ್ಮ, ವಿಸ್ಕಿ ಅಂತ ಸಹೋದರಿ ಸೇರಿದಂತೆ ಎಲ್ಲ ಬಗೆಯ ಮದ್ಯಗಳನ್ನು ಅಮ್ಮನಿಗೆ ಅಂದರೆ ಶಕ್ತಿ ದೇವತೆಗೆ ಹೋಲಿಸಿದ್ದು ನಿಜಕ್ಕೂ ಒಂದು ಬಗೆಯ ವಿಚಿತ್ರ ಎನಿಸಿತು.
ಇಲ್ಲಿ ಕಲ್ಪನೆ ಮತ್ತು ಪರಿಕಲ್ಪನೆಯನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ಜಗತ್ತಿನ ‘ಸಾರಾಯಿ’ ಎಂಬ ಮಧ್ಯ, ಅದರಲ್ಲಿ ಕಾಣುವ ಬಗೆಗಳು ಈ ಜಗತ್ತನ್ನು ಒಂದು ಬಗೆಯಲ್ಲಿ ಆಳುತ್ತಿದೆ ಹಾಳು ಮಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಕಡೆ ನಿಯಂತ್ರಣ ಮೀರಿದಾಗ ಹಿಡಿತ ತಪ್ಪುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ತುಂಬೆ ಹೂವಿನ ದೇವರು, ನಿಂಬೆ ಹಣ್ಣಿನ ದೇವರು.., ಹೀಗೆ ಬಗೆ ಬಗೆಯಲ್ಲಿ ದೇವರನ್ನು ದೈವವನ್ನು ಹಾಗೂ ದೇವತೆಯನ್ನು ನಾವು ವಸ್ತು ಹಿಡಿದು ಪೂಜಿಸುವ ಪದ್ಧತಿ, ಈಗಲೂ ನಮ್ಮಲ್ಲಿ ಜೀವಂತವಾಗಿದೆ. ಕಿರಿಕಿರಿಯ ಈ ಬದುಕಿನಲ್ಲಿ ಒತ್ತಡದ ಜೀವನ ಹೇಗೆ ನಮ್ಮನ್ನು ಹಾಳು ಮಾಡುತ್ತಿದೆ. ಅದಕ್ಕೆ ಮುಕ್ತಿ ಅಥವಾ ಒಂದು ಹಂತದ ತಾತ್ಕಾಲಿಕ ಪರಿಹಾರವಾಗಿ ಕಾಣಿಸಿಕೊಳ್ಳುವ ಈ ಮಧ್ಯವ್ಯಸನ ಮಿತಿಮೀರಿದಾಗ ಆಗುವ ಅವಾಂತರ ಅಷ್ಟಿಷ್ಟಲ್ಲ.
ಮನಸ್ಸಿನ ಹಿಡಿತ ತಪ್ಪಿ ಅಂತಹ ವ್ಯಕ್ತಿಗಳಾಗುವುದು ಇಲ್ಲಿ ಆದರೂ ಸಹ ಅದಕ್ಕೆ ಪೂರಕವಾದ, ಪ್ರೇರಣೆ ನೀಡುವ ಜಂಜಾಟದ ಕ್ಷಣಗಳು ಇಂತಹ ಘಟನೆಗಳಿಗೆ ರಕ್ಷಣೆಯನ್ನು ನೀಡುತ್ತವೆ ಅಲ್ಲವೇ?
ಕನ್ನಡ ಚಲನಚಿತ್ರವೊಂದ ಹಾಡು ಇಲ್ಲಿ ನೆನಪಾಗುತ್ತದೆ.
ಸಾರಾಯಿ ಸೀಸೆಯಲ್ಲಿ ನನ್ನ ದೇವಿ ಕಾಣುವಳು.,
ಸುಮಬಾಣವೆ ಅವಳಾಗುತ್ತಾ ನನ್ನ ದೇವಿ ಸೇರಿದಳು..,
ಉಸಿರಾಟಕ್ಕೆ ವಿಷವಾಗುತಾ ನನ್ನ ದೇವಿ ಸೇರಿದಳು ಎಂಬ ಹಾಡು ಒಂದೆಡೆ ತನ್ನ ಪ್ರೀತಿ ಸೋತು ಹೋದ ಮಾನಸಿಕ ತುಮಲಗಳ ನಡುವೆ ಆತ ಹುಡುಕಿದ ಪರಿಹಾರದ ಮಾರ್ಗವಾಗಿ ಅಲ್ಲಿ ಸಾರಾಯಿಯಾಗಿತ್ತಲ್ಲವೇ?
ಅಂಕಣದಲ್ಲಿ ಯಾರನ್ನೂ ಮುಖ್ಯಪಾತ್ರದಾರಿಯನ್ನಾಗಿ ಮಾಡಿಕೊಂಡಿಲ್ಲ, ಸುಖಾ ಸುಮ್ಮನೇ ನೀವೇ ಪಾತ್ರದಾರಿಗಳೆಂದುಕೊಂಡ್ರೆ ನಾವು ಹೊಣೆಗಾರರಲ್ಲ- ಸಂ

ರವಿ ಕಾಣದ್ದನ್ನು ಕವಿ ಕಂಡ, ಆದರೆ ಕವಿ ಕಾಣದ್ದನ್ನು ಕುಡುಕ ಕಂಡ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಅತಿ ಹೆಚ್ಚು ಸತ್ಯದ ಘಟನೆಗಳು ಇಂತಹ ಘಟನೆಗಳ ನಡುವೆ ಸೇರಿಕೊಳ್ಳುತ್ತವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.
ಮತ್ತೊಂದು ವಿಶೇಷವೆಂದರೆ ನಾವು ಇಂದಿನ ಬದುಕನ್ನು ಹೇಗೆ ಅನುಭವಿಸುತ್ತಿದ್ದೇವೆ ಎಂದು ಯೋಚಿಸಿದಾಗ ಒಂದು ಬಗೆಯ ನಾವು ದಿನಬಳಕೆಯ ವಸ್ತುಗಳಾಗಿದ್ದೇವೆ ಅಷ್ಟೇ. ರೊಕ್ಕವಿದ್ದಾಗ ಮಾತ್ರ ನಮಗೆ ಬೆಂಬಲ, ಪ್ರೋತ್ಸಾಹ ಪುರಸ್ಕಾರ ಹಾಗೂ ಬಾಂಧವ್ಯದ ಬೆಸುಗೆ ಸಿಗುತ್ತದೆ. ರೊಕ್ಕ ಈ ಸಾರಾಯಿಯನ್ನು ನಿಲ್ಲಿಸುವಂತಹ ಜಗತ್ತಿನ ಮತ್ತೊಂದು ವಸ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನಿತ್ಯ ಬಳಕೆಯ ಉಪ್ಪು, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪುಗಳಂತೆ ನಮ್ಮ ಬದುಕು ನಿತ್ಯಕ್ಕೆ ಮಾತ್ರ ಸೀಮಿತವಾಗಿದೆ. ನಾಳೆ ಇರುತ್ತೇಯೊ ಇಲ್ಲವೋ ಗೊತ್ತಿಲ್ಲ. ಇದ್ದಾಗ ಮಾತ್ರ ನಾವು ಅವರಿಗೆ ಅಗತ್ಯ. ನಾವು ಎನ್ನುವ ಬದಲು ನಮ್ಮ ದುಡಿಮೆ ಮತ್ತು ಆದಾಯ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?

ಅಂತಯೇ ಇನ್ನೊಂದು ಮಾತು ಈ ಕೈಗಡ ಸಾಲದ ಒಂದಿಷ್ಟು ಮಾಹಿತಿಗಳನ್ನು ಓದುವುದರೊಬ್ಬರು ನೀಡಿದ್ದಾರೆ. ಸರ್ವರೋಗಕ್ಕೆ ಸಾರಾಯಿ ಮದ್ದಂತೆ ಹಾಗೆ ಕೆಲವರಿಗೆ ಕೈಗಡ ಸಾಲವೇ ವರವಂತೆ. ಏಕೆಂದರೆ ಅವರು ವಾಪಸ್ ಕೊಡುವ ಜಾಯಮಾನವರಲ್ಲ. ಆದರೆ ಮತ್ತೊಂದು ಕೊಡುವ ಕೈಯನ್ನು ಹುಡುಕುವವರು ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?